Home ಜಿಲ್ಲೆ ಕಿರುಚಿತ್ರ ಬಿಡುಗಡೆ: ಪ್ರಶಸ್ತಿ ಪ್ರದಾನ

ಕಿರುಚಿತ್ರ ಬಿಡುಗಡೆ: ಪ್ರಶಸ್ತಿ ಪ್ರದಾನ


ಧಾರವಾಡ,ಅ ೧೧: ನಗರದ ರಂಗಾಯಣದಲ್ಲಿ ಪವರ್ ಆಫ್ ಯೂತ್ಸ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಅಂಚೆ ಪತ್ರ' ಶೈಕ್ಷಣಿಕ ಕಿರುಚಿತ್ರದ ಬಿಡುಗಡೆ ಹಾಗೂ ಪ್ರದರ್ಶನ, ತ್ಯಾಗಮಹಿ ಲೂಸಿ’ ಕಿರುಚಿತ್ರದ ಪೋಸ್ಟರ್ ಬಿಡುಗಡೆ ಮತ್ತು ಕಾಯಕ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಮಾಜಸೇವಕ ಡಾ. ರಮೇಶ್ ಮಹಾದೇವಪ್ಪನವರು ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ. ರಮೇಶ್ ಮಹಾದೇವಪ್ಪನವರಿಗೆ `ಕಾಯಕ ರತ್ನ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಗುರು ಚರಂತಯ್ಯ ಕೊಣ್ಣೂರು ಹಿರೇಮಠ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಬಸವರಾಜ ಗುರಿಕಾರ್, ಮಲ್ಲಿಕಾರ್ಜುನ ತೊದಲಬಾಗಿ, ಲೂಸಿ ಸಾಲ್ಡಾನ, ಡಾ. ಮೋಹನ್ ಕುಮಾರ್, ಜುಬೇದ ಬಾದಾಮಿ, ಕುಮಾರಿ ದೇವಿಕಾ ಹುಬ್ಬಳ್ಳಿ, ರವಿಚಂದ್ರ ದೊಡ್ಡಿಹಾಳ, ಎಲ್ಲೆöÊ ಲಕ್ಕಮ್ಮನವರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.