Home ಜಿಲ್ಲೆ ಹೂಮಳೆ ಸ್ವಾಗತದೊಂದಿಗೆ ಶಾಲೆಗೆ ಮರಳಿದ ವಿದ್ಯಾರ್ಥಿಗಳುಚಿರಂಜೀವಿ ಶಾಲೆಯಲ್ಲಿ ಸಂಭ್ರಮದ ಆರಂಭೋತ್ಸವ

ಹೂಮಳೆ ಸ್ವಾಗತದೊಂದಿಗೆ ಶಾಲೆಗೆ ಮರಳಿದ ವಿದ್ಯಾರ್ಥಿಗಳುಚಿರಂಜೀವಿ ಶಾಲೆಯಲ್ಲಿ ಸಂಭ್ರಮದ ಆರಂಭೋತ್ಸವ

ಯಾದಗಿರಿ:ಜೂ.೧: ನಗರದ ಚಿರಂಜೀವಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ** ೨೦೨೬-೨೭ನೇ ಶೈಕ್ಷಣಿಕ ವರ್ಷದ ಆರಂಭೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು. ಬೇಸಿಗೆ ರಜೆ ಬಳಿಕ ಶಾಲೆಗೆ ಮರಳಿದ ವಿದ್ಯಾರ್ಥಿಗಳಿಗೆ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹೂಮಳೆ ಸುರಿಸಿ ಆತ್ಮೀಯ ಸ್ವಾಗತ ಕೋರಿದರು.

ಶಾಲಾ ಆವರಣವು ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿದ್ದು, ವಿದ್ಯಾರ್ಥಿಗಳು ಸಂತಸ, ಉತ್ಸಾಹ ಮತ್ತು ಹೊಸ ಕನಸುಗಳೊಂದಿಗೆ ಶಾಲೆಗೆ ಆಗಮಿಸಿದರು. ಶಾಲೆಯ ಮುಖ್ಯಗುರು ಜೈಪಾಲ್ ಎಲಿಷ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಶಿಸ್ತು, ಪರಿಶ್ರಮ ಹಾಗೂ ಗುಣಮಟ್ಟದ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ವೈಸ್ ಚೇರ್ಮನ್ ಎಸ್. ನಂದಕುಮಾರ್, ಜಿಲ್ಲಾ ಮೇಲ್ವಿಚಾರಕರು ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಅವರ ಶೈಕ್ಷಣಿಕ ಜೀವನ ಉಜ್ವಲವಾಗಿರಲೆಂದು ಹಾರೈಸಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಉತ್ತಮ ನಡತೆ, ಶಿಸ್ತು, ಸಮಯಪಾಲನೆ, ಕಠಿಣ ಪರಿಶ್ರಮ ಹಾಗೂ ಜೀವನದಲ್ಲಿ ಉನ್ನತ ಗುರಿಗಳನ್ನು ಸಾಧಿಸುವ ಕುರಿತು ಅಮೂಲ್ಯ ಸಲಹೆಗಳನ್ನು ನೀಡಿ ಪ್ರೇರಣಾದಾಯಕ ಸಂದೇಶ ನೀಡಿದರು.
ಇನ್ನು ಸಭಾಪಾಲಕರಾದ ಜಾನ್ ವೆಸ್ಲಿ, ಸ್ಟಾನ್ ಲೀ ಸ್ಟೀಫನ್, ಜಯಶ್ರೀ, ವಿಕ್ಟೋರಿಯಾ ಫ್ಲಾರೆನ್ಸ್, ಪ್ರಕಾಶ್, ಹನುಮಂತರಾಯ, ಮಂಜುಳಾ, ಸುನಿತಾ, ಜಾಸ್ಮಿನ್, ಯೇಸುರಾಜ ಯಡಹಳ್ಳಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.