
ಕಲಬುರಗಿ: ವಿದ್ಯಾರ್ಥಿಗಳು ರಾಷ್ಟ್ರದ ಅತ್ಯಮೂಲ್ಯ ಸಂಪನ್ಮೂಲವಾಗಿದ್ದು, ಜ್ಞಾನ, ಚಾರಿತ್ರ್ಯ ಮತ್ತು ಬದ್ದತೆ ಈ ಮೂರು ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು. ಹೃದಯದಲ್ಲಿ ಹೆಮ್ಮೆ, ಸ್ವಾತಂತ್ರ್ಯದ ಸಂಭ್ರಮ ಮತ್ತು ಭವಿಷ್ಯದ ಸ್ಫೂರ್ತಿಯೊಂದಿಗೆ ಸ್ವಾತಂತ್ರ್ಯೋತ್ವವನ್ನು ನಾವೆಲ್ಲರೂ ಸಂಭ್ರಮಿಸುತ್ತಿದ್ದೇವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗದಲ್ಲಿ ಆಯೋಜಿಸಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಅನೇಕ ದೇಶಪ್ರೇಮಿಗಳು ಮತ್ತು ರಾಷ್ಟ್ರ ನಾಯಕರ ತ್ಯಾಗದ ಫಲವನ್ನು ಎಲ್ಲರೂ ನೆನೆಯಬೇಕಿದೆ. ದೇಶ ಅಭಿವೃದ್ಧಿ ಮತ್ತು ಯುವ ಸಮೂಹದ ಬೆಳವಣಿಗೆ ಸಾಧಿಸಲು ಪ್ರಾಮಾಣಿಕತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೌಲ್ಯ ಅರಿತುಕೊಂಡು ಸಮಾಜ ಮತ್ತು ರಾಷ್ಟ್ರದ ಜವಾಬ್ದಾರಿಯನ್ನು ಗೌರವಿಸಬೇಕು. ಅಭಿವೃದ್ಧಿಯಲ್ಲಿ ವಿಶೇಷ ಅವಕಾಶ ಪಡೆದಿರುವ ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗಗಳು, ಸಮುದಾಯಗಳು, ಕುಟುಂಭಗಳು ಮತ್ತು ವಿದ್ಯಾರ್ಥಿ ಸಮೂಹ ಭವಿಷ್ಯದ ಬೆಳವಣಿಗೆ ಬಗ್ಗೆ ವಿಶ್ವವಿದ್ಯಾಲಯದ ಮೇಲೆ ವಿಶೇಷ ಜವಾಬ್ದಾರಿಯಿದೆ. ಪ್ರಸ್ತುತ ವಿದ್ಯಾರ್ಥಿಗಳು ಏನು ಯೋಚಿಸಬೇಕು ಅನ್ನುವುದಕ್ಕಿಂತ ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸುವ ಮೂಲಕ ಉತ್ತಮ ಸಾಧನೆಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ರಮೇಶ ಲಂಡನಕರ್, ಮೌಲ್ಯಮಾಪನ ಕುಲಸಚಿವ ಡಾ. ಎನ್. ಜಿ. ಕಣ್ಣೂರು, ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ, ಡಾ. ಹನುಮಂತ ಜಂಗೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ದಶರಥ ನಾಯಕ್, ಕಲಾ ನಿಕಾಯದ ಡೀನ್ ಪ್ರೊ. ಎಚ್. ಟಿ. ಪೋತೆ, ಶಿಕ್ಷಣ ನಿಕಾಯದ ಡೀನ್ ಪೆÇ್ರ. ಹೂವಿನಬಾವಿ ಬಾಬಣ್ಣ, ಕಾನೂನು ನಿಕಾಯದ ಡೀನ್ ಪೆÇ್ರ. ದೇವಿದಾಸ ಮಾಲೆ, ವಿಜ್ಞಾನ ತಂತ್ರಜ್ಞಾನ ನಿಕಾಯದ ಡೀನ್ ಪ್ರೊ. ಟಿ. ಶಂಕರಪ್ಪ, ಪ್ರೊ. ವಿದ್ಯಾಸಾಗರ ಸೇರಿದಂತೆ ಎಲ್ಲಾ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂಗೀತ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳು ಸಂಗೀತ ಗಾಯನ ನಡೆಸಿಕೊಟ್ಟರು. ವಿಶ್ವವಿದ್ಯಾಲಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಹನುಮಂತ ಜಂಗೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಸೂರ್ಯಕಾಂತ ಅಮರೆ ವಂದಿಸಿದರು. ಡಾ. ಎಂ. ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಚೇತನವಾಗಿರುವ ಗುಲಬರ್ಗಾ ವಿಶ್ವವಿದ್ಯಾಲಯ 44ನೇ ಘಟಿಕೋತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಸುಮಾರು ಒಂಬತ್ತು ಪೇಟೆಂಟ್‍ಗಳನ್ನು ವಿಶ್ವವಿದ್ಯಾಲಯ ಹೊಂದಿದೆ. ನ್ಯಾಕ್ ‘ಬಿ’ ಗ್ರೇಡ್ ಮಾನ್ಯತೆ ಪಡೆದಿದ್ದು, ಯುಜಿಸಿ, ಸಿಎಸ್‍ಐಆರ್ ಯೋಜನೆಗಳನ್ನು ಬೋಧಕ ಸಿಬ್ಬಂದಿ ಪೂರೈಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಶ್ರೇಷ್ಠ ಲೇಖನಗಳನ್ನು ಪ್ರಾಧ್ಯಾಪಕರು ಪ್ರಕಟಿಸಿದ್ದಾರೆ. ವಿಯಟ್ನಾಂ ಸಮ್ಮೇಳನದಲ್ಲಿ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ರಷ್ಯಾ ಸಮ್ಮೇಳನದಲ್ಲಿ ಡಾ. ಸುರೇಶ್ ಜಂಗೆ ಪ್ರಬಂಧ ಮಂಡಿಸಿರುವುದು, ಭಾಷಾ ವಿಭಾಗದಲ್ಲಿ ಪ್ರೊ. ಎಚ್. ಟಿ. ಪೋತೆ ಮಹಾಯಾನ ಕಾದಂಬರಿಗೆ ಚುಕ್ಕಿ ಪ್ರತಿಷ್ಠಾನ ಪ್ರಶಸ್ತಿ ಮತ್ತು ಗದ್ದಗಿಮಠ ಜಾನಪದ ಪ್ರಶಸ್ತಿ ಲಭಿಸಿದೆ. ಹಣಕಾಸು ವಿಭಾಗದ ಅಧೀಕ್ಷಕ ವೇದಕುಮಾರ್ ಪ್ರಜಾಪತಿ ಸುಭಾಸ್ ಚಂದ್ರ ಪಾಟೀಲ ಟ್ರಸ್ಟನ ಪ್ರಶಸ್ತಿಗೆ ಬಾಜನರಾಗಿರುವುದು ಹೆಮ್ಮೆ ಎನಿಸಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕೂಡ ಹಲವು ಕ್ಷೇತ್ರಗಳಲ್ಲಿ ಸಾಧನೆ ಮೆಚ್ಚುವಂತದ್ದು, ಸಮಕಾಲೀನ ಕೃತಕ ಬುದ್ಧಿಮತ್ತೆ, ಪತ್ರಿಕೋದ್ಯಮ ಸೇರಿದಂತೆ ಮುಂತಾದ ವಿಶೇಷ ವಿಷಯಗಳಲ್ಲಿ ಕೌಶಲ್ಯ ಆಧಾರಿತ ಕಲಿಕೆಗೆ ಸ್ನಾತಕೋತ್ತರ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸುಗಳನ್ನು 2026-27ನೇ ಸಾಲಿನಲ್ಲಿ ಪ್ರಾರಂಭಿಸಿ ವಿದ್ಯಾರ್ಥಿಗಳ ಉನ್ನತ್ತಿಗೆ ಉತ್ತೇಜನ ನೀಡಲಾಗುತ್ತಿದೆ.
- ಪ್ರೊ. ಶಶಿಕಾಂತ್ ಎಸ್. ಉಡಿಕೇರಿ
ಕುಲಪತಿಗಳು































