
ಕೋಲಾರ, ಅ. ೧- ರಾಜ್ಯದಲ್ಲಿ ಬಲಗೈ ಸಮುದಾಯದ ಉಪಜಾತಿಗಳೆಲ್ಲಾ ಸಂಘಟಿತರಾಗಿ ಛಲವಾದಿ ಸಂಗಮದಲ್ಲಿ ಗುರುತಿಸಿಕೊಳ್ಳಲು ಈ ಸಂಗಮವನ್ನು ರಚಿತ ಮಾಡುವಂತೆ ಹುಟ್ಟು ಹಾಕಲಾಗಿದೆ. ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಪರಿಚಿತರಾಗಿರುವ ಉಪಜಾತಿಗಳನ್ನು ಒಗ್ಗೂಡಿಸಲು ಈ ಸಂಗಮವನ್ನು ರಚಿಸಲಾಗಿದೆ. ಪಕ್ಷಾತೀತವಾಗಿ ಈ ಚಲವಾದಿ ಸಂಗಮದ ಸಂಘಟನೆ ಮಾಡಲಾಗಿದೆ ಎಂದು ರಾಜ್ಯ ಛಲವಾದಿ ಸಂಗಮದ ಅಧ್ಯಕ್ಷ ನವೀನ್ ಮಾನೆ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನವೀನ್ ಮಾನೆ ಅವರು ಮಾತನಾಡಿ, ಛಲವಾದಿ ಸಂಗಮವನ್ನು ರಾಜ್ಯಾದ್ಯಂತ ಸಂಘಟಿಸಲು ಪ್ರವಾಸ ಹಮ್ಮಿಕೊಂಡಿದೆ. ಬಲಗೈ ಸಮುದಾಯದಲ್ಲಿ ೧೦೧ ಉಪಜಾತಿಗಳಿವೆ. ಛಲವಾದಿ ಸಂಗಮವನ್ನು ಪ್ರತಿ ತಹಶೀಲಿನಲ್ಲಿ ಸಂಘಟಿಸಲು ೧೧ ಮಂದಿ ಜಿಲ್ಲಾಸಂಚಾಲಕರನ್ನು ನೇಮಿಸಲಾಗಿದೆಯೆಂದು ಹೇಳಿದರು. ಈ ಸಂಗಮದ ಸದಸ್ಯರು ರಾಜಕೀಯದಿಂದ ದೂರವಿರಬೇಕು. ಅವರು ಯಾವುದೇ ಚುನಾವಣೆಯಲ್ಲಿ ಭಾಗವಹಿಸಬಾರದು. ಈ ಸಂಗಮದಲ್ಲಿ ದಲಿತ ಚಳವಳಿಯ ಸಂಘಟನೆಯನ್ನು ಸೇರಿಸಿ ಸಮರ ಸೂರಿನಡಿ ಒಂದುಗೂಡಿಸಿ ಕೊಳ್ಳುವ ನಿಟ್ಟಿನಲ್ಲಿ ಕಳೆದ ೨ ತಿಂಗಳ ಹಿಂದೆ ಚಾಲನೆ ನೀಡಲಾಗಿದೆ ಎಂದರು.
ಜಿಲ್ಲಾ ಸಂಚಾಲಕರು ಎಲ್ಲಾ ತಹಶೀಲಿಗೆ ಭೇಟಿ ನೀಡಿ ಸಮಿತಿಗಳನ್ನು ರಚಿಸಬೇಕಾಗಿದೆ ಹಾಗೂ ಸದಸ್ಯತ್ವ ಅಭಿಯಾನ ನಡೆಸಬೇಕು. ನಂತರ, ವೀರಶೈವ ಮತ್ತು ಒಕ್ಕಲಿಗ ಸಮುದಾಯ ಮಾದರಿಯಲ್ಲಿ ಸಂಘಟಿಸಲು ಮುಖ್ಯ ಸಮಿತಿಯನ್ನು ಆಯ್ಕೆ ಮಾಡಲು ಚುನಾವಣೆಗಳನ್ನು ನಡೆಸಲಾಗುವುದು.
ಬಲಗೈ ಸಮುದಾಯದ ಕುಂದು ಕೊರತೆ ಗಳು, ಸರ್ಕಾರದ ಸೌಲಭ್ಯಗಳು, ನಮ್ಮ ಹಕ್ಕುಗಳಿಗಾಗಿ ಸಮರವನ್ನು ನಡೆಸುವುದು ಛಲವಾದಿ ಸಂಗಮದ ಮುಖ್ಯ ಧ್ಯೇಯವಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರಾಗಿ ಶ್ರೀನಿವಾಸಪ್ಪ, ನಾಗಪ್ಪ, ಚಲಪತಿ, ಎಸ್. ರವೀಂದ್ರ, ಅಂಬರೀಷ್, ಅಂಜನಪ್ಪ, ತಿಮ್ಮರಾಜು, ಬಿ. ಮೂರಳಿ, ವೆಂಕಟೇಶ್, ನರಸಿಂಹಮೂರ್ತಿ, ಮಂಜುನಾಥ್ ಸೇರಿದ ೧೧ ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಛಲವಾದಿ ಸಂಗಮದ ಪ್ರಧಾನ ಕಾರ್ಯದರ್ಶಿ ಪ್ರೊ. ನಾರಾಯಣಸ್ವಾಮಿ ಮಾತನಾಡಿ, ಈ ಸಂಘಟನೆಯು ಸ್ವತಂತ್ರವಾಗಿ, ರಾಜಕೀಯೇತರವಾಗಿ, ಎಲ್ಲಾ ಭಾಷೆಗಳನ್ನು ಒಳಗೊಂಡಂತೆ ಎಲ್ಲ ಉಪಜಾತಿಗಳನ್ನು ಒಂದೇ ವೇದಿಕೆಯಡಿ ಸಂಘಟಿಸುವ ಪ್ರಯತ್ನದಲ್ಲಿದೆ ಎಂದರು.
ಆನೇಕಲ್ ಪಟಾಪಟ್ ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಕಳೆದ ಮೂರುವರೆ ವರ್ಷದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿರೋಧವಾಗಿ ಕಾರ್ಯನೇರವೇರಿಸಿದ ಘಟನೆಯನ್ನು ಖಂಡಿಸಿ, ಸರ್ಕಾರದ ವಿರುದ್ಧ ಪ್ರಕ್ರಿಯೆ ಬೇಕು ಎಂದು ಮನವಿ ಮಾಡಿದರು.
ಪಾಣಚಗ್ಯಾರೆಂಟಿ ಯೋಜನೆಗಳ ಸೌಲಭ್ಯಗಳಿಂದ ಬಲಗೈ ಸಮುದಾಯ ವನ್ನು ವಂಚಿಸುತ್ತಿರುವುದು ಹಾಗೂ ಎಸ್.ಸಿ.ಟಿ.ಎಸ್.ಪಿ. ಯೋಜನೆಯ ಅನುದಾನ ದುರ್ಬಳಕೆ ಮಾಡಿರುವ ಸ್ಥಿತಿಯನ್ನು ಖಂಡಿಸಿದರು.
ಹಾಸ್ಟೆಲ್ ಶುಲ್ಕದ ಉಳಿತಾಯಕ್ಕಾಗಿ ಸರ್ಕಾರವು ಉನ್ನತ ಶಿಕ್ಷಣದ ವಿದೇಶ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ನೀಡಬೇಕು, ಆದರೆ ಆಸ್ತಿ ಮಾರಿ ಬಡವರ ಪೋಷಕರು ಬೀದಿ ಪಾಲಾಗುವಂತಾಗಿದೆ ಎಂದು ಸರ್ಕಾರಕ್ಕೆ ಆಗ್ರಹ ಮಾಡಿದಿದ್ದಾರೆ.
ಪ್ರಶ್ನೆಗೆ ಸಂಬಂಧಿಸಿದಂತೆ ಆಟ್ರಾಸಿಟಿ ಕಾನೂನುಗಳನ್ನು ದುರ್ಬಳಸೆ ಮಾಡಬಾರದು; ಸಮಾಜದಲ್ಲಿ ಸಮಾನತೆ, ಸಾಮರಸ್ಯ ಉಳಿಸಲು ಜಾಗೃತಿ ಆಂದೋಲನಗಳನ್ನು ಆಯೋಜಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಕಾನೂನು ದುರ್ಬಳಕೆಯನ್ನು ಖಂಡಿಸಿ, ಛಲವಾದಿ ಸಂಗಮದಿಂದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ಮಹಾ ಸಂಗಮದ ವೆಂಕಟಚಲಪತಿ, ಮಾರ್ಜೇನಹಳ್ಳಿ ಬಾಬು, ಪ್ರತಾಪ್, ಮಲ್ಲಸಂದ್ರ ಶ್ರೀನಿವಾಸ್, ಕರವೇ ಶೇಖರ್, ವೆಂಕಟಚಲಪತಿ, ಕಿರಣ್ ಉಪಸ್ಥಿತರಿದ್ದರು.























