Home ಜಿಲ್ಲೆ ಕಲಬುರಗಿ ಸಾಂಸ್ಕøತಿಕ ಸಿರಿವಂತಿಕೆ ಪಡೆದ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ: ರವಿ ದೇಗಾಂವ

ಸಾಂಸ್ಕøತಿಕ ಸಿರಿವಂತಿಕೆ ಪಡೆದ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ: ರವಿ ದೇಗಾಂವ

ಕಲಬುರಗಿ,ಜೂ.17-ಸಾಂಸ್ಕೃತಿಕ ಸಿರಿವಂತಿಕೆ ಪಡೆದ ಭಾರತದೇಶ ವಿಶ್ವದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಿಂದಿನವರಿಂದ ಪರಂಪರಾಗತವಾಗಿ ಬಂದಿರುವ ಹಲವು ಕಲೆಗಳನ್ನು ಮುಂದಿನ ಪೀಳಿಗೆಯವರೆಗೂ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಇಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಹೊಸ ಪ್ರತಿಭೆಗಳಗೆ ಉತ್ತೇಜನ ನೀಡುತ್ತಿದೆ. ಇದು ಕೇವಲ ಮನರಂಜನೆ ಮಾತ್ರ ಸೀಮಿತಗೊಳಿಸದೇ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ರವಿ ದೇಗಾಂವ ಹೇಳಿದರು.
ಗುರುಬಸವ ನಗರದ ಶಿವಮಂದಿರ ದೇವಸ್ಥಾನ ಆವರಣದಲ್ಲಿ ಜಯ ಭುವನೇಶ್ವರಿ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ವೀರಯ್ಯಸ್ವಾಮಿ ಬೀದಿಮನಿ, ಕರ್ನಾಟಕ ನವ ನಿರ್ಮಾಣ ಸೇನೆ ಉಪಾಧ್ಯಕ್ಷ ಪ್ರಶಾಂತ ವಿ. ಮಠಪತಿ, ಗುರಣ್ಣ ಚಿಣಮಗೇರಿ, ಅಂಗಣ್ಣ ರೆಡ್ಡಿ, ಅಮೃತರಾವ ಅತನೂರ, ಬಾಬುರಾವ ಸಗರಗುಂಟೆ, ಶರಣಗೌಡ ಪೆÇಲೀಸ್ ಪಾಟೀಲ ಆಗಮಿಸಿದರು.
ಸಾಂಸ್ಕೃತಿಕ ಸೌರಭ ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಕಲಾವಿದರಾದ ಹಣಮಂತರಾವ ಕುಲಕರ್ಣಿ, ಅಣ್ಣಾರಾವ ಶಳ್ಳಗಿ ಮತ್ತಿಮೂಡ, ಸೈದಪ್ಪ ಸಪ್ಪನಗೋಳ ಚೌಡಾಪೂರ, ಪವಿತ್ರಾ ವಿಶ್ವನಾಥ ರಾಜನಾಳ, ಗುರುಶಾಂತಯ್ಯ ಭೂಸನೂರ, ಅನಂದ ಚಿಣಮಗೇರಿ, ರೇವಣಸಿದ್ದ ದೇ.ಕಲ್ಲೂರ, ವೀರಭದ್ರಯ್ಯ ಜಿ.ಎಸ್., ಚೇತನ ಎಸ್.ಬೀದಿಮನಿ ಭಾಗವಹಿಸಿದ್ದರು.
ಸಂಸ್ಥೆ ಕಾರ್ಯಧರ್ಶಿ ಉದಯಕುಮಾರ ಸ್ವಾಗತಿಸಿದರು. ಬಂಡಯ್ಯಸ್ವಾಮಿ ಸುಂಟನೂರ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರಾದ ವನಿತಾ ಮಠಪತಿ ವಂದಿಸಿದರು.