Home ಮುಖಪುಟ ಸುದ್ದಿ ಬರ ಘೋಷಣೆಯಲ್ಲೂ ಸರ್ಕಾರ ಚೌಕಾಸಿ

ಬರ ಘೋಷಣೆಯಲ್ಲೂ ಸರ್ಕಾರ ಚೌಕಾಸಿ

ಅಶೋಕ್ ಕಿಡಿ
ಬೆಂಗಳೂರು, ಸೆ. ೭-
ಮುದ್ದೇಬಿಹಾಳ ಕಾಂಗ್ರೆಸ್ ಶಾಸಕರಾದ ಸಿ.ಎಸ್. ನಾಡಗೌಡ ಅವರೇ ತಮ್ಮ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಕೂರುವುದಾಗಿ ಎಚ್ಚರಿಕೆ ನೀಡುತ್ತಿರುವುದು ಈ ಸರ್ಕಾರದ ರೈತ ವಿರೋಧಿ ಧೋರಣೆಗೆ ಅತಿದೊಡ್ಡ ಸಾಕ್ಷಿ ಇಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.


ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ ೧೦೧ ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ ದಿನವೇ ನಾನು ಮುಖ್ಯಮಂತ್ರಿ ಶಿವಕುಮಾರ್ ಅವರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದೆ. ರಾಜ್ಯದ ೧೭೫ ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದೆ, ನಾನೇ ಸ್ವತಃ ಪ್ರವಾಸ ಮಾಡಿ ಭೀಕರ ಬರ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ ಬಂದಿದ್ದೇನೆ ಎಂದು ಪತ್ರ ಕೂಡ ಬರೆದಿದ್ದೆ.


ಆದರೆ ಭ್ರಷ್ಟಾಚಾರ, ಅವೈಜ್ಞಾನಿಕ ಯೋಜನೆಗಳ ಹೆಸರಿನಲ್ಲಿ ಖಜಾನೆ ಖಾಲಿ ಮಾಡಿ ಸಂಪೂರ್ಣ ದಿವಾಳಿಯಾಗಿರುವ ಈ ದರಿದ್ರ ಕಾಂಗ್ರೆಸ್ ಸರ್ಕಾರ, ಬರ ಘೋಷಣೆಯಲ್ಲೂ ಚೌಕಾಸಿ ಮಾಡುತ್ತಾ ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಎಂದು ದೂರಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್ ಅಶೋಕ್
ಹುಟ್ಟಿನಿಂದಲೇ ನಾನು ಕೃಷಿಕ ಎಂದು ಕರೆದುಕೊಳ್ಳುವ ಮುಖ್ಯಮಂತ್ರಿಗಳಿಗೆ ರೈತರ ಸಂಕಷ್ಟದ ಅರಿವಾಗಲಿ, ಕೃಷಿ ಕ್ಷೇತ್ರದ ಬಗ್ಗೆ ಕನಿಷ್ಠ ಕಾಳಜಿಯಾಗಲಿ ಇಲ್ಲ. ಎಂದು ವಾಗ್ದಾಳಿ ನಡೆಸಿದ್ದಾರೆ


ತಕ್ಷಣವೇ ಮುದ್ದೇಬಿಹಾಳ ಸೇರಿದಂತೆ ರಾಜ್ಯದ ೧೭೫ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು.ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ೫,೦೦೦ ಕೋಟಿ ವಿಕೋಪ ಪರಿಹಾರ ನಿಧಿಯನ್ನು ತಕ್ಷಣ ಬಿಡುಗಡೆ ಮಾಡಬೇಕು.


ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನಿಗೆ ಎಕರೆಗೆ ೫೦,೦೦೦ ತುರ್ತು ಪರಿಹಾರ ಒದಗಿಸಬೇಕು. ಎಂದು ಆರ್ ಅಶೋಕ್ ಆಗ್ರಹಿಸಿದ್ದಾರೆ
ಇನ್ನೂ ತಡಮಾಡಿದರೆ ಅನ್ನದಾತರ ಶಾಪ ಮತ್ತು ಕಣ್ಣೀರಿನಲ್ಲಿ ಈ ಕಾಂಗ್ರೆಸ್ ಸರ್ಕಾರ ಕೊಚ್ಚಿಹೋಗುವುದು ನಿಶ್ಚಿತ ಎಂದು ಕಿಡಿಕಾರಿದ್ದಾರೆ.