Home ಜಿಲ್ಲೆ ತರಬೇತಿ ಕಾರ್ಯಾಗಾರ

ತರಬೇತಿ ಕಾರ್ಯಾಗಾರ

ನವಲಗುಂದ,ಅ.೮: ನಾವು ಎಷ್ಟೇ ವಿದ್ಯಾವಂತರಿದ್ದರು ಇಂದಿನ ಯುಗದಲ್ಲಿ ನಮಗೆ ತರಬೇತಿ ಮುಖ್ಯ ತರಬೇತಿಯು ಮಾನವನನ್ನ ಪರಿಪೂರ್ಣವಾಗಿಸುತ್ತದೆ. ಕಲಿಕೆಗೆ ವಯಸ್ಸು ಮುಖ್ಯವಲ್ಲ ಮನಸ್ಸು ಮುಖ್ಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರು ಹಾಗೂ ಕೆ ಸಿ ಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.
ತಾಲ್ಲೂಕಿನ ಅರರೇಕುರಹಟ್ಟಿ ಗ್ರಾಮದ ವಿ ಎಸ್ ಎಸ್ ಬ್ಯಾಂಕಿನ ಸಭಾ ಭವನದಲ್ಲಿ ಜರುಗಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಜಿಲ್ಲಾ ಸಹಕಾರಿ ಯೂನಿಯನ್ ಧಾರವಾಡ, ಕೆ ಸಿ ಸಿ ಬ್ಯಾಂಕ ಧಾರವಾಡ,ಹಾಗೂ ಸಹಕಾರ ಇಲಾಖೆ ಇವುರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯಅತಿಥಿಯಾಗಿ ಬಾಗವಹಿಸಿ ಮಾತನಾಡಿದರು.


ಕಾರ್ಯಕ್ರಮವನ್ನ ಹಿರಿಯ ಸಹಕಾರಿ ದುರಿನ ಅಂದಾನಯ್ಯ ಹಿರೇಮಠ ಉದ್ಘಾಟಿಸಿದರು. ಉಮೇಶ್ ಹೇಬಸೂರ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರುಗಳಾದ ಚಂಬಣ್ಣ ಹಾಳದೋಟರ ಎಫ್ ಆರ್ ಕಲ್ಲನಗೌಡ್ರ್ ಶ್ರೀನಿವಾಸ್ ಬೂದಿಹಾಳ ಟಿ.ಎ.ಪಿ.ಸಿ.ಎಮ್.ಎಸ್ ಅಣ್ಣಿಗೇರಿ ಅಧ್ಯಕ್ಷ ಬಿ ಎಸ್ ಕುರಟ್ಟಿ, ನವಲಗುಂದ ಪಿ ಎಲ್ ಡಿ ಬ್ಯಾಂಕ ಅಧ್ಯಕ್ಷರಾದ ಗುರುಪ್ರಸಾದ್ ಪಾಟೀಲ, ನಿರ್ದೇಶಕರಾದ ನಾಗನಗೌಡ ಪಾಟೀಲ, ಜಿ.ಎನ್.ತೋಟದ, ಗುರಪ್ಪ ಅಕ್ಕಿ, ಹೋಳಿಯಪ್ಪ ಹೋಳಿಯನ್ನವರ, ಆರ್ ಬಿ ಭುಜಂಗಣ್ಣವರ, ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಕುಲಕರ್ಣಿ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ, ಜಿಲ್ಲಾ ಸಹಕಾರಿ ಯೂನಿಯನ್ ಸಿ ಇ ಓ ದಾನಪ್ಪಗೌಡ್ರ, ವ್ಯವಸ್ಥಾಪಕರಾದ ಮಹೇಶ ಗೊರಬಾಳ ಸೇರಿದಂತೆ ನವಲಗುಂದ ಹಾಗೂ ಅಣ್ಣಿಗೇರಿ ತಾಲೂ ಕಗಳ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರುಹಾಗೂ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.