
ಅಫಜಲಪುರ:ಪ್ರೀತಿಯ ನಾಟಕವಾಡಿ, ದೈಹಿಕವಾಗಿ ಬಳಸಿಕೊಂಡು ಅಪ್ರಾಪ್ತ ವಯಸ್ಸಿನ ಯುವತಿಗೆ ಯೋಧ ಕೈ ಕೊಟ್ಟಿದ್ದಕ್ಕೆ ಮಾನಸಿಕವಾಗಿ ಕುಗ್ಗಿ ಯುವತಿಯೊಬ್ಬಳು ದುಪಟ್ಟಾ(ಒಡ್ನಿ)ದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸೆಪ್ಟಂಬರ್ 13ರಂದು ನಡೆದಿದೆ.
ಅಫಜಲಪುರ ಪೆÇಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮ ಒಂದರಲ್ಲಿನ ಅಪ್ರಾಪ್ತ ವಯಸ್ಸಿನ ಯುವತಿ ಅದೇ ಗ್ರಾಮದ ಯುವಕ ಪ್ರವೀಣ್ ಹುಣಸಗಿ ಎಂಬಾತನೊಂದಿಗೆ ಪ್ರೀತಿ ಇತ್ತು.ಪ್ರವೀಣ್ ಈತನು ಭಾರತದ ಗಡಿಭಾಗದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ, ಆಗಾಗ ರಜೆ ಮೇಲೆ ಊರಿಗೆ ಬಂದಾಗ ಯುವತಿಯ ಜತೆ ಪ್ರೀತಿಯ ನಾಟಕವಾಡಿ ದೈಹಿಕವಾಗಿ ಬಳಸಿಕೊಳ್ಳುತ್ತಿದ್ದ,ಇದೇ ರೀತಿ ಹಲವು ದಿನಗಳಿಂದ ನಡೆಯುತ್ತಾ ಬರುತ್ತಿತ್ತು. ಇದಕ್ಕೆಲ್ಲಾ ಆತನ ಸ್ನೇಹಿತ ಗಂಗಾಧರ್ ಜಮಾದಾರ ಸಹಾಯ ಮಾಡುತ್ತಿದ್ದನು.
ಆದರೆ, ಇತ್ತೀಚೆಗೆ ಆ ಯುವತಿ ಗರ್ಭಿಣಿ ಆಗಿರುವುದರಿಂದ ಮದುವೆ ಮಾಡಿಕೊಳ್ಳಣ ಎಂದು ಯೋಧ ಪ್ರವೀಣ್ ಹುಣಸಗಿ ಕೇಳಿಕೊಂಡಾಗ ನಾನು ನಿನ್ನನ್ನು (ಅಪ್ರಾಪ್ತ ವಯಸ್ಸಿನ ಯುವತಿ) ಮದುವೆ ಮಾಡಿಕೊಳ್ಳುವುದಿಲ್ಲ ನೀನು ಏನು ಬೇಕಾದರೂ ಮಾಡಿಕೊಳ್ಳು ಎಂದು ಹೇಳಿದ್ದರಿಂದ ಮಾನಸಿಕವಾಗಿ ಕುಗ್ಗಿರುವ ಯುವತಿ ಮದುವೆ ಆಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರೂ ಕೂಡ ಯೋಧ ಪ್ರವೀಣ್ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ನೀನು ಏನು ಬೇಕಾದರೂ ಮಾಡಿಕೋ ನಾನಂತೂ ನಿನಗೆ ಮದುವೆ ಆಗುವುದಿಲ್ಲ ಎಂದು ಹೇಳಿದನಂತೆ.
ಹೀಗಾಗಿ ಅಪ್ರಾಪ್ತ ವಯಸ್ಸಿನ ಯುವತಿ ಮನನೊಂದು ಮನೆಯಲ್ಲಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಕುರಿತು ಅಫಜಲಪುರ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ದಿನವೇ 2 ಸಾವಿರ ಫೆÇೀನ್ ಪೇ:ಯೋಧ ಪ್ರವೀಣ್ ಹುಣಸಗಿ ಎಂಬಾತನು ತನ್ನ ಸ್ನೇಹಿತ ಗಂಗಾಧರ್ ಜಮಾದಾರ ಮೂಲಕ 2 ಸಾವಿರ ರೂ. ಫೆÇೀನ್ ಪೇ ಮಾಡಿ ಯುವತಿಗೆ ಕೊಡಲು ಹೇಳಿದನಂತೆ.ಅದೇ ರೀತಿ ಗಂಗಾಧರ ಈತನು ಯುವತಿಗೆ 2 ಸಾವಿರ ಕೊಟ್ಟು ಪಕ್ಕದ ಗ್ರಾಮ ಒಂದರಲ್ಲಿ ಸಂತೆ ಇರುವುದರಿಂದ ಬೈಕ್ ಮೇಲೆ ಕರೆದುಕೊಂಡು ಹೋಗಿ ವಾಪಸ್ ಮನೆಗೆ ತಂದು ಬಿಟ್ಟಿದ್ದಾನೆ.
ಡೆತ್ ನೋಟ್ ಬರೆದ ಯುವತಿ!
ಪ್ರೀತಿಯ ನಾಟಕವಾಡಿ ಈಗ ಮದುವೆ ಆಗುವುದಿಲ್ಲ ಎಂದಿದ್ದಕ್ಕೆ ಅಪ್ರಾಪ್ತ ವಯಸ್ಸಿನ ಯುವತಿ ಆತ್ಮಹತ್ಯೆಗೂ ಮುಂಚೆ ಡೆತ್ ನೋಟ್ ಬರೆದು ತಾನು ಪ್ರೀತಿಸಿದ ಯುವಕ ಪ್ರವೀಣ್ ಹುಣಸಗಿ ಹಾಗೂ ಆತನ ಸ್ನೇಹಿತ ಗಂಗಾಧರ್ ಜಮಾದಾರ ನನ್ನ ಸಾವಿಗೆ ಕಾರಣ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೆÇಲೀಸರು ಆರೋಪಿಯ ಸ್ನೇಹಿತ ಗಂಗಾಧರ್ ಜಮಾದಾರ ಎಂಬತನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.ಅಲ್ಲದೇ ಪ್ರಮುಖ ಆರೋಪಿ ಪ್ರವೀಣ್ ಹುಣಸಗಿ ಯೋಧನಾಗಿರುವುದರಿಂದ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆದು ಬಂಧನಕ್ಕೆ ತಯಾರಿ ನಡೆಸಿದ್ದಾರೆ.




























