
ಲಕ್ಷೆ÷್ಮÃಶ್ವರ,ಆ.೭: ತಾಲೂಕಿನ ಶಿಗ್ಲಿ ದೊಡ್ಡೂರು ಬಾಲೆ ಹೊಸೂರು ಹುಲ್ಲೂರು ಅಡರಕಟ್ಟಿ ಮತ್ತು ಆದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿಜಿ ರಾಮ್ ಜಿ ಯೋಜನೆಯಲ್ಲಿ ಸಮುದಾಯ ಕಾಮಗಾರಿಗಳು ನಡೆಯುತ್ತಿದ್ದು ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಸರ್ಕಾರ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೊಳಿಸಿದ್ದು ಗ್ರಾಮೀಣ ರೋಜ್ಗಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ನಿರ್ದೇಶಕರಾದ ಧರ್ಮ ರ ಕೃಷ್ಣಪ್ಪ ಅವರು ಮಾತನಾಡಿ ವಾರ್ಷಿಕ ಸರಿಸುಮಾರು ೪೭,೦೦೦ಗಳನ್ನು ಪಡೆಯಬಹುದಾಗಿತ್ತು ಗ್ರಾಮೀಣ ರೋಜ್ಗಾರ್ ಗ್ಯಾರಂಟಿ ಕಾರ್ಡ್ ಹೊಂದಿರುವವರು ವಿಬಿಜಿರಾಮಜಿ ಯೋಜನೆಯಲ್ಲಿ ಒಟ್ಟು ೩೧೮ ಸಮುದಾಯ ಕಾಮಗಾರಿಗಳನ್ನು ಅಳವಡಿಸಿಕೊಳ್ಳಲಾಗಿದ್ದು ೧೦೦ ದಿನಗಳಿಂದ ೧೨೫ ದಿನಕ್ಕೆ ಹೆಚ್ಚಿಸಲಾಗಿದ್ದು ಅದೇ ರೀತಿ ಕೂಲಿ ದರವನ್ನು ಸಹ ಹೆಚ್ಚಿಸಲಾಗಿದೆ ಮತ್ತು ಕೃಷಿ ಕೂಲಿ ಕಾರ್ಮಿಕರು ಕಡ್ಡಾಯವಾಗಿ ಎರಡು ಬಾರಿ ಎನ್‌ಎಂಎAಎಸ್ ಮಾಡಬೇಕಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ರವಿ ಕೊರಕನವರ ರಿಯಾಜ್ ಖದೀಬ ಮಾದರ ಗೋವಿಂದ ರೆಡ್ಡಿ ಕೆ ಸಿ ಕಡೂರ್ ಕವಿತಾ ಅಣಿಗೇರಿ ಒಡಕನಗೌಡರ ಹರೀಶ ಸೊಬರದ ಮಂಜುನಾಥ ಸ್ವಾಮಿ ಎಚ್ ಎಮ್ ತಾಂತ್ರಿಕ ಸಿಬ್ಬಂದಿಗಳಾದ ಶ್ರೀನಿವಾಸ್ ಪಕ್ಕಿರೇಶ್ ನಿಟಾಲಿ ಶ್ರೀಧರ್ ಕುಲಕರ್ಣಿ ಪ್ರವೀಣ್ ಕರ್ಕನ ಗೌಡರ ಕಾಸಿಂಸಾಬ್ ನದಾಫ್ ಸತೀಶ ಅರಿಶಿಣದ ಶಿಲ್ಪ ಲಮಾಣಿ ಮಂಜುಳಾ ಕಟ್ಟಿಮನಿ ಗೌರಮ್ಮ ಲಮಾಣಿ ವಿನೋದ್ ಲಮಾಣಿ ತಿರುಕಪ್ಪ ಸೇರಿದಂತೆ ಅನೇಕರಿದರು.































