Home ಜಿಲ್ಲೆ ತುಲಾಭಾರ ಸೇವೆಯ ಸೌಭಾಗ್ಯ ಸಂತಸ :ಡಾ ಕೈಲಾಸನಾಥ ಶ್ರೀ

ತುಲಾಭಾರ ಸೇವೆಯ ಸೌಭಾಗ್ಯ ಸಂತಸ :ಡಾ ಕೈಲಾಸನಾಥ ಶ್ರೀ

ಕೊಲ್ಹಾರ: ಜೂ.2:ಪಟ್ಟಣದ ಗುರುಮಠ ಹಿರೇಪಟ್ಟದೇವರ ಶೀಲವಂತಹಿರೇಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ನಡೆದ
16 ನೇ ದಿನದ ಕೋಟಿ ಜಪಾನುಷ್ಠಾಣ ಇಷ್ಠಲಿಂಗ ಫೂಜಾ ಕಾರ್ಯಕ್ರಮ ಮಂಗಳಾರತಿಯ ನಂತರ ಶ್ರೀ ಘಣ ಮಹಿಮ ಪೂರ್ಣಜ್ಞ ಧರ್ಮರತ್ನ ಭಾರತ ಭೂಷಣ ಡಾ.ಕೈಲಾಸನಾಥ ಮಹಾಸ್ವಾಮಿಗಳವರಿಗೆ ಶ್ರೀಮಠದ ಶಿಷ್ಯರಾದ ಶ್ರೀ ಗೊಲ್ಲಾಳಪ್ಪಾ ರಾಮಣ್ಣ ಮ್ಯಾಗಾಡಿಯವರು ಮಾಡಿದ ನಾಣ್ಯಗಳ ತುಲಾಭಾರ ಸೇವೆಯನ್ನು ಸ್ವೀಕರಿಸಿದ ಪೂಜ್ಯರು ಸಾತ್ವಿಕ ಆಚಾರವಂತ ಸಜ್ಜನಿಕೆಯ ಸಾಕಾರಮೂರ್ತಿ ಗುರು ಮಹಾಂತರ ನಾಣ್ಯ ಮತ್ತು ದಾನ್ಯಗಳ ತುಲಾಭಾರ ಸೇವೆ ಮಾಡಿದರೆ ಅತ್ಯುನ್ನತ ಗೌರವ .ಭಗವಂತನು ಅಂತಹ ಭಕ್ತರನ್ನ ಸದಾ ಮೇಲೆ ಎತ್ತುವನು. ಸಾಮಾನ್ಯ ಅನ್ನದಾತ ರೈತ ಗೊಲ್ಲಾಳಪ್ಪ ಮಾಡಿದ ಸೇವೆ ಸರ್ವರಿಗೂ ಮಾನ್ಯ. ಎಂದು ಆಸಿರ್ವಚನ ನೀಡುತ್ತ ಮನುಷ್ಯ ಬೆಳೆದಂತೆ ಸುಖ ಸಂತೋಷ ನೆಮ್ಮದಿ ಕಾಣಬೇಕಾದರೆ ನಾಲ್ಕು ಹಿತನುಡಿ ಪಾಲಿಸಬೇಕು (1) ಸಾತ್ವಿಕ ಆಚಾರವಂತ ಸಜ್ಜನ ಸಂತ ಗುರುಮಹಾಂತರನ್ನ. ದೇವರ ಭಕ್ತರನ್ನ ಚುಡಾಯಿಸಬಾರದು. ಅವರ ತಾಳ್ಮೆಯ ಶಾಪ ತಟ್ಟವದು.2) ದೈವ ಕೋಪಕ್ಕೆ ತುತ್ತಾಗಬಾರದು–ದೈವ ಶಕ್ತಿಯ ಮುನಿಸು ತಡೆಯೋಕಾಗಲ್ಲ.3) ನೆರೆಹೊರೆಯವರ ನಿಷ್ಠೂರಕೆ ಗುರಿಯಾಗಬಾರದು– ಪಕ್ಕದ ಮನೆಯವರ ಜೊತೆ ವಿರೋಧ ಕಿತ್ತಾಟ ಮಾಡಬಾರದು. ದಿನಾ ಮುಖ ನೋಡೋರ ಜೊತೆ ಹಗೆತನ ಇದ್ರೆ ನೆಮ್ಮದಿ ಇರಲ್ಲ. 4) ನಾಲ್ಕು ಜನರ ಜೊತೆ ಜೊತೆ ಚನ್ನಾಗಿದ್ದರೆ ಅವರ ಬದುಕು ಚಿನ್ನದಂಥಾಗುವದು.ಎಲ್ಲರೂ ಹಷನ್ಮುಖಿಗಳಾಗಿ ಉತ್ತಮ ಸಂಸ್ಕಾರ ಸಹನಶೀಲ ಗುಣವಂತರಾಗಿರಬೆಂದು ಪೂಜ್ಯರು ಶುಭ ನುಡಿ ಸಮರ್ಪಿಸಿದರು.