
ಕಲಬುರಗಿ, ಆ.2: ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ದುಶ್ಚಟಗಳು ಹಾಗೂ ಡಿಜಿಟಲ್ ತಂತ್ರಜ್ಞಾನದ ದುರ್ಬಳಕೆಯಿಂದ ದೂರವಿದ್ದು, ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಅವರು ಕರೆ ನೀಡಿದ್ದಾರೆ.
ಶನಿವಾರ ಕಲಬುರಗಿ ನಗರದ ಆದರ್ಶ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಇಲಾಖೆ, ಆರೋಗ್ಯ ಇಲಾಖೆ, ಜಿಮ್ಸ್ ಆಸ್ಪತ್ರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಪ್ರಯುಕ್ತ ‘ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯವನ್ನು ಹಾಗೂ ಕಲಬುರಗಿ ನಗರವನ್ನು ಮಾದಕ ವಸ್ತು ಮುಕ್ತಗೊಳಿಸಲು ಪೆÇಲೀಸ್ ಇಲಾಖೆಯು ‘ಆಪರೇಷನ್ ರೈಸ್ (ಖISಇ – ಖeಜಿuse, Iಟಿಜಿoಡಿm, Suಠಿಠಿoಡಿಣ, ಇಟimiಟಿಚಿಣe)’ ಮತ್ತು ‘ಬೇಡ ಬ್ರೋ’ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಬರೀ ಪೆÇಲೀಸ್ ಇಲಾಖೆಯಿಂದಲೇ ಮಾದಕ ವಸ್ತುಗಳ ನಿರ್ಮೂಲನೆ ಸಾಧ್ಯವಿಲ್ಲ; ಇದಕ್ಕೆ ಯುವಜನತೆ, ಸಮುದಾಯ ಹಾಗೂ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನಚಾದ ಇಂದು ವ್ಯಸನ ಮುಕ್ತ ದಿನಾಚರಣೆ ರಾಜ್ಯದಾದ್ಯಂತ ಅಚರಿಸಲಾಗುತ್ತಿದೆ. ಶ್ರೀ ಮಹಾಂತ ಶಿವಯೋಗಿಗಳು ಕೇವಲ ಆಧ್ಯಾತ್ಮಿಕ ಜೀವಿ ಮಾತ್ರವಲ್ಲದೆ ಸಮಾಜ ಸುಧಾರಕರಾಗಿದ್ದರು. ದುಶ್ಚಟಗಳಿಂದ ವ್ಯಕ್ತಿ, ಕುಟುಂಬ ಹಾಗೂ ದೇಶದ ಮೇಲಾಗುವ ದುಷ್ಟ ಪರಿಣಾಮಗಳ ವಿರುದ್ಧ ಅವರು ಅಂದೇ ಹೋರಾಡಿದ್ದರು. ಇಂದಿನ ಸಂದರ್ಭದಲ್ಲೂ ಅವರ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ. ಅಮದಿಕಿಂತಲು ಇಂದು ದುಶ್ಚಟದಿಂದ ಯುವ ಸಮುಹವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್, ಸೋಶಿಯಲ್ ಮೀಡಿಯಾ ಹಾಗೂ ಒಟಿಟಿ ಅಡಿಕ್ಷನ್ (ಡಿಜಿಟಲ್ ಟಾಕ್ಸಿಸಿಟಿ) ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಧಕ್ಕೆಯಾಗುತ್ತಿದೆ. ಇದರೊಂದಿಗೆ ತಂಬಾಕು, ಮದ್ಯಪಾನ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ಯುವಜನತೆ ತಮ್ಮ ಅಮೂಲ್ಯ ಭವಿಷ್ಯವನ್ನು ಹಾಳುಮಾಡಿಕೊಳ್ಳದರು. ವಿದ್ಯಾರ್ಥಿಗಳು ಕೇವಲ ತಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಶಕ್ತಿಯಾಗುವ ಪ್ರತಿಭೆಯನ್ನು ಹೊಂದಿದ್ದಾರೆ. ಮಾದಕ ವಸ್ತುಗಳ ವಿರುದ್ಧ ‘ತಡೆಗಟ್ಟುವಿಕೆ (Pಡಿeveಟಿಣioಟಿ), ಪತ್ತೆ ಹಚ್ಚುವಿಕೆ (ಆeಣeಛಿಣioಟಿ) ಮತ್ತು ಪುನರ್ವಸತಿ (ಖehಚಿbiಟiಣಚಿಣioಟಿ)’ ಎಂಬ ತ್ರಿಕೋನ ಸೂತ್ರದಡಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವ್ಯಸನಮುಕ್ತ ಸಮಾಜದ ರಾಯಭಾರಿಯಾಗಬೇಕು ಎಂದು ಆಯುಕ್ತರು ಕರೆ ನೀಡಿದಲ್ಲದೆ ಇನ್ನು ಯಾವುದೇ ಸ್ಥಳದಲ್ಲಿ ಮಾದಕ ವಸ್ತುಗಳ ಸೇವನೆ ಅಥವಾ ಮಾರಾಟದಂತಹ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.
3 ವರ್ಷದಲ್ಲಿ 700 ಕೇಸ್
ಕಲಬುರಗಿಯಲ್ಲಿ ಕಳೆದ 3 ವರ್ಷಗಳಲ್ಲಿ ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ 700ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಹಿಂದೆ ಮಾರಾಟಗಾರರು ಮೇಲೆ ಕ್ರಮ ವಹಿಸಲಾಗುತ್ತಿತ್ತು. ಇನ್ಮುಂದೆ ಮಾದಕ ವಸ್ತುಗಳನ್ನು ಸೇವನೆ ಮಾಡುವವರ ಮೇಲೆಯೂ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ಪೆÇಲೀಸ್ ಅಯುಕ್ತ ಡಾ.ಎಸ್.ಡಿ.ಶರಣಪ್ಪ ಎಚ್ಚರಿಸಿದರು.
ಯುವಜನರು ವ್ಯಸನಮುಕ್ತ ಜೀವನ ರೂಪಿಸಿಕೊಳ್ಳಲಿ:
ಯುವ ವಯಸ್ಸಿನಲ್ಲಿ ಮೆದುಳು ಅತ್ಯಂತ ಚುರುಕಾಗಿದ್ದು, ಅದನ್ನು ಸರಿಯಾದ ಹಾದಿಯಲ್ಲಿ ತರಬೇತಿಗೊಳಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಆದರೆ ಅದೇ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾದರೆ ಭವಿಷ್ಯ ಹಾಳಾಗುತ್ತದೆ ಎಂದು ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮನೋವೈದ್ಯ ಡಾ. ಪ್ರಭು ಕಿರಣ್ ಕಳವಳ ವ್ಯಕ್ತಪಡಿಸಿದರು.
ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು ನಮ್ಮ ಮೆದುಳು ಅತ್ಯಂತ ಡೈನಮಿಕ್ (ಚುರುಕು) ಹಾಗೂ ಪ್ಲಾಸ್ಟಿಸಿಟಿ ಹೊಂದಿರುವ ಅಂಗ. ನಾವು ಅದಕ್ಕೆ ಒಳ್ಳೆಯ ವಿಚಾರಗಳನ್ನು ನೀಡಿದರೆ ಒಳ್ಳೆಯದನ್ನು, ಕೆಟ್ಟ ವಿಚಾರಗಳನ್ನು ನೀಡಿದರೆ ಕೆಟ್ಟದ್ದನ್ನೇ ನೀಡುತ್ತದೆ. ಯುವ ವಯಸ್ಸಿನಲ್ಲಿ ಮೆದುಳನ್ನು ಸನ್ಮಾರ್ಗಕ್ಕೆ ತರುವುದು ಅತ್ಯಂತ ಸುಲಭ.
ಆರಂಭದಲ್ಲಿ ತಮಾμÉಗೆ ಅಥವಾ ಕುತೂಹಲಕ್ಕೆ ಶುರುವಾಗುವ ಸ್ಮೋಕಿಂಗ್, ಆಲ್ಕೋಹಾಲ್ ಮತ್ತು ಡ್ರಗ್ಸ್ ಚಟಗಳು ಕ್ರಮೇಣ ಮನುಷ್ಯನನ್ನು ನಿಯಂತ್ರಿಸಲು ಶುರುಮಾಡುತ್ತವೆ. ಚಟಕ್ಕೆ ಹಣದ ಕೊರತೆಯಾದಾಗ ಯುವಜನರು ಕಳವಿನಂತಹ ಕಾನೂನುಬಾಹಿರ ಆಟೋಮ್ಯಾಟಿಕ್ ಅಪರಾಧ ಕೃತ್ಯಗಳಿಗೆ ಇಳಿಯುತ್ತಾರೆ.
ಮೊಬೈಲ್ ಗೇಮ್‍ಗಳು, ಸಾಮಾಜಿಕ ಜಾಲತಾಣಗಳು ಹಾಗೂ ಮಾದಕ ದ್ರವ್ಯಗಳು ಮೆದುಳಿನಲ್ಲಿ ‘ಡೋಪಮಿನ್’ ಎಂಬ ಹಾರ್ಮೋನ್ ಅನ್ನು ತಾತ್ಕಾಲಿಕವಾಗಿ ಹೆಚ್ಚಿಸಿ ಕೃತಕ ಆನಂದ (ಊigh) ನೀಡುತ್ತವೆ. ಇದು ಯುವಜನರನ್ನು ಶಾರ್ಟ್‍ಕಟ್‍ಗಳತ್ತ ಸೆಳೆದು, ಓದು-ಬರಹ ಹಾಗೂ ದೈಹಿಕ ಶ್ರಮದಿಂದ ದೂರ ತಳ್ಳುತ್ತದೆ. ದುಶ್ಚಟಗಳಿಗೆ ಬಿದ್ದವರು “ನಾವು ಕೆಟ್ಟವರು, ವೀಕ್” ಎಂದು ನಾಚಿಕೆಯಿಂದ ಮುಚ್ಚಿಡಬಾರದು. ಬದಲಾಗಿ, ತಮಗೆ ತೊಂದರೆಯಾಗಿದೆ ಎಂಬುದನ್ನು ಒಪ್ಪಿಕೊಂಡು ಶಿಕ್ಷಕರು, ಪೆÇೀಷಕರು, ಕೌನ್ಸಿಲರ್ ಅಥವಾ ಮನೋವೈದ್ಯರ ಸಹಾಯ ಪಡೆಯಬೇಕು. “ನೆರವು ಪಡೆಯುವುದು ಎಂದಿಗೂ ದೌರ್ಬಲ್ಯವಲ್ಲ” ಎಂದು ಡಾ. ಪ್ರಭು ಕಿರಣ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯೋಜಕರಾದ ಸುಜಾತಾ ಪಾಟೀಲ ಅವರು ವ್ಯಸನ ತ್ಯಜಿಸುವ ಮತ್ತು ಅರಿವು ಮೂಡಿಸುವ ಪ್ರತಿಜ್ಞೆ ವಿಧಿ ಬೋಧಿಸಿದರು. ಜಿಲ್ಲಾ ಮಾನಸಿಕ ಕಾರ್ಯಕ್ರಮ ಸಾಮಾಜಿಕ ಕಾರ್ಯಕರ್ತ ನಾಗರಾಜ ಬಿರಾದಾರ ಅವರುವ ತಂಬಾಕು ಕೋಶದ ಸಹಾಯವಾಣಿ ಕುರಿತು ಮಾಹಿತಿ ನೀಡಿದರು.
ಜಾಗೃತಿ ಜಾಥಕ್ಕೆ ಚಾಲನೆ:
ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಕಲಬುರಗಿ ನಗರದ ಜಿಲ್ಲಾ ಆಸ್ಪತ್ರೆಯಿಂದ ಜಗತ್ ಸರ್ಕಲ್ ವರೆಗೆ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞೆ ಡಾ.ಅಸ್ನಾ ರಬಾ ರುಕಿಯಾ ಅವರು ಚಾಲನೆ ನೀಡಿದರು. ಜಾಥಾದಲ್ಲಿ ಭಾಗವಹಿಸಿದ ನಸಿರ್ಂಗ್ ವಿದ್ಯಾರ್ಥಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಘೋಷವಾಕ್ಯ ಕೂಗುತ್ತಾ ಜಾಗೃತಿ ಮೂಡಿಸಿದರು.
ವ್ಯಸನ ಮುಕ್ತ ಶಿಬಿರ ಆಯೋಜನೆ:
ಕಾಲೇಜಿನ ಅವರಣದಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ತಂಡ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ
ವ್ಯಸನ ಮುಕ್ತ ಶಿಬಿರ ಆಯೋಜಿಸಿ ವಿದ್ಯಾರ್ಥಿಗಳಿಗೆ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಆಪ್ತ ಸಮಾಲೋಚನೆ ಮೂಲಕ ತಿಳಿ ಹೇಳಿದಲ್ಲದೆ ವಿವಿಧ ಕರಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕ್ಲಿನಿಕಲ್ ಸೈಕ್ಲೋಜಿಸ್ಟ್ ಸಂತೋಷಿ ಗುಳೆ, ಸುಜಾತಾ ಪಾಟೀಲ, ಸಾಮಾಜಿಕ ಕಾರ್ಯಕರ್ತೆ ಆರತಿ ಧನಶ್ರೀ, ನಾಗರಾಜ ಬಿರಾದಾರ, ಪಿ.ಜಿ. ಐಮಾನ್ ಸುಬೋಹಿ ಅವರುಗಳು ವ್ಯಸನ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ರಾಜು ಗಂಗಾಧರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಉಪನಿರ್ದೇಶಕ ದೇವನಗೌಡ ಪಾಟೀಲ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ವಿಠ್ಠಲ ಭಾವಿಮನಿ ನಿರೂಪಿಸಿದರು.






























