Home ಜಿಲ್ಲೆ ತುಮಕೂರು ವೈಭವದ ಹಳೆಯೂರು ಆಂಜನೇಯಸ್ವಾಮಿ ಏಕಾದಶಿ ಜಾತ್ರೆ

ವೈಭವದ ಹಳೆಯೂರು ಆಂಜನೇಯಸ್ವಾಮಿ ಏಕಾದಶಿ ಜಾತ್ರೆ

ಚಿಕ್ಕನಾಯಕನಹಳ್ಳಿ, ಜು. ೨೮- ಹಳೆಯೂರು ಆಂಜನೇಯಸ್ವಾಮಿ ಏಕಾದಶಿ ಜಾತ್ರಾ ಮಹೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.


ಪಟ್ಟಣದಲ್ಲಿ ಇತಿಹಾಸ ಹೊಂದಿರುವ ಹಳೆಯೂರು ಆಂಜನೇಯಸ್ವಾಮಿ ಪ್ರಸಿದ್ದಿ ಹೊಂದಿದೆ. ದೇವಾಲಯ ಮುಜರಾಯಿಗೆ ಸೇರಿದ್ದು, ಪ್ರತಿ ವರ್ಷ ಆಷಾಢಮಾಸದಲ್ಲಿ ಮೂರು ದಿನದ ಅದ್ದೂರಿ ಜಾತ್ರೆ ನಡೆದುಕೊಂಡು ಬಂದಿದೆ. ಆಂಜನೇಯಸ್ವಾಮಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಪ್ರಾರಂಭವಾಯಿತು. ಗೊರವಯ್ಯಗಳಿಗೆ ಹಾಗೂ ಕೆಂಚರಾಯಗಳಿಗೆ ರಸಾಯನದ ಮಣೆ ಸೇವೆಯೊಂದಿಗೆ ದೇವಾಲಯದ ಸುತ್ತ ಹಾಗೂ ಊರಿನ ರಾಜ ಬೀದಿಗಳಲ್ಲಿ ಭಕ್ತರಿಂದ ನಡೆದು ನಂತರ ದೇವಾಲಯ ಸೇರಿತು..


ನಂತರ ದೇವಾಲಯದಿಂದ ಆಂಜನೇಯ ದೇವರನ್ನು ವಿಪ್ರರು ಮಂತ್ರ ಪುಪ್ಪದಿಂದ ಕರೆತಂದು ರಥದ ಮೇಲೆ ಕೂರಿಸಲಾಯಿತು. ರಥ ಪೂಜಾನುಷ್ಠಾನ ಆದನಂತರ ಬ್ರಹ್ಮರಥೋತ್ಸವಕ್ಕೆ ಶಾಸಕ ಸಿ.ಬಿ.ಸುರೇಶ್‌ಬಾಬು, ತಹಶೀಲ್ದಾರ್ ಮಮತಾ ಮುಜುರಾಯಿ ಶಿಷ್ಠಾಚಾರದಲ್ಲಿ ಚಾಲನೆ ನೀಡಿದರು.


ಈ ಜಾತ್ರೆಯ ವಿಶೇಷವೆಂದರೆ ದೇವರ ಸೇವೆಗೆ ನವ ವಿವಾಹಿತ ಜೋಡಿಗಳು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿ ರಥಕ್ಕೆ ಬಾಳೆಹಣ್ಣು ಎಸೆಯುವ ಪದ್ದತಿ ರೂಢಿಯಾಗಿ ಬಂದಿದೆ. ದಿವ್ಯ ಜ್ಯೋತಿ ಹವ್ಯಾಸಿ ಕಲಾಸಘದಿಂದ ತೇರಿನ ಮದ್ಯ ಕಳಶಕ್ಕೆ ಬಾಳೆಹಣ್ಣು ಎಸೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಸಹಸ್ರಾರು ಭಕ್ತರು ಬ್ರಹ್ಮರಥೋತ್ಸವದಲ್ಲಿ ಭಾಗಿಯಾಗಿದ್ದರು. ಶ್ರೀ ಅನ್ನಪೂರ್ಣೆಶ್ವರಿ ಕಲಾ ಸಂಘದಿಂದ ರಾಜ್ಯ ಮಟ್ಟದ ಕರೋಕಿ (ಗಾಯನ) ಸ್ಪರ್ಧೆ ಏರ್ಪಡಿಸಲಾಗಿತ್ತು.


ತಾಲ್ಲೂಕು ಕ್ರಿಡಾಂಗಣದಲ್ಲಿ ಶ್ರೀಮಾರುತಿ ವ್ಯಾಯಾಮ ಶಾಲೆ ವತಿಯಿಂದ ರಾಜ್ಯ ಮಟ್ಟದ ಜಿದ್ದಾಜಿದ್ದಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಕನ್ನಡ ಸಂಘ ವೇದಿಕೆಯಲ್ಲಿ ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ ನವ ದಂಪತಿಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತು.