Home ಜಿಲ್ಲೆ ಕಲಬುರಗಿ ಪ್ರಕೃತಿ ,ಪ್ರೇಮ, ಭಕ್ತಿಗಳ ಸಂಗಮದ ಮಾಸ ಶ್ರಾವಣ :ಡಾ. ಮೊಹರೀರ್

ಪ್ರಕೃತಿ ,ಪ್ರೇಮ, ಭಕ್ತಿಗಳ ಸಂಗಮದ ಮಾಸ ಶ್ರಾವಣ :ಡಾ. ಮೊಹರೀರ್

ಕಲಬುರಗಿ, ಆ. 17:”ಪ್ರಕೃತಿ ಪ್ರೇಮ ಮತ್ತು ಭಕ್ತಿಗಳ ಸಂಗಮವಾಗುವ ಸಮಯವೇ ಶ್ರಾವಣ ಮಾಸ. ಶ್ರವಣ ಭಕ್ತಿ ಯ ಮೂಲಕ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿರುವ ಈ ಮಾಸ ಅತ್ಯಂತ ವಿಶಿಷ್ಟವಾದದ್ದು” ಎಂದು ವಿದ್ವಾನ್ ಡಾ. ಲಕ್ಷ್ಮೀಕಾಂತ್ ಮೊಹರೀರ್ ಅವರು ಹೇಳಿದರು.

  ?ಅವರು ಕಳೆದ ಶುಕ್ರವಾರ ನಗರದ   ಅಡ್ವೋಕೇಟ್ಸ್ ಕಾಲನಿಯ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ *ಸಾಪ್ತಾಹಿಕ ಸತ್ಸಂಗ* ಕಾರ್ಯಕ್ರಮದಲ್ಲಿ ' *ಶ್ರಾವಣ ಮಾಸದ ಮಹತ್ವ*' ಕುರಿತು ಪ್ರವಚನ ನೀಡುತ್ತಿದ್ದರು.

   ?"ಒಳ್ಳೆಯ ವಿಚಾರಗಳನ್ನು ಕೇಳುವುದೇ ಜ್ಞಾನಾರ್ಜನೆಯ ಮೊದಲ ಮೆಟ್ಟಿಲು. ಶ್ರಾವಣ ಮಾಸ ಅಂತಹ ಅವಕಾಶಗಳನ್ನು ಒದಗಿಸುತ್ತದೆ. ಪುರಾಣ- ಪ್ರವಚನಗಳು, ಹರಿಕಥೆ, ಕೀರ್ತನೆಗಳು ಮತ್ತು ಸತ್ಸಂಗಗಳಲ್ಲಿ ಸಂತರ ಚರಿತ್ರೆ ಹಾಗೂ ಭಗವಂತನ ಲೀಲೆಗಳನ್ನು ಜ್ಞಾನಿಗಳ ಮುಖದಿಂದ ಶ್ರದ್ಧೆಯಿಂದ ಆಲಿಸುವುದರಿಂದ ಆತ್ಮೋದ್ಧಾರದ ದಾರಿ ಸುಗಮವಾಗುತ್ತದೆ " ಎಂದರು.

?”ಹಿಂದಿನಿಂದಲೂ ಕೃಷಿ ಚಟುವಟಿಕೆಗಳಿಗೆ ಪೂರ್ಣ ವಿರಾಮ ಸಿಗುತ್ತಿದ್ದ ಈ ಸಮಯದಲ್ಲಿ ನಮ್ಮ ಹಿರಿಯರು ಸಮಯವನ್ನು ಸದುಪಯೋಗಪಡಿಸಿಕೊಂಡು ಜೀವನದ ಮೌಲ್ಯಗಳನ್ನು ಅರಿಯಲು ಶ್ರವಣ ಸಂಸ್ಕøತಿ ಯನ್ನು ರೂಢಿಗೆ ತಂದರು.

    ಶ್ರಾವಣ ಮಾಸ ಪ್ರಮುಖವಾಗಿ ಮಹಿಳೆಯರ ಶ್ರದ್ಧೆ, ಭಕ್ತಿ ಮತ್ತು ಉಪವಾಸ ವ್ರತಗಳ ಮಾಸವಾಗಿದೆ," ಎಂದ ಡಾ. ಮೊಹರೀರ್ ಅವರು ಉಪವಾಸದ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ವಿವರಿಸಿದರು. "ನಮ್ಮ ಶರೀರದ ಜೀರ್ಣಕ್ರಿಯೆಯ ಸಾಮಥ್ರ್ಯ ಕಡಿಮೆ ಆಗುವುದರಿಂದ ಆಹಾರವನ್ನು ನಾವು ಕಡಿಮೆ ಸೇವಿಸಬೇಕು. ಹಾಗಾಗಿ ದೀರ್ಘಕಾಲದ ಉಪವಾಸ ಇಲ್ಲವೇ ಒಪೆÇ್ಪತ್ತಿನ  ಸೇವನೆ, ಹೀಗೆ ಪದ್ಧತಿಗಳು *ನೇಮ* ಅಥವಾ *ವ್ರತ* ಗಳ ನಾಮದೊಂದಿಗೆ ರೂಢಿಗತವಾದವು" ಎಂದು ಹೇಳಿದರು.

   ?ಶ್ರಾವಣ ಮಾಸ ಎಂದರೆ ಹಬ್ಬಗಳ, ದಿವ್ಯ ಸಂಭ್ರಮಗಳ ಮಾಸ ಎಂದ ಡಾ. ಮೊಹರೀರ್ ಅವರು ಹಬ್ಬಗಳ ಆಚರಣೆಗೆ ಬರುವುದಕ್ಕೆ ಕಾರಣವಾದ ಪೌರಾಣಿಕ ಹಿನ್ನೆಲೆಯ ಸ್ವಾರಸ್ಯಕರವಾದ ಕಥೆಗಳನ್ನು ಹೇಳಿದರು. ಅಲ್ಲದೆ ಹಬ್ಬಗಳ ಹಿಂದಿನ ವಿಜ್ಞಾನವನ್ನು ಕೂಡ ಬಿಡಿಸಿ ಹೇಳಿದರು. 

   "ಶ್ರಾವಣ ಮಾಸದಲ್ಲಿ ಸೋಮವಾರಕ್ಕೆ ವಿಶೇಷ ಸ್ಥಾನವಿದೆ. ಈ ದಿನದಂದು *ಶಿವ-ಪಾರ್ವತಿಯರ *ಮಹಾ ಕಲ್ಯಾಣ* ವಾಗಿರುವುದರಿಂದ ಶಿವನನ್ನು ಪೂಜಿಸುವ ಪರಿಪಾಠ ಬೆಳೆದು ಬಂದಿತು. ಅಲ್ಲದೆ *ಸಮುದ್ರ ಮಂಥನ* ವಾದಾಗ ಉದ್ಭವಿಸಿದ ಕಾರ್ಕೋಟಕ ವಿಷವನ್ನು ಸೇವಿಸಿ ಸಕಲ ಜೀವರಾಶಿಗಳನ್ನು ಕಾಪಾಡಿದ ಶಿವ, *ನೀಲಕಂಠ* ನಾದದ್ದು ಇದೇ ಸೋಮವಾರದಂದು. ಸಂಪತ್ತಿನ ಅಧಿದೇವತೆ *ಶ್ರೀ ಮಹಾಲಕ್ಷ್ಮಿ* , *ಸಮುದ್ರ ಮಂಥನ* ದಲ್ಲಿ ಉದ್ಭವಿಸಿದ್ದು ಶುಕ್ರವಾರದ ದಿನವೇ. ಹೀಗಾಗಿ ಎರಡನೇ ಶುಕ್ರವಾರ *ಶ್ರೀ ವರಮಹಾಲಕ್ಷ್ಮಿ ಪೂಜೆ* ಮಾಡುತ್ತಾರೆ," ಎಂದು ವಿವರಿಸಿದರು.

ನಾಗರ ಪಂಚಮಿ ನಮಗೆ ಸಕಲ ಪ್ರಾಣಿ ಪ್ರೇಮ, ಪರಿಸರ ಪ್ರಜ್ಞೆಯನ್ನು ಬೆಳೆಸಿದರೆ, ರಕ್ಷಾ ಬಂಧನ ವು ಭ್ರಾತೃತ್ವ, ಕೌಟುಂಬಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ತಿಳಿಸುತ್ತದೆ. ನಾಗರ ಪಂಚಮಿ ಹಬ್ಬದಲ್ಲಿ ಮಾಡುವ ತಿನಿಸುಗಳು ವರ್ಷ ಋತುವಿನಲ್ಲಿ ನಾವು ಸೇವಿಸಬೇಕಾದ ಆಹಾರಗಳ ಬಗ್ಗೆ ಅರಿವು ಮೂಡಿಸುತ್ತವೆ,” ಎಂದರು.

     "ಶ್ರಾವಣ ಮಾಸ ನಮ್ಮ ಲೇಖಕರು, ಕವಿಗಳಲ್ಲಿಯೂ ಬಹಳ ಕುತೂಹಲ ಮೂಡಿಸಿದ ತಿಂಗಳು" ಎಂದ ಅವರು,  ವರಕವಿ ಡಾ. ದ. ರಾ. ಬೇಂದ್ರೆ ಅವರ ಪ್ರಸಿದ್ಧವಾದ  ' *ಶ್ರಾವಣ ಬಂತು ಕಾಡಿಗೆ,ಬಂತು ನಾಡಿಗೆ, ಬಂತು ಬೀದಿಗೆ* ' ಎಂಬ ಕವಿತೆಯನ್ನು ನೆನಪಿಸಿ, "ಶ್ರಾವಣ ಮಾಸದಲ್ಲಿ ಪರಿಸರದೊಂದಿಗೆ ಸಮ್ಮಿಳಿತವಾದ ಲೌಕಿಕ ಹಾಗೂ ಆಧ್ಯಾತ್ಮಿಕ ಬಾಳನ್ನು ನಡೆಸಿದರೆ ನಮ್ಮ ಬಾಳೆಲ್ಲ ಆರೋಗ್ಯ, ಆನಂದಗಳೊಂದಿಗೆ ಸಮೃದ್ಧವಾಗುತ್ತದೆ" ಎಂದು ಡಾ. ಲಕ್ಷ್ಮೀಕಾಂತ್ ಮೊಹರೀರ್ ಅವರು ಅಭಿಪ್ರಾಯಪಟ್ಟರು.

  ಈ ಸಂದರ್ಭದಲ್ಲಿ ಡಾ. ಲಕ್ಷ್ಮೀಕಾಂತ್ ಮೊಹರೀರ್ ಅವರನ್ನು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

    ಆರಂಭದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಟ್ರಸ್ಟ್ ಗೌರವಾಧ್ಯಕ್ಷ ಜಿ. ಎಸ್. ಬಿರಾದಾರ ಅವರು ಸ್ವಾಗತಿಸಿದರು. ಸೋಮಶೇಖರ್ ಎಸ್. ರುಳಿ ಅವರು ಅತಿಥಿಗಳ ಪರಿಚಯ ಮಾಡಿದರು. ಟ್ರಸ್ಟ್‍ನ ಅಧ್ಯಕ್ಷ ಮಂಜುನಾಥ್ ಜೇವರಗಿ ಅವರು ವಂದಿಸಿದರು. ಖ. ಎ. ಭೂಸಾರೆ ಅವರು ಕಾರ್ಯಕ್ರಮ ನಿರ್ವಹಿಸಿದರು.
    ಇಂದಿನ ಈ ಕಾರ್ಯಕ್ರಮದಲ್ಲಿ ಶ್ರೀಯುತರಾ ದ ಶ್ರೀನಿವಾಸ ರೆಡ್ಡಿ,  ಅಶೋಕ ಕುಮಾರ ಜೇವರಗಿ,   ನರಸಿಂಹ ಮಾನಕರ್,  ನಾಗೇಂದ್ರ ಕಾರಭಾರಿ,  ಭೀಮಾಶಂಕರ  ಇಂಗಳೇಶ್ವರ,  ಜಗದೇವಪ್ಪ ಭೂಸಾರೆ, ನರಸಿಂಹ ದೇಶಪಾಂಡೆ , ಮಹಿಳಾ ಸಂಘದ ಸದಸ್ಯೆಯರು, ಕಾಲನಿಯ  ಸದ್ಭಕ್ತರು ಭಾಗವಹಿಸಿದ್ದರು.