Home ಜಿಲ್ಲೆ ಹಕ್ಕು ಪತ್ರಗಳಿಗಾಗಿ ಒತ್ತಾಯಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಸ್ಲಂ ನಿವಾಸಿಗಳ ಧರಣಿ

ಹಕ್ಕು ಪತ್ರಗಳಿಗಾಗಿ ಒತ್ತಾಯಿಸಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಸ್ಲಂ ನಿವಾಸಿಗಳ ಧರಣಿ

ವಿಜಯಪುರ,ಜೂ.19:ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ 3 ನೇಯ ಉಪವಿಭಾಗ ಎದುರು ಸ್ಲಂ ನಿವಾಸಿಗಳು ಧರಣಿ ನಡೆಸಿ ಪ್ರತಿಭಟನೆ ನಡೆಸಿದರು.
ಸುಮಾರು 50 ಜನ ಸ್ಲಂ ನಿವಾಸಿಗಳು ಧರಣಿಯಲ್ಲಿ ಭಾಗವಯಿಸಿ ಬೇಕೆ ಬೇಕು ಹಕ್ಕು ಪತ್ರ ಬೇಕು ಎಂಬ ಘೋಷಣೆಗಳು ಕೂಗುತ್ತಾ ಕಚೇರಿ ಎದುರು ಕೆಲ ಹೊತ್ತು ಧರಣಿ ನಡೆಸಿದರು.
ಧರಣಿನಿರತ ಸ್ಲಂ ನಿವಾಸಿಗಳನ್ನು ಉದ್ದೇಶಿಸಿ ಬಿಜಾಪುರ ನಗರ ಸ್ಲಂ ಅಭಿವೃದ್ದಿ ಸಮಿತಿ ಅಧ್ಯಕ್ಷ ಮುತ್ತು ಭೋವಿ ಮಾತನಾಡಿ, ಶಿಖಾರಖಾನೆ ಭಾಗ -3 ಸ್ಲಂನಲ್ಲಿ 150 ಕಿಂತ ಹೆಚ್ಚು ಕುಟುಂಬಗಳು ವಾಸವಾಗಿದ್ದಾರೆ. ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಕಾಯಿದೆ ಅಡಿ ಘೋಷಣೆವೂ ಸಹ ಆಗಿದೆ ಹಾಗೂ ಹಕ್ಕು ಪತ್ರಗಳಿಗಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆಯವರು ಇಲಾಖೆಯಿಂದ ಸರ್ವೆ ಮಾಡಿದ್ದಾರೆ. ಕೆಲ ನಿವಾಸಿಗಳು ಹಕ್ಕು ಪತ್ರಕ್ಕಾಗಿ ಮಂಡಳಿಗೆ ಹಣವು ಸಹ ತುಂಬಿದ್ದಾರೆ. ಆದಾಗ್ಯೂ ಒಂದು ವóರ್ಷದಿಂದ ಹಕ್ಕು ಪತ್ರ ನೀಡಿಲ್ಲ. ಸುಳ್ಳು ಆಶ್ವಾಸನೆಗಳನ್ನು ನೀಡುವುದು, ಸರ್ವೆ ಮಾಡುವುದು, ಸ್ಲಂ ನಿವಾಸಿಗಳಿಂದ ಪದೇ ಪದೇ ದಾಖಲಾತಿ ಪಡೆಯುವುದು ನಡೆದಿದೆ. ಆದರೆ ಹಕ್ಕುಪತ್ರ ಮಾತ್ರ ನೀಡದೆ ಸತಾಯಿಸಲಾಗುತ್ತಿದೆ. ಇನ್ನಾದರೂ ಹಕ್ಕುಪತ್ರ ಶೀಘ್ರ ನೀಡಬೇಕು ಎಂದು ಹೇಳಿದರು.
ಕರ್ನಾಟಕ ಕೊಳಗೇರಿ ಅಭೀವೃದ್ದಿ ಮಂಡಳಿಯ ಅಧಿಕಾರಿಗಳಾದ ಮಿನಾಕ್ಷಿ ಚೋರಿ ಹಗೂ ಪಗಲ್ಲಾದ ಅವರು ಧರಣಿ ನಿರತರ ಬಳಿ ಆಗಮಿಸಿ, ಇವತ್ತು ಅಧಿಕಾರಿಗಳು ರಜೆಯಲ್ಲಿ ಇದ್ದಾರೆ. ನಾವುಗಳು ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸುತ್ತೇª.É ಬೇಗನೆ ಹಕ್ಕು ಪತ್ರ ಕೊಡುತ್ತೇವೆ. ಈಗಾಗಲೇ ಶಿಖಾರಖಾನೆ ಭಾಗ-3 ಸರ್ವೆ ಆಗಿದೆ. ಸ್ಲಂನ ಸರಹದ್ದು ನಿಗದಿ ಪಡಿಸಬೇಕಿದೆ. 15 ದಿನಗಳಲ್ಲಿ ಹಕ್ಕುಪತ್ರ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು. ಆಗ ಧರಣಿನಿರತ ಸ್ಲಂ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಮುಖಂಡರಾದ ಮೀನಾಕ್ಷಿ ಕಾಲೇಭಾಗ, ಪಂಡಿತ ಖಂಡಗಳೆ, ಪುಪ್ಪಾ ನೇಗಿನಾಳ, ಕೃಷ್ಣಾ ಜಾಧವ, ಅಕ್ರಂ ಮಾಶ್ಯಾಳಕರ, ದೇವೆಂದ್ರ ಸಕ್ರಿ, ರೇಖಾ ಹಲಸಂಗಿ, ರೇಣುಕಾ ಬೈಚಬಾಳ, ಕೈರುನ ಸುತಾರ, ರಿಯಾನಾ ಮುಲ್ಲಾ, ದುಂಡಪ್ಪ ಸಕ್ರಿ, ಜಾವಿದ ಮುಲ್ಲಾ, ಕಾಮಿನಿ ಕಸಬೆ, ರವಿ ದೊಡಮನಿ, ಮೀನಾಕ್ಷಿ ಸಿಂಗೆ, ರೇಣುಕಾ ಕೋಟ್ಯಾಳ, ಸರೋಜಾ ಕಟ್ಟಿಮನಿ ಸೇರಿದಂತೆ ಅನೇಕ ಸ್ಲಂ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.