
ಕಾಳಗಿ:ಆ.7: ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ ತಗುಲಿ ರೈತ ಮೃತಪಟ ಘಟನೆ ಗುರುವಾರ ಮಧ್ಯಾಹ್ನ3ಕ್ಕೆ ಜರುಗಿದೆ.
ಭೀಮಾಶಂಕರ ದೇವಿಂದ್ರಪ್ಪ ಅರನತ್ತಿ ಗೊಟುರ(30)ಎಂಬ ದುರ್ದೈವಿ ರೈತ ಎಂದು ತಿಳಿದು ಬಂದಿದೆ.
ಸ್ವಂತ ಒಂದೂವರೆ ಎಕರೆ ಜಮೀನು ಹೊಂದಿರುವ ಮೃತ ರೈತ ಭೀಮಾಶಂಕರ ತಾನು ಕಡತಿ ಹಾಕಿಕೊಂಡ ಜಮೀನಿನಲ್ಲಿ ಎಡಿ ಹೊಡೆಯುವ ಕಾರ್ಯದಲ್ಲಿ ತಲಿನವಾಗಿದ್ದಾಗ ಗೊಟುರ ಐಪಿ 3ಫೇಸ್ ವೈರ್ ಕಟ್ಟಾಗಿ ಬಿದ್ದಿರುವಲ್ಲಿಯೇ ಎಡಿದಿಂಡು ಹೊದ ಪ್ರಯುಕ್ತ ವಿದ್ಯುತ್ ಹಾದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಆಗಮಿಸಿರುವ ರೈತ ಸಂಘಟನೆ ಅವರು ಹಾಗೂ ಗ್ರಾಮಸ್ಥರು, ಸಂಭಂದಿಕರು ಸೇರಿಕೊಂಡು ಕಾಳಗಿ ಜೇಸ್ಕಾಂ ಕಛೇರಿ ಎದುರು ಮೃತ ರೈತನ ಶವವಿಟ್ಟು ತೀವ್ರ ಪ್ರತಿಭಟನೆಗಿಳಿದರು.
ಮೃತ ರೈತನ ಕುಟುಂಬಕ್ಕೆ 25ಲಕ್ಷ ಪರಿಹಾರ ನೀಡಬೇಕು, ಘಟನೆಯ ಹೊಣೆ ಹೊತ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಯಾದ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ತಕ್ಷಣ ದುರಸ್ತಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೆÇಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡುವರೆಗೂ ಪ್ರತಿಭಟನೆ ಅಂತ್ಯಗೊಳಿಸುವುದಿಲ್ಲವೆಂದು ಪಟ್ಟು ಹಿಡಿದರು.
ಮುಗಿಲು ಮುಟ್ಟಿದ ಅಕ್ರಂದನ:
ಮೃತ ರೈತನ ಹೆಂಡತಿ ರತ್ನಮ್ಮ ಮಲ್ಲಿಕಾರ್ಜುನ, ನಿಲೀಲ್ ಎಂಬ ಇಬ್ಬರು ಗಂಡು ಮಕ್ಕಳು ಮತ್ತು ಸಂಭಂದಿಕರ ದುಃಖ ನೋಡತೀರದಾಗಿತ್ತು.
ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ರೈತರು:
ಆಕ್ರೋಶಗೊಂಡ ರೈತರು ಎಇಇ ಇಲಿಯಾಸ್ ಅಹ್ಮದ್ ತಂಡದ ಜೇಸ್ಕಾಂ ಅಧಿಕಾರಿಗಳ ಮೇಲೆ ಹರಿಹಾಯುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಾಳುತ್ತದ್ದಂತೆ ಸ್ಥಳಕ್ಕೆ ಆಗಮಿಸಿರುವ ಸಿಪಿಐ ಜಗದೇವಪ್ಪ ಪಾಳಾ ಅವರ ನೇತೃತ್ವದ ಪೆÇೀಲಿಸ್ ತಂಡ ತಿಳಿಗೊಳಿಸಿತು.
ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಸುಂದರ ಡಿ.ಸಾಗರ, ಕಾಶಿನಾಥ ಕಾಮರೆಡ್ಡಿ, ಶಿವಕುಮಾರ ಕಮಕನೂರ, ಜಗನ್ನಾಥ ತೇಲಿ, ಮಲ್ಲೀಕಾರ್ಜುನ ಸಿಂಗೆ, ಶಿವಶರಣರೆಡ್ಡಿ ಸೇರಿತೆ ಅನೇಕರಿದ್ದರು.
ಜೆಸ್ಕಾಂ ಇಲಾಖೆಯಿಂದ ಯು.ಡಿ.ಆರ್ ಮಾಡಿ 5 ಲಕ್ಷ, ಮಾನವಿಯತೆ ದೃಷ್ಟಿಯಿಂದ ವ್ಯಯಕ್ತಿಕವಾಗಿ 1ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡುವುದಾಗಿ ಲಿಖಿತವಾಗಿ ಬರೆದುಕೊಟ್ಟಿರುವೆ.
-ಇಲಿಯಾಸ್ ಅಹ್ಮದ್ ಕಾಳಗಿ ಜೇಸ್ಕಾಂ ಎಇಇ































