Home ಜಿಲ್ಲೆ ಬೆಂಗಳೂರು ಏಳು ರೌಡಿ ಶಿಟರ್‌ಗಳ ಬಂಧನ

ಏಳು ರೌಡಿ ಶಿಟರ್‌ಗಳ ಬಂಧನ

ಮಾಲೂರು ಜೂ೧೬: ತಾಲೂಕಿನ ತೊರಲಕ್ಕಿ ಗ್ರಾಮದ ಬಳಿ ಇರುವ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ದಾಂದಲೇ ನಡೆಸಿ ಕ್ಯಾಶಿಯರ್ ಮೇಲೆ ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದ ರೌಡಿಶೀಟರ್ ಪ್ರತಾಪ್ ವಿಶ್ವನಾಥ್ ಗೌಡ ಮತ್ತು ಆತನ ೯ ಸಹಚರರನ್ನು ರಚಿಸಲಾಗಿದ್ದ ತಂಡಗಳು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಪೋಲಿಸರ ಕಾರ್‍ಯವೈಖರಿಯನ್ನು ಶ್ಲಾಘಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ತಿಳಿಸಿದರು.


ತಾಲೂಕಿನ ಮಾಸ್ತಿ ಗ್ರಾಮದ ಪೊಲೀಸ್ ಠಾಣಾ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಶುಕ್ರಿವಾಲ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ತಾಲೂಕಿನ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ ೮ರ ರಾತ್ರಿ ೧೦ ಗಂಟೆ ಸಮಯದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ರೌಡಿ ಶೀಟರ್ ಪ್ರತಾಪ್ ವಿಶ್ವನಾಥ್ ಗೌಡ ಮತ್ತು ಈತನ ಸಹಚರರು.


ಸೇರಿ ಒಳಸಂಚು ರೂಪಿಸಿ ತೊರಲಕ್ಕಿ ಗ್ರಾಮದ ಸಮೀಪ ಇರುವ ಎಚ್.ಕೆ.ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಗಂಗಸಂದ್ರ ಗ್ರಾಮದ ಬಳಿ ಇರುವ ತಿರುಮಲ ಬಾರಿಗೆ ಕಾರು ಮತ್ತು ಎರಡು ಚಕ್ರ ವಾಹನಗಳಲ್ಲಿ ಹೋಗಿ ಅಕ್ರಮ ಗುಂಪು ಕಟ್ಟಿಕೊಂಡು ಅಫ್ತಾ ವಸೂಲಿ ಮಾಡುವ ಉದ್ದೇಶದಿಂದ ಹಾಗೂ ಈ ಹಿಂದೆ ಕುಡಿಯಲು ಉಚಿತವಾಗಿ ಮಧ್ಯ ನೀಡದೆ ಇದ್ದರಿಂದ ಬಾರ್‌ನ ಕ್ಯಾಶಿಯರಿಗೆ ಕೊಲೆ ಮಾಡುವ ಉದ್ದೇಶದಿಂದ ಬಿಯರ್ ಬಾಟಲ್ ಮತ್ತು ಕಲ್ಲುಗಳಿಂದ ಬಾರ್ ಮುಂಭಾಗದ ಶೋಕೇಸ್ ಮತ್ತು ಬಾರ್ ಒಳಗೆ ಜೋಡಿಸಿದ್ದ ಮಧ್ಯದ ಬಾಟಲುಗಳನ್ನು ಹೊಡೆದು ಹಾಕಿ ಬೆದರಿಕೆ ಹಾಕಿದ್ದಾರೆ. ಈ ಘಟನೆಯನ್ನು ಬಾರ್ ಮುಂದೆ ಇದ್ದ ಚಿಲ್ಲರೆ ಅಂಗಡಿ ವ್ಯಾಪಾರ ಮಾಡುತ್ತಿದ್ದ ರೂಪ ಎಂಬುವರು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದನ್ನು ನೋಡಿ ಆಕೆಗೂ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.


ಅದೇ ದಿನ ಮಾಸ್ತಿ ಗ್ರಾಮದ ಗಂಗಸಂದ್ರ ಗ್ರಾಮದ ಗೇಟ್ನಲ್ಲಿರುವ ತಿರುಮಲ ಬಾರ್ ಮತ್ತು ರೆಸ್ಟೋರೆಂಟ್‌ಗೆ ಹೋಗಿ ಅಲ್ಲಿನ ಕ್ಯಾಶಿಯರ್ ಕೊಲೆ ಮಾಡುವ ಉದ್ದೇಶದಿಂದ ಹಾಗೂ ಕುಡಿಯಲು ಮಧ್ಯೆ ನೀಡದೆ ಇದ್ದಿದ್ದರಿಂದ ಒಳಗೆ ಜೋಡಿಸಿದ್ದ ಮಧ್ಯದ ಬಾಟಲುಗಳನ್ನು ಹೊಡೆದು ಹಾಕಿ ಬೆದರಿಕೆಯನ್ನು ಹಾಕಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇನ್ಸ್‌ಪೆಕ್ಟರ್‍ಗಳ ಮೂರು ತಂಡಗಳನ್ನು ರಚಿಸಿ ಮೂರು ತಂಡಗಳ ಇನ್ಸ್‌ಪೆಕ್ಟರ್‌ಗಳು ಕಾರ್ಯಪ್ರವೃತ್ತರಾಗಿ ಶೋಧ ಕಾರ್ಯನಡೆಸಿ ವಿಶ್ವನಾಥ ಗೌಡ ಪ್ರತಾಪ್ ಹಾಗೂ ೯ ಆರೋಪಿಗಳಾದ ಚಿಕ್ಕದಾನವಹಳ್ಳಿ ಮುರುಗೇಶ್, ಬಂಗಾರಪೇಟೆ ತಾಲೂಕಿನ ಮಾರಂಡಹಳ್ಳಿ ಗ್ರಾಮದ ಸುದರ್ಶನ್, ಮುತ್ತೇನಹಳ್ಳಿ ಗ್ರಾಮದ ಸತೀಶ್, ಬೆಡ್ಡಶೆಟ್ಟಿಹಳ್ಳಿ ಗ್ರಾಮದ ಮಣಿ, ದಿನ್ನಹಳ್ಳಿ ಗ್ರಾಮದ ದಿನೇಶ್, ಚಂಬೇನಹಳ್ಳಿ ಗ್ರಾಮದ ಎ.ಎಸ್.ಅಮೃತ್ ರಾಜ್, ಅಣಿಕರಹಳ್ಳಿ ಗ್ರಾಮದ ಬ್ಯಾಟಪ್ಪ, ಬಾಲ್ ರಾಜು, ಅವರನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಆರೋಪಿಗಳನ್ನು ಬಂಧಿಸಿದ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ತಂಡಗಳ ರಾಮಪ್ಪ ಗುತ್ತೇರ್, ವಿಟ್ಟಲ್ ತಳವಾರ್, ಸದಾನಂದ, ಅಣ್ಣಯ್ಯ, ಓಂ ಪ್ರಕಾಶ್, ಗೌಡ ಅವರ ಕಾರ್ಯವೈಖರಿಯನ್ನು ಶ್ಲಾಘಸುವುದಾಗಿ ಹೇಳಿದರು. ಡಿವೈಎಸ್ಪಿ ವಿ.ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ಮಾಲೂರು ಮಾಸ್ತಿ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ನಾಗಭೂಷಣ್ ರೆಡ್ಡಿ, ಆರ್.ಕೆ.ಬಾಬು, ಕೃಷ್ಣಮೂರ್ತಿ, ಬಾಬು, ಶಫಿಉಲ್ಲಾ, ರಾಜೇಶ್, ನಿಖಿಲ್, ನಾಗೇಶ್, ಕಣ್ಣಪ್ಪ, ನಾಗೇಂದ್ರ, ತಾಂತ್ರಿಕ ವಿಭಾಗದ ಮುರಳಿ, ಶ್ರೀನಾಥ್, ಮಾಲೂರು ಠಾಣೆಯ ನಾಗಪ್ಪತಳವಾರ್, ಮುರಳಿ, ನಾಗರಾಜ್ ಪೂಜಾರ್, ಗಲ್‌ಪೇಟೆ ಠಾಣೆಯ ವೆಂಕೋಬ್ ರಾವ್, ಶಫಿ ಉಲ್ಲಾ, ಗಂಗಾಧರ್, ಕೆ.ಟಿ.ಮಂಜುನಾಥ್, ತಂಡಗಳಲ್ಲಿ ಭಾಗವಹಿಸಿದ್ದರು.