Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳು ವಿಜ್ಞಾನತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಿ

ವಿದ್ಯಾರ್ಥಿಗಳು ವಿಜ್ಞಾನತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಿ

ಕಲಬುರಗಿ,ಆ.7: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವಿದ್ಯಾರ್ಥಿ ಕಲ್ಯಾಣ ವಿಭಾಗದ (ಡಿ.ಎಸ್.ಡಬ್ಲ್ಯೂ) ವತಿಯಿಂದ ವಿ.ವಿ.ಯ 12 ನಿಕಾಯ, 29 ವಿಭಾಗಗಳಿಂದ ಹೊಸದಾಗಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳಿಗಾಗಿ ಕಳೆದ ಎರಡು ದಿನಗಳಿಂದ ಆಯೋಜಿಸಿದ್ದ ಸ್ವಾಗತ-ಪರಿಚಯ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ವಿ.ವಿ.ಯ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ ಅವರು ಮಾತನಾಡಿ ನಮ್ಮ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಹಾಗೂ ನವೀನತೆಯ ಸಂಶೋಧನೆ ಕೈಗೊಂಡು ಭಾರತವನ್ನು ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗುವಂತೆ ನಾವೆಲ್ಲರೂ ಶ್ರಮವಹಿಸಬೇಕೆಂದು ಅವರು ಕರೆ ನೀಡಿದರು.
ದೇಶದಲ್ಲಿಯೇ ಸಿಯುಕೆಯು ಶೈಕ್ಷಣಿಕವಾಗಿ ಮತ್ತು ಸಂಶೋಧನೆಯ ಕ್ಷೇತ್ರಲ್ಲಿ ವೇಗವಾಗಿ ಬೆಳೆಯುತ್ತಿದೆ, ನಮ್ಮ ವಿ.ವಿ.ಯಲ್ಲಿ ಗುಣಮಟ್ಟದ ಮತ್ತು ಸುಸಜ್ಜಿತ ಪ್ರಯೋಗಾಲಯಗಳು, ಇ-ಗ್ರಂಥಾಲಯ ವ್ಯವಸ್ಥೆ, ಹಾಸ್ಟೆಲ್ ವ್ಯವಸ್ಥೆ, ಅಂತರ್ಜಾಲ ವ್ಯವಸ್ಥೆ, ಅನುಭವಿ ಕಲಿಕಾ ಭೋದನೆ ಸೇರಿದಂತೆ ಅನೇಕ ಪ್ರಯೋಜನಗಳಿವೆ. ವಿದ್ಯಾರ್ಥಿಗಳು ಇವೆಲ್ಲವನ್ನು ಉಪಯೋಗ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಹಾಗೂ ವಿ.ವಿ.ಯ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಅವರು ಹೇಳಿದರು.
ವಿ.ವಿ.ಯ ಜೀವ ವಿಜ್ಞಾನ ವಿಭಾಗದ ಡೀನ್ ಪ್ರೊ.ಸತ್ಯನಾರಾಯಣ, ಕಂಪ್ಯೂಟರ್ ವಿಜ್ಞಾನ ಡೀನ್ ಪ್ರೊ.ಆರ್.ಎಸ್.ಹೆಗಡಿ, ರಸಾಯನಶಾಸ್ತ್ರ ಡೀನ್ ಪ್ರೊ.ಪಲ್ಲೆಪೋಗು ರಾಘವಯ್ಯ, ಇಂಜನೀಯರಿಂಗ್ ಡೀನ್ ಪ್ರೊ.ಅಮರೇಂದ್ರ ಮತ್ಸ, ಭೂವಿಜ್ಞಾನ ಡೀನ್ ಪ್ರೊ.ಪ್ರಶಾಂತ, ಭೌತಿಕ ವಿಜ್ಞಾನದ ಡೀನ್ ಪ್ರೊ.ರಾಜೀವ್ ಜೋಶಿ ಅವರು ತಮ್ಮ ವಿಭಾಗಗಳ ಶೈಕ್ಷಣಿಕ ಮಾಹಿತಿ ನೀಡಿದರು ವಿದ್ಯಾರ್ಥಿ ಕಲ್ಯಾಣ ಮತ್ತು ಕಾನೂನು ವಿಭಾಗದ ಡೀನ್ ಪೆÇ್ರ. ಬಸವರಾಜ್ ಎಂ. ಕುಬಕಡ್ಡಿ ಅವರು ವಿ.ವಿ.ಯ ನೀತಿ-ಸಂಹಿತೆ ಬಗ್ಗೆ ಮತ್ತು ವಿ.ವಿ.ಯ ಹಾಸ್ಟೆಲ್ ಮುಖ್ಯಸ್ಥರಾದ ಡಾ.ಬಸವರಾಜ ಅವರು ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ಪ್ರೊ.ಜನಾರ್ಧನ ರೆಡ್ಡಿ, ಪ್ರೊ.ನಾಗರಾಜ ಧಾರವಾಡಕರ, ಪ್ರೊ.ಚೈತನ್ಯ, ಪ್ರೊ.ವೆಂಕಟರಮಣ ದೊಡ್ಡಿ, ಪ್ರೊ.ಪ್ರಮೋಧ, ಪ್ರೊ.ರಾಜಶ್ರೀ ಹಾಗೂ ಡಿ.ಎಸ್.ಡಬ್ಸೂ ಸಿಬ್ಬಂದಿಗಳಾದ ಚರಣ್, ಅರುಣ್‍ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಡಾ. ವಾಣಿಶ್ರೀ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮವು ವಂದೇ ಮಾತರಂನೊಂದಿಗೆ ಆರಂಭವಾಗಿ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.