
ಸೇಡಂ,ಆ, 07: ತಾಲೂಕಿನಲ್ಲಿ ದಿನನಿತ್ಯ ಅಕ್ರಮ ಮರಳು ಸಾಗಣೆ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತನಿಖೆಗೆ ಹೊರಬಂದ ತಹಸಿಲ್ದಾರ್ ಅವರು ಆಕ್ರಮ ಮರಳು ಸಾಗಣೆ ತುಂಬಿದ ಒಂದು ಲಾರಿ ಹಾಗೂ 5 ಟಿಪ್ಪರ್ ಆಕ್ರಮ ಮರಳು ಶೇಖರಣೆಯನ್ನು ತಾಲೂಕಿನ ಬಿರನಳ್ಳಿ ಗ್ರಾಮದ ಹೊರವಲಯದಲ್ಲಿ ತಹಸಿಲ್ದಾರ್ ಶ್ರೀಮತಿ ಶ್ರೀಯಾಂಕ್ ಧನಶ್ರೀ ಕೆಎಎಸ್ ಅವರು ಜಪ್ತಿ ಮಾಡಿದರು. ಈ ವೇಳೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಡಿಡಿ ಸೋಮಶೇಖರ್ ಮುನಿಸ್ವಾಮಿ, ಪಿ ಎಸ್ ಐ ಶರಣಪ್ಪ ಜಾಕ್ನಲ್ಲಿ, ಪಿಡಿಒ ಮಮತಾ, ಆರ್ ಐ ರಾಮು ಇದ್ದರು.































