
ಕಲಬುರಗಿ,ಜೂ.17-ಗರ್ಭಿಣಿಯರು ಸಂಗೀತ ಆಲಿಸಿದರೆ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಪೂಜ್ಯ ಪ್ರಭುಶ್ರೀ ತಾಯಿ ಹೇಳಿದರು.
ನಗರದ ಕಲಾಮಂಡಳದಲ್ಲಿ ಜೂನ್ 15 ರಂದು ಸೋಮವಾರ ಪ್ರತಿಭಾ ಸಾಹಿತ್ಯ ಮತ್ತು ಸಾಂಸ್ಕøತಿಕ ಕಲಾಸಂಸ್ಥೆ, ನಂದೂರ (ಕೆ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಸೌರಭ’ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಪ್ರಕೃತಿಯಲ್ಲಿಯೂ ಸಂಗೀತದ ನಾದ ಅಡಕವಾಗಿದ್ದು, ಸಂಗೀತ ಮನುಷ್ಯನಿಗೆ ಮಾನಸಿಕ ಶಾಂತಿ ಯೊಂದಿಗೆ ವ್ಯಕ್ತಿತ್ವಕ್ಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗವು ಸಾಹಿತ್ಯ, ಸಂಗೀತ ಹಾಗೂ ಕಲೆಯನ್ನು ಜಗತ್ತಿಗೆ ಪರಿಚಯಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ.ಸದಾನಂದ ಪೆರ್ಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಂಗೀತ ಇರುವೆಡೆ ನೆಮ್ಮದಿ ಇರುತ್ತದೆ. ಸಾಹಿತ್ಯ ಮತ್ತು ಸಂಗೀತವು ಸಮಾಜಕ್ಕೆ ಅಮೂಲ್ಯ ಕೊಡುಗೆಗಳಾಗಿದ್ದು, ಅವು ಮಾನವನ ಬದುಕನ್ನು ಸಮೃದ್ಧಗೊಳಿಸುತ್ತವೆ ಶಾಂತಿ – ನೆಮ್ಮದಿಯನ್ನು ನೀಡುತ್ತದೆ ಎಂದರು .
ಸಂಗೀತಗಾರರು ಕೀಳರಿಮೆಯಿಂದ ಹೊರಬಂದು, ಪ್ರಶಸ್ತಿ ಹಾಗೂ ಗೌರವಗಳ ಹಿಂದೆ ಬೀಳದೆ ಸಂಗೀತವನ್ನು ತಪಸ್ಸಿನಂತೆ ಸ್ವೀಕರಿಸಿ ಗುರುಗಳ ಮಾರ್ಗದರ್ಶನದಲ್ಲಿ ಸಂಗೀತ ಕಲಿಯಬೇಕು. ಮೊಬೈಲ್‍ನಂತಹ ಆಧುನಿಕ ಸಾಧನಗಳ ಅವಲಂಬನೆ ಕಡಿಮೆ ಮಾಡಿ ಸಂಗೀತದ ಸಾಧನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಸಂಗೀತಕ್ಕೆ ಜಾತಿ, ಮತ, ಪಂಥ ಹಾಗೂ ಧರ್ಮಗಳ ಬೇಧವಿಲ್ಲ. ವಚನಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸಂಗೀತ ಕ್ಷೇತ್ರಕ್ಕೆ ಸಿದ್ದರಾಮ ಜಂಬಲದಿನ್ನಿ ಅವರ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವೀರಯ್ಯ ಸ್ವಾಮಿ ಬೀದಿಮನಿ, ಸಿದ್ದಾರಾಮ ಪಾಟೀಲ,ಶಿವರುದ್ರ ಕರಿಕಲ್ಲ್, ಸಂಜೀವ ಕುಮಾರ ಹುಲಸೂರ, ಸಿದ್ದರಾಮರೆಡ್ಡಿ, ಡಾ ಆನಂದ ಪಾಟೀಲ ಸಿದ್ದಾಮಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು, ಸಂಸ್ಥೆ ಕಾರ್ಯದರ್ಶಿ ನಾಗೇಂದ್ರ ಕಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಣ್ಣಾರಾಯ ಶೆಳ್ಳಗಿ, ಮತ್ತಿಮಡು,ಅನೀಲ ಮಠಪತಿ, ಬಸವರಾಜ ಸ್ಥಾವರಮಠ,ಆನಂದ ನಂದಿಕೋಳಮಠ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮೌನೇಶ್ ಪಂಚಾಳ್ ತಬಲಾ ಸಾತ್ ನೀಡಿದರು.
ಸಂಗೀತ ಕಲಾವಿದರಿಗೆ ಗೌರವಿಸಿ ಸನ್ಮಾನಿಸಿದರು, ಡಾ ವೀರಶೆಟ್ಟಿ ಗಾರಂಪಳ್ಳಿ, ಡಾ ಬಸವರಾಜ ಭಾಗಾ, ಸಿ.ಎಸ್. ಮಾಲಿ ಪಾಟೀಲ, ಉಪಸ್ಥಿತರಿದ್ದರು, ಶರಣಗೌಡ ಪಾಟೀಲ ಪಾಳಾ ನಿರೂಪಿಸಿದರು, ಸತೀಶ ಪಾಟೀಲ ವಂದಿಸಿದರು.


























