
ವಿಜಯಪುರ, ಜೂ. 15: ವೇದೋಪನಿಷತ್ತುಗಳು ಭಾರತೀಯ ಸಂಸ್ಕøತಿಯ ಮೂಲ
ಬೇರು. ಹಾಗೆ ಮಹಾಲಿಂಗರ ಅನುಭವಾಮೃತವು ಭಗವದ್ಗೀತೆಗೆ ಹಿಡಿದ
ಕೈಗನ್ನಡಿಯಾಗಿದೆ. ಯೋಗ ಮತ್ತು ಆಧ್ಯಾತ್ಮಿಕತೆಯಲ್ಲಿ ಮನಸ್ಸು, ಬುದ್ಧಿ ಹಾಗೂ ಅಹಂಕಾರಗಳನ್ನು ಸಂಪೂರ್ಣವಾಗಿ ಮೀರಿ, ಆಲೋಚನೆಗಳೇ ಇಲ್ಲದ ದೈವಿಕ
ಪ್ರಜ್ಞೆಯ ಪರಮೋಚ್ಚ ಸ್ಥಿತಿಯನ್ನು ತಲುಪುವುದೇ ನಿರ್ವಿಕಲ್ಪ ಸಮಾಧಿಯಾಗಿದೆ. ಇದು ಆತ್ಮವು ಆನಂದದಿಂದ ವಿಹರಿಸುವ ಅವಸ್ಥೆ, ಶಾಂತಿಯ ಸ್ಥಿತಿಯಾಗಿದೆ ಎಂದು
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ನಗರದ ಜ್ಞಾನ ಯೋಗಾಶ್ರಮದಲ್ಲಿ ನಡೆದ ಮಹಾಲಿಂಗರಂಗರ
ಅನುಭವಾಮೃತದ ಆರನೇ ಅಧ್ಯಾಯವಾದ ಸಪ್ತ ಭೂಮಿಕಿಗಳ ಅಭ್ಯಾಸದ ನಿರ್ವಿಕಲ್ಪ ಸಮಾಧಿ ಎಂಬ ವಿಷಯದ ಕುರಿತಾಗಿ ಶಿಲ್ಪಾ ಭಸ್ಮೆಯವರು ಉಪನ್ಯಾಸವನ್ನು
ನೀಡಿದರು.
ಒಂದೊಂದು ಘಟನೆಯು ಕೂಡ ಮನುಷ್ಯನನ್ನು ಜ್ಞಾನಿಯಾಗಿಸುತ್ತದೆ
ಸತ್ಸಂಗ ಇದ್ದಲ್ಲಿ ಮನಸ್ಸು ಸ್ವಚ್ಛವಾಗುವುದು. ಮನಸ್ಸು ಸ್ವಚ್ಚವಿದ್ದಲ್ಲಿ ದೇವರು ನೆಲೆಸುವನು. ಧೀರನಾದ ಗುರುವಿನ ದರುಶನದಿಂದ, ಪರಿಣಾಮದಿಂದ ವ್ಯಕ್ತಿತ್ವದ
ಮೇಲೆ ಬೆಳಕು ಚೆಲ್ಲಲು ಸಾಧ್ಯ. ನಮ್ಮ ಮನಸ್ಸನ್ನು ಯೋಗಭ್ಯಾಸದಿಂದ ದೂರ
ಮಾಡಿ ಚಿನ್ಮಯ ರೂಪನಾದ ಆತ್ಮನಲ್ಲಿ ಮನಸ್ಸನ್ನು ಲೀನಗೊಳಿಸುವುದೇ ನಿರ್ವಿಕಲ್ಪ ಸಮಾಧಿ ಆಗಿದೆ. ಹಾಗೆಯೇ ಧೀರನಾದ ಗುರುವಿನ ದಯೆಯಿಂದ ಸಂಸಾರವೆಂಬ ಸಾಗರವನ್ನು ದಾಟಿ ಸುಖವೇ ಮೂರ್ತಿಗೊಂಡಂತ ಸಹಜ ಅದ್ವೈತದೊಳಗೆ ಲೀನವಾಗಿ
ಆನಂದ ಪಡುವುದು ಈ ಬದುಕಿನ ಅರ್ಥ. ಗುರು ಶಿಷ್ಯರ ಸಂಬಂಧ, ಗುರುಭಕ್ತಿ,
ದೈವ ಭಕ್ತಿಗಳ ಐಕ್ಯವನ್ನು ತಿಳಿಯಲು ಅಖಂಡ ವಸ್ತು ಒಂದೇ ಆಗುವುದೇ
ಹೊರತು ಭೇದವೇನು ತೋರುವುದಿಲ್ಲ ಎಂದು ಹೇಳಿದರು.
ಕೇನೋಪನಿಷತ್ತಿನ
ದೇವತೆಗಳು ಅವತರಿಸಿದ ಕಥೆ, ಬುದ್ಧರ ಕಾರುಣ್ಯ ಪಠಾಚಾರ ಸನ್ಯಾಸಿನಿಥಿಚಿ
ಕಥೆ,ರಾಮಾಯಣ ಪುಣ್ಯಕಾಲದ ಕಥೆಯ ದೃಷ್ಟಾಂತಗಳನ್ನು ನೀಡುವುದರ
ಮೂಲಕ ವಿವರಣೆಯನ್ನು ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಸಿ ನಾಗಠಾಣ ಸ್ವಾಗತಿಸಿದರು.
ಪೂಜ್ಯರಾದ ಮಾಧವಾನಂದ ಸ್ವಾಮೀಜಿಯವರು ಮುಂತಾದವರು ಉಪಸ್ಥಿತರಿದ್ದರು.


























