Home ಜಿಲ್ಲೆ ಕಲಬುರಗಿ ಡಾ.ಅಂಬುಜಾ ಮಳಖೇಡಕರ ಅನುವಾದಿಸಿದ ಮೂರು ಕೃತಿ ಲೋಕಾರ್ಪಣೆ

ಡಾ.ಅಂಬುಜಾ ಮಳಖೇಡಕರ ಅನುವಾದಿಸಿದ ಮೂರು ಕೃತಿ ಲೋಕಾರ್ಪಣೆ

ಕಲಬುರಗಿ,ಆ.16-ಸುವನಾ ಪ್ರಕಾಶನದ ವತಿಯಿಂದ ಡಾ.ಅಂಬುಜಾ ಮಳಖೇಡಕರ ಅವರು ಅನುವಾದಿಸಿದ ಮೂರು ಮಹತ್ವದ ಪುಸ್ತಕಗಳ ಬಿಡುಗಡೆ ಸಮಾರಂಭವು ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ರಾಷ್ಟ್ರವೀರ ಸ್ವಾಮಿ ರಮಾನಂದತೀರ್ಥ ಸುನಂದಾ ಕುಲಕರ್ಣಿ ಅವರು ಇಂಗ್ಲಿಷ್ ಪುಸ್ತಕ ಕನ್ನಡ ಭಾಷೆಗೆ ರಾಮಗೋಪಾಲ ಭಾರತೀಯ ಅವರ ಹಿಂದಿ ಭಾಷೆಯ ಜನವರಿ 26 ಕನ್ನಡ ಭಾಷೆಗೆ, ಕಲಬುರಗಿಯ ಡಾ ಗುಬ್ಬಿ ಅವರ ಆತ್ಮ ಕವಚ ನನ್ನ ಜೀವನ ಚರಿತ್ರೆ ಕನ್ನಡದಿಂದ ಹಿಂದಿಗೆ ಅನುವಾದಿಸಿದ್ದಾರೆ.
ಸ್ವಾತಂತ್ರ್ಯೋತ್ಸವದ ಸಂಭ್ರಮದ ದಿನದಂದು ನಡೆದ ಈ ಸಾಹಿತ್ಯಿಕ ಕಾರ್ಯಕ್ರಮವು ಕನ್ನಡ ಸಾಹಿತ್ಯ ಲೋಕಕ್ಕೆ ವಿಭಿನ್ನ ಭಾಷೆಗಳಲ್ಲಿನ ಮಹತ್ವದ ಕೃತಿಗಳನ್ನು ಪರಿಚಯಿಸುವ ಪ್ರಯತ್ನಕ್ಕೆ ಸಾಕ್ಷಿಯಾಯಿತು ಎಂದು ಶಶಿಧರ್ ನರೇಂದ್ರ ಹೇಳಿದರು. ಅನುವಾದ ಸಾಹಿತ್ಯದ ಮೂಲಕ ವಿವಿಧ ಭಾಷೆ, ಸಂಸ್ಕøತಿ ಮತ್ತು ಚಿಂತನೆಗಳ ನಡುವೆ ಸೇತುವೆ ನಿರ್ಮಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಭಾಕರ್ ಜೋಶಿ ಅವರು ಹೇಳಿದರು. ವಾಸುದೇವ್ ಸೇಡಂ ಎಚ್ ಅವರು ಸ್ವಾಮಿ ರಮಾನಂದ ತೀರ್ಥ ಪುಸ್ತಕ ಪರಿಚಯಿಸಿದರು. ಡಾ. ಎಸ್ ಮಂಜುನಾಥ ಅವರು ಜನವರಿ 26 ಆತ್ಮಕವಚ ಪುಸ್ತಕಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ನೆರವೇರಿಸಿದರು. ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಡಾ. ಶಶಿಧರ ನರೇಂದ್ರ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸುವನಾ ಪ್ರಕಾಶನದ ಸ್ಮರಣೆಕೆ ಬಿಡುಗಡೆ ಮಾಡಿದರು. ಪ್ರಸಾದ್ ಅಷ್ಟಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾಕ್ಟರ್ ಎಸ್ ಎಸ್ ಗುಬ್ಬಿ ಸುನಂದಾ ಕುಲಕರ್ಣಿ, ಅವಿನಾಶ್ ಕುಲಕರಣಿ ,ಸುಮನ ಮಳಖೇಡಕರ, ನಂದಕಿಶೋರ ಮಳಖೇಡಕರ, ನಾರಾಯಣ ಜೋಶಿ, ಅನಿತಾ ಸುಬೇದಾರ, ಸುಮಂಗಲಾ ಚಕ್ರವರ್ತಿ, ಶಿವರಾಜ ಅಂಡಗಿ,ಸೇರಿದಂತೆ ಸಾಹಿತ್ಯಾಸಕ್ತರು, ಲೇಖಕರು, ಕಲಾವಿದರು, ಅಧ್ಯಾಪಕರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಸುವನಾ ಪ್ರಕಾಶನದ ಮೂಲಕ ವಿವಿಧ ಮಹತ್ವದ ಕೃತಿಗಳನ್ನು ಕನ್ನಡ ಓದುಗರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಡಾ. ಅಂಬುಜಾ ಮಳಖೇಡಕರ ಅವರ ಸಾಹಿತ್ಯಿಕ ಹಾಗೂ ಅನುವಾದ ಕ್ಷೇತ್ರದ ಪ್ರಯತ್ನವನ್ನು ಗಣ್ಯರು ಶ್ಲಾಘಿಸಿದರು. ಅನುವಾದವು ಕೇವಲ ಭಾಷಾಂತರವಲ್ಲ; ಅದು ಒಂದು ಸಂಸ್ಕೃತಿಯ ಚಿಂತನೆಗಳನ್ನು ಮತ್ತೊಂದು ಭಾಷೆಯ ಓದುಗರಿಗೆ ತಲುಪಿಸುವ ಸೃಜನಾತ್ಮಕ ಸೇತುವೆಯಾಗಿದೆ ಎಂದು ಡಾ. ಮಂಜುನಾಥ ಹೇಳಿದರು
ಮೂರು ಪುಸ್ತಕಗಳ ಬಿಡುಗಡೆಯೊಂದಿಗೆ ಕಾರ್ಯಕ್ರಮವು ಸಾಹಿತ್ಯಾಸಕ್ತರಲ್ಲಿ ವಿಶೇಷ ಆಸಕ್ತಿ ಮೂಡಿಸಿತು. ಕನ್ನಡ ಸಾಹಿತ್ಯದ ವಿಸ್ತಾರಕ್ಕೆ ಅನುವಾದ ಸಾಹಿತ್ಯದ ಕೊಡುಗೆ ಮಹತ್ವದ್ದಾಗಿದ್ದು, ಇಂತಹ ಪ್ರಯತ್ನಗಳು ಮುಂದುವರಿಯಬೇಕು ಎಂಬ ಆಶಯವನ್ನು ಗಣ್ಯರು ವ್ಯಕ್ತಪಡಿಸಿದರು.
ಕಾರ್ಯಕ್ರಮವು ಸಾಹಿತ್ಯ, ಸಂಸ್ಕೃತಿ ಮತ್ತು ಅನುವಾದ ಕ್ಷೇತ್ರದ ಅಭಿಮಾನಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.