Home ಜಿಲ್ಲೆ ಕಲಬುರಗಿ ಪೀಸ್ ಇಸ್ಲಾಮಿಕ್ ಇಂಟನ್ರ್ಯಾಷನಲ್ ಶಾಲೆಗೆ ರಾಜ್ಯ ಮಟ್ಟದ “ಗೋಲ್ಡನ್ ಸ್ಕೂಲ್” ಪ್ರಶಸ್ತಿ

ಪೀಸ್ ಇಸ್ಲಾಮಿಕ್ ಇಂಟನ್ರ್ಯಾಷನಲ್ ಶಾಲೆಗೆ ರಾಜ್ಯ ಮಟ್ಟದ “ಗೋಲ್ಡನ್ ಸ್ಕೂಲ್” ಪ್ರಶಸ್ತಿ

ಕಲಬುರಗಿ: ಹಾಗರ್ಗಾ ರಸ್ತೆ, ಸಪ್ನಾ ಬೇಕರಿ ಸಮೀಪದಲ್ಲಿರುವ ಪೀಸ್ ಇಸ್ಲಾಮಿಕ್ ಇಂಟನ್ರ್ಯಾಷನಲ್ ಶಾಲೆ, ಕಲಬುರಗಿಗೆ ಇಂಡಿಯನ್ ಟಾಲೆಂಟ್ ಒಲಿಂಪಿಯಾಡ್ (Iಖಿಔ) ವತಿಯಿಂದ 2025-26ರ ಇಂಡಿಯನ್ ಟಾಲೆಂಟ್ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಭಾಗವಹಿಸುವಿಕೆ ಹಾಗೂ ಶ್ರೇಷ್ಠ ಸಾಧನೆಗಾಗಿ ಪ್ರತಿಷ್ಠಿತ ರಾಜ್ಯ ಮಟ್ಟದ “ಗೋಲ್ಡನ್ ಸ್ಕೂಲ್” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪೆÇೀಷಕರು, ಶಿಕ್ಷಕರು ಹಾಗೂ ಶಾಲಾ ಆಡಳಿತದ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಪ್ರಶಸ್ತಿ ಪುರಸ್ಕøತ ವಿದ್ಯಾರ್ಥಿಗಳು:

  • ರಾಜ್ಯ ಟಾಪರ್: ಅಬ್ದುಲ್ ಅಹದ್ ಚಾಂದ್, ತಂದೆ ಮೊಹಮ್ಮದ್ ಅಬ್ದುಲ್ ರಹೀಮ್, ಇವರಿಗೆ ಟ್ರೋಫಿ, ಚಿನ್ನದ ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
  • ಇಮ್ರಾನ್ ಪಟೇಲ್, ತಂದೆ ಶಕೀಲ್ ಪಟೇಲ್, ಅವರಿಗೆ ಶ್ರೇಷ್ಠ ಸಾಧನೆಗಾಗಿ ಚಿನ್ನದ ಪದಕ ಮತ್ತು ಪ್ರಮಾಣಪತ್ರ ನೀಡಲಾಯಿತು.
  • ಸಯ್ಯದ್ ಹಮ್ಜಾ ಯಾಸೀನ್, ತಂದೆ ಯಾಸೀನ್ ಅಲಿ, ಅವರಿಗೆ ಸಹ ಶ್ರೇಷ್ಠ ಸಾಧನೆಗಾಗಿ ಚಿನ್ನದ ಪದಕ ನೀಡಿ ಸನ್ಮಾನಿಸಲಾಯಿತು.
  • ಅಫ್ಫಾ ಕೊನೈನ್ (4ನೇ ತರಗತಿ), ಫಾತಿಮಾ ತು ಜೋಹ್ರಾ (4ನೇ ತರಗತಿ), ಇದ್ರೀಸ್ ಯಾಸೀನ್ (5ನೇ ತರಗತಿ) ಹಾಗೂ ಸಯ್ಯದ್ ಖಿಜರ್ (7ನೇ ತರಗತಿ) ಅವರಿಗೆ ಚಿನ್ನದ ಪದಕಗಳು ಪ್ರದಾನಿಸಲಾಯಿತು.
  • ಶಾಲೆಯ ಇನ್ನೂ ಅನೇಕ ವಿದ್ಯಾರ್ಥಿಗಳು ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಸಂದರ್ಭದಲ್ಲಿ ಪೀಸ್ ಇಸ್ಲಾಮಿಕ್ ಇಂಟನ್ರ್ಯಾಷನಲ್ ಗ್ರೂಪ್ ಆಫ್ ಸ್ಕೂಲ್ಸ್‍ನ ಸಂಸ್ಥಾಪಕ, ಅಧ್ಯಕ್ಷ ಹಾಗೂ ನಿರ್ದೇಶಕರಾದ ಶ್ರೀ ಸಯ್ಯದ್ ಘೌಸ್ ಪೀರ್ (ಃ.ಖಿeಛಿh.) ಅವರು ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೆÇೀಷಕರಿಗೆ ಅಭಿನಂದನೆ ಸಲ್ಲಿಸಿದರು. ಗುಣಮಟ್ಟದ ಶಿಕ್ಷಣ, ಶೈಕ್ಷಣಿಕ ಶ್ರೇಷ್ಠತೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ಶಾಲಾ ಆಡಳಿತವು ಈ ಗೌರವಕ್ಕಾಗಿ ಇಂಡಿಯನ್ ಟಾಲೆಂಟ್ ಒಲಿಂಪಿಯಾಡ್ (Iಖಿಔ) ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ಈ ಸಾಧನೆಯನ್ನು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ ಹಾಗೂ ಪೆÇೀಷಕರ ನಿರಂತರ ಸಹಕಾರಕ್ಕೆ ಅರ್ಪಿಸಿದೆ.