
ಲಕ್ಷೆ÷್ಮÃಶ್ವರ,ಅ.೧೧: ದಸರಾ ಮಹೋತ್ಸವದ ಅಂಗವಾಗಿ ದಸರಾ ಸಮಿತಿ ಹಮ್ಮಿಕೊಂಡಿರುವ ದುರ್ಗಾ ದೌಡು ಕಾರ್ಯಕ್ರಮಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದೇವಿ ದ್ಯಾಮವ್ವನ ದೇವಸ್ಥಾನದಲ್ಲಿ Ä ವಿಶೇಷ ಪೂಜೆ ಪುನಸ್ಕಾರಗಳು ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿದವು.
ದುರ್ಗಾ ದೌಡು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಕರೆವಾಡಿ ಮಠದ ಮಳೆ ಮಲ್ಲಿಕಾರ್ಜುನ ಶ್ರೀಗಳು ಈ ನವರಾತ್ರಿ ಉತ್ಸವವು ೯ ದಿನಗಳ ಕಾಲ ಜರುಗಲಿದ್ದು ಪುರಾಣ ಪ್ರವಚನಗಳು ಧಾರ್ಮಿಕ ಕಾರ್ಯಕ್ರಮಗಳು ನಡೆಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ.
ನಾವು ನಮ್ಮ ಧರ್ಮ ಸಂಸ್ಕöÈತಿ ಪರಂಪರೆ ಇತಿಹಾಸಗಳನ್ನು ಮರೆಯಬಾರದು ಯಾರು ಧರ್ಮವನ್ನು ಕಾಪಾಡುತ್ತಾರಯೋ ಧರ್ಮ ಅವರನ್ನು ಕಾಪಾಡುತ್ತದೆ ಪ್ರತಿಯೊಬ್ಬರು ನೀತಿ ಧರ್ಮ ನ್ಯಾಯ ಇವುಗಳ ಮೂಲಕ ಜೀವನ ಸಾಗಿಸಬೇಕು ಮತ್ತು ಲಿಂಗೈಕ ಜಗದ್ಗುರು ವೀರಗಂಗಾಧರರು ಹೇಳಿದಂತೆ ಮಾನವ ಧರ್ಮ ಅತ್ಯಂತ ಶ್ರೇಷ್ಠವಾಗಿದ್ದು ಧರ್ಮದಿಂದ ಮಾತ್ರ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶ್ರೀಗಳವರ ಉದ್ಘೋಷ ಸೂರ್ಯ ಚಂದ್ರ ಇರುವವರೆಗೂ ಶಾಶ್ವತ ಎಂದು ಹೇಳಿದರು.
ಮುಖಂಡ ಗುರುನಾಥ ದಾನಪ್ಪನವರ್ ಯುವಕರನ್ನು ಸಂಘಟಿಸಿ ಪ್ರತಿ ವರ್ಷ ದುರ್ಗಾ ದೌಡು ಹಮ್ಮಿಕೊಳ್ಳುವ ಮೂಲಕ ಪ್ರತಿಯೊಂದು ದೇವಸ್ಥಾನಕ್ಕೂ ತಲುಪಿ ಭಕ್ತಿ ಸಮರ್ಪಣೆ ಮಾಡಿ ಪ್ರತಿನಿತ್ಯ ಕೈಗೊಳ್ಳುವ ಧಾರ್ಮಿಕ ಕಾರ್ಯ ಅತ್ಯಂತ ಶ್ರೇಷ್ಠವಾಗಿದೆ ಎಂದರು.
ಈ ಸಂದರ್ಭದಲ್ಲಿ ಗುರುನಾಥ್ ದಾನಪ್ಪನವರ ರಾಘವೇಂದ್ರ ಪೂಜಾರ್ ಬಸವರಾಜ ಅರಳಿ ರವಿ ಲಿಂಗ ಶೆಟ್ಟಿ , ಶಿವಯೋಗಿ ಅಂಕಲಕೋಟಿ ಶಂಕರ್ ಬಾಳಿಕಾಯಿ ಮಹೇಶ ಹೊಗೆ ಸೊಪ್ಪಿನ ಬಸವೇಶ್ ಮಹಾಂತ ಶೆಟ್ಟರ ಗುರುರಾಜ್ ಪಾಟೀಲ್ ಕುಲಕರಣಿ ಗಣೇಶ್ ಬನ್ನಿ ಮಲ್ಲನಗೌಡರು ಪಾಟೀಲ ದ್ಯಾಮಣ್ಣ ಗಡೇದ ಗಂಗಾಧರ್ ಪುರಾಣಿಕ ಮಠ ಗುಡಗುಂಟಿ ತಿಪ್ಪಣ್ಣ ಸಂಶಿ ಪ್ರವೀಣ್ ಪಾಟೀಲ ಶಿವನ ಗೌಡ್ರು ಪಾಟೀಲ ಸೇರಿದಂತೆ ಅನೇಕರಿದ್ದರು.























