Home ಜಿಲ್ಲೆ ಕಲಬುರಗಿ ಸಿದ್ಧರಾಮನಿಗೆ ಕಲ್ಯಾಣದ ಮಾರ್ಗ ತೋರಿದ ಅಲ್ಲಮ

ಸಿದ್ಧರಾಮನಿಗೆ ಕಲ್ಯಾಣದ ಮಾರ್ಗ ತೋರಿದ ಅಲ್ಲಮ

ಕಲಬುರಗಿ: ಅಲ್ಲಮರು ಲೋಕ ಪರ್ಯಟನ ಮಾಡುತ್ತ, ಅಲ್ಲಲ್ಲಿ ಅನುಷ್ಠಾನ ಮಾಡುತ್ತ, ಬದುಕಿನ ಶರೀರ ಕರಗುವ ಮುನ್ನಗುಹೇಶ್ವರನ್ನು ಪೂಜಿಸುವಂತೆ ಜನರಿಗೆ ತಿಳಿ ಹೇಳಿ ಬೆಳಗಾವಿಯಿಂದ ಅಖಂಡ ಕರ್ನಾಟಕದ ಗಡಿಭಾಗವಾಗಿರುವ ಈಗಿನಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಬಂದು ನಿಂತರು.
ಅಲ್ಲಮರುಸೊನ್ನಾಲಾಪುರದ ಹೊರ ವಲಯದಲ್ಲಿ ಕೆರೆ, ಕಟ್ಟೆ, ಬಾವಿ ಕಟ್ಟುವ ಕೆಲಸದಲ್ಲಿ ತೊಡಗಿದವರನ್ನು ಕಾಣುತ್ತಾರೆ. ಧರೆಯಮೇಲೊಂದು ಪಿರದಪ್ಪ ಸಂತೆಯ ನೆರವಿಗೆ ಬಂದವರನೇನೆಂಬೆ? ದೇವರಿಗೆ ಸಹಜ ಭಾವ, ಸದ್ಭಕ್ತಿ ಮಾತ್ರ ಪ್ರೀತಿ. ನಾವೆಲ್ಲ ಈಸಂತೆಯಲ್ಲಿ ವ್ಯಾಪಾರ ಮಾಡಲು ಬಂದವರು. ಆ ದೇವರು ಕೊಡದಿದ್ದರೆ ನಮ್ಮ ಯಾವ ವ್ಯವಹಾರವೂ ನಡೆಯುವುದಿಲ್ಲ ಇಲ್ಲಿ.ನಾವೆಲ್ಲ ವ್ರತಾ ವಿಳಾಸವಾದರೆ ಹೇಗೆ? ಅರೆ ಮರುಳನಾದ ಶಿವನನ್ನು ಹೀಗೆ ಪೂಜಿಸಬಹುದೆ? ಎಂದು ಎಚ್ಚರಿಸುತ್ತಾನೆ.
ಸತ್ತ ಬಳಿಕ ಮುಕ್ತಿ ಕಾಣುದಾದರೆ ಅದನ್ನು ಪಡೆದುಕೊಂಡು ನಾವೇನು ಮಾಡಬೇಕಿದೆ. ಇರುವಾಗಲೇ ಮುಕ್ತಿ ಪದವಿ
ಪಡೆಯಬೇಕಾದರೆ ಶಿವಪಥ ಅರಿಯಬೇಕು. ನೀವು ಕಟ್ಟುತ್ತಿರುವ ಕೆರೆ, ದೇವಸ್ಥಾನಗಳು ಅದು ಕೇವಲ ಭೌತಿಕವಾದವುಗಳು. ಏ ದಡ್ಡರೆ ಎಲ್ಲಿ ನಿಮ್ಮ ಸಿದ್ಧರಾಮ ಎಂದು ಕೇಳುತ್ತಾರೆ. ಸಿದ್ಧರಾಮ ಅಲ್ಲಿಗೆ ಬಂದಾಗ
ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ ಬಲಿದು ಷಡ್ವಿಧಭಕ್ತಿಯೆಂಬ ಸೋಪಾನದಿಂದ ಪರಮಾನಂದವೆಂಬ ಜಲವ ತುಂಬಿಕೆರೆಯ ಕಟ್ಟಬಲ್ಲವರನಾರನೂ ಕಾಣೆ ! ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ ನಿಮ್ಮಾಣೆ
ಎಂದು ತಿಳಿಸುತ್ತಾರೆ. ಈ ವಿಷಯದಲ್ಲಿ ಸಿದ್ಧರಾಮ ಮತ್ತು ಅಲ್ಲಮರ ನಡುವೆ ಮಾತಿನ ಮಂಥನ ನಡೆಯುತ್ತದೆ. ಅಲ್ಲಮರಅಧ್ಯಾತ್ಮದ ಮೇರು ವ್ಯಕ್ತಿತ್ವ ಕಂಡ ಸಿದ್ಧರಾಮರು ನಿಮ್ಮನ್ನು ಕಂಡು ಎನ್ನಂತರಂಗದ ಬೆಳಗಾಯಿತು. ಎನಗೆ ಲಿಂಗಸುಖದ ಮಹಾಸತ್ಯದ ಅರಿವಾಯಿತು. ನನ್ನನ್ನು ಅರಿವಿನ ಮಾರ್ಗಕ್ಕೆ ಕರೆದುಕೊಂಡು ಹೋಗಿರಿ ಎಂದು ಪ್ರಾರ್ಥಿಸುತ್ತಾನೆ. ನಾವೆಲ್ಲರೂಬಸವಣ್ಣನವರು ಇರುವ ಕಲ್ಯಾಣಕ್ಕೆ, ಕಲ್ಯಾಣದ ಮಾರ್ಗಕ್ಕೆ ಹೋಗಬೇಕಿದೆ ಎಂದು ಅಲ್ಲಮರು ಹೇಳುತ್ತಾರೆ.
-ಪೂಜ್ಯ ಮಹಾಂತಸ್ವಾಮಿಗಳು.ಮುದಗಲ್