
ಭಾಲ್ಕಿ:ಜೂ.2:ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕೋಣಿಯೊಂದರ ಬಾಗಿಲು, ಕಿಟಕಿ ಮುರಿದ ಕಳ್ಳರು ಆಟದ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಭಾನುವಾರ ನಡೆದಿದೆ.
ಒಂದು ಶಾಟ್ ಫುಟ್, ವಾಲಿಬಾಲ್ ನೆಟ್, ಎರಡು ವಾಲಿಬಾಲ್, ಕ್ರಿಕೆಟ್ ಬ್ಯಾಟ್ ಸೇರಿದಂತೆ ಇತರ ಸಾಮಗ್ರಿಗಳನ್ನು ಕಳುವು ಮಾಡಿದ್ದಾರೆ.
2025ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿಯೂ ನಮ್ಮ ಶಾಲೆಯಲ್ಲಿ ಕಳ್ಳತನ ನಡೆದಿದ್ದು ಪ್ಲೇಟ್, ಸ್ಟೋವ್, ಆಟದ ಸಾಮಗ್ರಿ ಸೇರಿದಂತೆ ಇತರ ವಸ್ತುಗಳನ್ನು ಕಳವು ಮಾಡಲಾಗಿತ್ತು ಎಂದು ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಪ್ಯಾಗೆ ತಿಳಿಸಿದ್ದಾರೆ.























