
ಕಲಬುರಗಿ:ಎಸ್.ಐ.ಆರ್. ರದ್ದುಗೊಳಿಸಬೇಕು ಹಾಗೂ ಜ್ಞಾನೇಶ್ ಕುಮಾರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ದೆಹಲಿ ಸೇರಿದಂತೆ ದೇಶದ ವಿವಿಧೆಡೆ ನಡೆದ ಶಾಂತಿಯುತ ಪ್ರತಿಭಟನೆಗಳ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆ ಹಾಗೂ ಮುಖಂಡರ ಅಕ್ರಮ ಬಂಧನವನ್ನು ಖಂಡಿಸಿ, ‘ಅಖಿಲ ಭಾರತ ಪ್ರತಿಭಟನಾ ದಿನ’ದ ಅಂಗವಾಗಿ ಇಂದು ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಆಕ್ರೋಶಭರಿತ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿವೈಓ (AIDYO) ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್. ಹೆಚ್. ಮಾತನಾಡಿದರು.
ಎಐಡಿಎಸ್‌ಓ (AIDSO) ಜಿಲ್ಲಾ ಅಧ್ಯಕ್ಷರಾದ ತುಳಜರಾಮ ಎನ್. ಕೆ. ಮಾತನಾಡುತ್ತಾ “ಜನವಿರೋಧಿ ನೀತಿಗಳ ವಿರುದ್ಧ ದನಿ ಎತ್ತಿದ ವಿದ್ಯಾರ್ಥಿ, ಯುವಜನ ಸಂಘಟನೆಗಳ ಮೇಲೆ ಸರ್ಕಾರ ಪೊಲೀಸ್ ಬಲಪ್ರಯೋಗ ಮಾಡುತ್ತಿದೆ. ದೆಹಲಿ, ಕರ್ನಾಟಕ, ಅಸ್ಸಾಂ, ಬಿಹಾರ ಸೇರಿದಂತೆ ದೇಶದ ಹಲವೆಡೆ ಪೊಲೀಸರು ತೀವ್ರ ದಬ್ಬಾಳಿಕೆ ನಡೆಸಿದ್ದು, ಅನೇಕ ರಾಷ್ಟ್ರೀಯ, ರಾಜ್ಯ ನಾಯಕರು ಹಾಗೂ ನೂರಾರು ಎಐಡಿಎಸ್‌ಓ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣವೇ ಬಂಧಿತ ಎಲ್ಲಾ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಹಾಗೂ ಎಸ್.ಐ.ಆರ್. ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಶಿಲ್ಪಾ ಬಿ. ಕೆ., ಜಿಲ್ಲಾ
ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರಾದ ರಮೇಶ್ ದೆವಕರ್ ,ಉಪಾಧ್ಯಕ್ಷರಾದ ಪ್ರೀತಿ ದೊಡ್ಡಮನಿ, ಗೋವಿಂದ ಯಳವಾರ, ನಾಗರಾಜ್, ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಸ್ಪೂರ್ತಿ, ಬಾಬು, ಯುವರಾಜ್, ರಾಹುಲ್ ಸೇರಿದಂತೆ ಸಂಘಟನೆಯ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.























