Home ಜಿಲ್ಲೆ ಕಲಬುರಗಿ ಕ್ರೀಡಾಂಗಣ ಕಾಮಗಾರಿ ಕಳಪೆ: ಶ್ರವಣಕುಮಾರ ನಾಯಕ ಆಕ್ರೋಶ

ಕ್ರೀಡಾಂಗಣ ಕಾಮಗಾರಿ ಕಳಪೆ: ಶ್ರವಣಕುಮಾರ ನಾಯಕ ಆಕ್ರೋಶ

ಜೇವರ್ಗಿ,ಮೇ.18-ಪಟ್ಟಣದ ಕ್ರೀಡಾಂಗಣ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ ಬಗ್ಗೆ ದೂರು ನೀಡಿದರು ಕೂಡ ಯಾವುದೇ ಅಧಿಕಾರಿಗಳು ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಂಡಿಲ್ಲ. ಕ್ರೀಡಾಂಗಣ ಕಾಮಗಾರಿಗೆ ಸುಮಾರು 5 ಕೋಟಿಗೂ ಹೆಚ್ಚು ಅನುದಾನ ಖರ್ಚು ಮಾಡಲಾಗಿದೆ, ಆದರೆ ಕಾಮಗಾರಿ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದ ಕಾರಣ ಹಂತ ಹಂತವಾಗಿ ಕುಸಿದು ಕಟ್ಟಡ ನೆಲಸಮವಾಗಿದೆ ಇದಕ್ಕೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನೇರ ಹೊಣೆಗಾರರು ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ಡಿ.ನಾಯಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಪೆ ಕಾಮಗಾರಿ ವಿರುದ್ಧ 2018ರಲ್ಲಿ ದೂರಿ ನೀಡಿದ ಬಗ್ಗೆ ತನಿಖೆ ಮಾಡಿ ತಾಂತ್ರಿಕ ಅಧಿಕಾರಿಗಳು ಕಳಪೆ ಮಟ್ಟದಿಂದ ಕಾಮಗಾರಿ ಮಾಡಿದ ಬಗ್ಗೆ ವರದಿ ನೀಡಿದ ಹಿನ್ನೆಲೆಯಲ್ಲಿ ಸದರಿ ಕಟ್ಟಡದ ಕಾಮಗಾರಿ ಸ್ವಂತ ಹಣದಿಂದ ಕಾಮಗಾರಿ ಮಾಡಲು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಗಳು ಆದೇಶ ಮಾಡಿದ್ದಾರೆ. ಕಳಪೆ ಮಟ್ಟದ ಕಾಮಗಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕ್ರೀಡಾಂಗಣ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ ಬಗ್ಗೆ ನಿರಂತರವಾದ ಹೋರಾಟ ನಡೆಸಲಾಗುವುದು ಎಂದು ಅವರು ತಿಳಸಿದ್ದಾರೆ.