Home ಜಿಲ್ಲೆ ಕಲಬುರಗಿ ವಿಕಸಿತ ಭಾರತ ಸಾಕಾರಕ್ಕೆ ದೇವಾಲಯಗಳು ಆಧಾರ: ಆರ್. ಆರ್. ಬಿರಾದಾರ್

ವಿಕಸಿತ ಭಾರತ ಸಾಕಾರಕ್ಕೆ ದೇವಾಲಯಗಳು ಆಧಾರ: ಆರ್. ಆರ್. ಬಿರಾದಾರ್

ಕಲಬುರಗಿ,ಆ.7: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗ ಹಾಗೂ ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನಾ ವಿಭಾಗ ಹಾಗೂ ನವದೆಹಲಿಯ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ಐಸಿಎಸ್‍ಎಸ್‍ಆರ್) ಸಹಯೋಗದಲ್ಲಿ ಆಯೋಜಿಸಿದ್ದ “ದೇವಾಲಯ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ನೀತಿ: ಆಡಳಿತ, ಜೀವನೋಪಾಯ ಮತ್ತು ಸುಸ್ಥಿರ ಪ್ರಾದೇಶಿಕ ಅಭಿವೃದ್ಧಿ” ವಿಷಯದ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವು ಯಶಸ್ವಿಯಾಗಿ ಸಮಾರೋಪಗೊಂಡಿತು.
ಸಮಾರೋಪ ಭಾಷಣ ಮಾಡಿದ ಸಿಯುಕೆ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು ಭಾರತೀಯ ದೇವಾಲಯಗಳು ಕೇವಲ ಆಧ್ಯಾತ್ಮಿಕ, ಭಕ್ತಿ ಕೇಂದ್ರಗಳಷ್ಟೇ ಅಲ್ಲದೆ ದೇಶದ ಆರ್ಥಿಕವಾಗಿ, ಸಾಮಾಜಿಕವಾಗಿ ಬಲ ನೀಡುವುದರ ಜೊತೆಗೆ ಶಿಕ್ಷಣ, ಆರೋಗ್ಯ ಸೇವೆ, ಅನ್ನದಾಸೋಹದ ಮೂಲಕ ಆಹಾರ ಭದ್ರತೆ, ದೇಶದ ಸಂಸ್ಕøತಿ ಸಂರಕ್ಷಣೆ ಹಾಗೂ ಭಕ್ತಿಯ ಪರಂಪರೆ ಸೇರಿದಂತೆ ಸಮಾಜದ ಅಭಿವೃದ್ಧಿಯ ಮುಖಾಂತರ ವಿಕಸಿತ ಭಾರತ-2047 ರ ರಾಷ್ಟ್ರೀಯ ಕನಸನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಆಧಾರವಾಗಲಿದೆ ಎಂದು ಹೇಳಿದರು.
ಸಮ್ಮೇಳನ ಸಂಚಾಲಕ ಡಾ. ಗೋವಿನೋಲ್ಲಾ ಮಹೇಂದರ್ ಮಾತನಾಡಿ ಒಟ್ಟು 112 ಸಂಶೋಧನಾ ಪ್ರಬಂಧಗಳು ಮಂಡನೆಯಾದವು. ಅಧ್ಯಯನದ ಭಾಗವಾಗಿ ನಾಳೆ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಲಿದೆ ಎಂದು ಹೇಳಿದರು.
ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪೆÇ್ರ. ಪಾಂಡುರಂಗ ಮಾತನಾಡಿ ವಿದ್ಯಾರ್ಥಿಗಳು ಮತ್ತು ಸಂಶೋಧಕರು ದೇವಾಲಯ, ಸಂಘ-ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳನ್ನು ಅಧ್ಯಯನ ಮಾಡಿ, ಸ್ಟಾರ್ಟ್‍ಅಪ್ ಆಧಾರಿತ ಪರಿಹಾರಗಳನ್ನು ರೂಪಿಸುವ ಮೂಲಕ ದೇವಾಲಯಗಳ ಅಭಿವೃದ್ಧಿ, ಸ್ಥಳೀಯ ಮತ್ತು ಪ್ರಾದೇಶಿಕ ಸಮುದಾಯಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಹೇಳಿದರು.
ತಮಿಳುನಾಡು ಕೇಂದ್ರೀಯ ವಿ.ವಿ. ಸಹಾಯಕ ಪ್ರಾಧ್ಯಾಪಕಿ ಡಾ. ಕವಿತಾ ಕೆ., ಸಮ್ಮೇಳನದ ಸಹ-ಸಂಚಾಲಕ ಡಾ. ಎಸ್. ಲಿಂಗಮೂರ್ತಿ ಉಪಸ್ಥಿತರಿದ್ದರು. ಡಾ. ಸುಮಾ ಸ್ಕಾರಿಯಾ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.
ಸಮ್ಮೇಳನದಲ್ಲಿ ದೇವಾಲಯಗಳ ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ, ಸುಸ್ಥಿರ ಪ್ರಾದೇಶಿಕ ಅಭಿವೃದ್ಧಿ, ತೀರ್ಥಯಾತ್ರೆ ಪ್ರವಾಸೋದ್ಯಮ, ಜೀವನೋಪಾಯ ಬೆಂಬಲ, ಉದ್ಯೋಗ ಸೃಷ್ಟಿ, ದೇವಾಲಯ ನಿರ್ವಹಣೆ, ಆಡಳಿತ ಹಾಗೂ ಸಂಬಂಧಿತ ಸಾರ್ವಜನಿಕ ನೀತಿ ವಿಷಯಗಳ ಕುರಿತು ವ್ಯಾಪಕ ಚರ್ಚೆ, ಸಂವಾದಗಳು ನಡೆದವು.
ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ತಜ್ಞರು, ನೀತಿ ತಜ್ಞರು ಹಾಗೂ ದೇವಾಲಯ ನಿರ್ವಹಣಾ ಸಮಿತಿಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿ.ವಿ.ಯ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗ, ವಾಣಿಜ್ಯ ವಿಭಾಗ ಸೇರಿದಂತೆ ಇತರ ವಿವಿಧ ವಿಭಾಗಗಳ ಅಧ್ಯಾಪಕರು, ಡೀನ್‍ಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಪ್ರತಿನಿಧಿಗಳು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.