
ಕಲಬುರಗಿ,ಆ.7-ಪರಮ ಪೂಜ್ಯ ಸಂತ ಶ್ರೀ ಆಸಾರಾಮ್ ಜೀ ಬಾಪೂಜಿಯವರ ಪಾವನ ಪ್ರೇರಣೆಯಿಂದ ನಗರದ ಮೋಹನ್ ಲಾಡ್ಜ್ ಎದುರುಗಡೆ ಇರುವ ಸಂತ ಶ್ರೀ ಆಸಾರಾಮ್ ಜೀ ಆಶ್ರಮದಲ್ಲಿ ಪ್ರತೀ ತಿಂಗಳು ಆಯುರ್ವೇದ ತಪಾಸಣಾ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಈ ಶಿಬಿರವು ಪ್ರತೀ ತಿಂಗಳ ಮೊದಲ ಮತ್ತು ಮೂರನೇ ಗುರುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಬುಧವಾರ ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯುತ್ತದೆ.
ಈ ಶಿಬಿರದಲ್ಲಿ ರೋಗಗಳ ತಡೆಗಟ್ಟುವಿಕೆ ಮತ್ತು ಪ್ರಾಕೃತಿಕ ಚಿಕಿತ್ಸಾ ಪದ್ಧತಿಯಿಂದ ರೋಗಗಳನ್ನು ನಿವಾರಿಸಲು ಜೀವನಶೈಲಿಯಲ್ಲಿ ಬದಲಾವಣೆ ಕುರಿತು ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಶಿಬಿರದಲ್ಲಿ ತರಬೇತಿ ಪಡೆದ ಮತ್ತು ಅನುಭವಿ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಹಾಗೂ ಆಯುರ್ವೇದ ಮತ್ತು ಪ್ರಾಕೃತಿಕ ಔಷಧಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.
ಶಿಬಿರದ ವಿಶೇಷತೆ ಎಂದರೆ, ಇಲ್ಲಿ ಕೇವಲ ರೋಗಗಳಿಗೆ ಸಂಬಂಧಿಸಿದ ಸಲಹೆ ಮಾತ್ರವಲ್ಲದೆ, ಆಹಾರ-ವಿಹಾರ, ಋತುಮಾನದ ಬದಲಾವಣೆ, ಯೋಗ, ಪ್ರಾಣಾಯಾಮ, ಭಗವನ್ನಾಮ ಜಪ ಇತ್ಯಾದಿ ಪ್ರಾಕೃತಿಕ ಚಿಕಿತ್ಸಾ ಪದ್ಧತಿಯಿಂದ ಹೇಗೆ ಆರೋಗ್ಯ ಲಾಭ ಪಡೆಯಬಹುದು ಎಂಬ ಮಾಹಿತಿಯನ್ನೂ ನೀಡಲಾಗುತ್ತದೆ. ಜೊತೆಗೆ ನೀಡುವ ಔಷಧಿ ಸಂಪೂರ್ಣವಾಗಿ ಪ್ರಾಕೃತಿಕವಾಗಿದ್ದು, ಯಾವುದೇ ಅಡ್ಡಪರಿಣಾಮ ಇರುವುದಿಲ್ಲ.
ಪೂಜ್ಯ ಬಾಪೂಜಿಯವರು ಸಾಮಾನ್ಯ ಜನರು ದುಬಾರಿ ಮತ್ತು ಅಡ್ಡಪರಿಣಾಮಕಾರಿ ಚಿಕಿತ್ಸೆಯಿಂದ ದೂರವಿದ್ದು, ಪ್ರಾಕೃತಿಕ ಹಾಗೂ ಕಡಿಮೆ ಖರ್ಚಿನ ಚಿಕಿತ್ಸೆಯಿಂದ ಆರೋಗ್ಯ, ಸುಖ, ಶಾಂತಿ ಮತ್ತು ಆನಂದ ಪಡೆದು ಆರೋಗ್ಯವಂತ ಸಮಾಜ ಹಾಗೂ ದೇಶ ನಿರ್ಮಾಣವಾಗಬೇಕೆಂದು ಬಯಸುತ್ತಾರೆ ಎಂದು ಸಂತ ಶ್ರೀ ಆಸಾರಾಮ್ ಜೀ ಮಾನವ ಉತ್ಥಾನ ಟ್ರಸ್ಟ್‍ನ ಕಲಬುರಗಿ ಶಾಖೆ ಅಧ್ಯಕ್ಷ ಎಸ್.ವೈ. ಪಾಟೀಲ್ ತಿಳಿಸಿದ್ದಾರೆ. ನಗರದನಿವಾಸಿಗಳು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.































