Home ಸುದ್ದಿ ರಾಷ್ಟ್ರೀಯ ಮಧ್ಯಪ್ರಾಚ್ಯ ಸಂಘರ್ಷದಿಂದ ಆರ್ಥಿಕ ನಷ್ಟ: ಮೋದಿ

ಮಧ್ಯಪ್ರಾಚ್ಯ ಸಂಘರ್ಷದಿಂದ ಆರ್ಥಿಕ ನಷ್ಟ: ಮೋದಿ

ಏವಿಯನ್ (ಪ್ರಾನ್ಸ್).ಜೂ,17- ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ನಡೆದ ಸಂಘರ್ಷದ ಸಮಯದಲ್ಲಿ ಅಮೆರಿಕದ ಮಿಲಿಟರಿ ದಾಳಿಯಲ್ಲಿ ಸಾವನ್ನಪ್ಪಿದ ಭಾರತೀಯ ನಾವಿಕರ ವಿಷಯವನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಪ್ರಸ್ತಾಪಿಸಿದ ಪ್ರಧಾನಿ ನರೆಂದ್ರ ಮೋದಿ ಅವರು ಈ ಸಂಘರ್ಷ ಪಶ್ಚಿಮ ಏಷ್ಯಾದಾದ್ಯಂತದ ದೇಶಗಳ ಮೇಲೆ ಗಮನಾರ್ಹ ಮಾನವ ಮತ್ತು ಆರ್ಥಿಕ ನಷ್ಟವನ್ನುಂಟುಮಾಡಿದೆ ಎಂದು ಹೇಳಿದ್ದಾರೆ


“ಪಶ್ಚಿಮ ಏಷ್ಯಾದಲ್ಲಿ ಶಾಂತಿ ಪ್ರಯತ್ನಗಳಲ್ಲಿ ಆಗಿರುವ ಪ್ರಗತಿಯನ್ನು ಭಾರತ ಸ್ವಾಗತಿಸುತ್ತದೆ ಆದರೆ ಸಂಘರ್ಷದಿಂದ ಈ ಪ್ರದೇಶದ ಸ್ನೇಹಪರ ದೇಶಗಳಲ್ಲಿ ಜೀವ ಮತ್ತು ಆಸ್ತಿಪಾಸ್ತಿಗೆ ಹಾನಿಯನ್ನುಂಟುಮಾಡಿದೆ. ಹೊರ್ಮುಜ್ ಜಲಸಂಧಿಯ ಮೂಲಕ ಸಮುದ್ರ ವ್ಯಾಪಾರಕ್ಕೆ ಅಡ್ಡಿಯು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಹಲವಾರು ಭಾರತೀಯ ನಾಗರಿಕರು ಸಹ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದ್ದಾರೆ
ಫ್ರಾನ್ಸ್‍ನ ಎವಿಯನ್‍ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ “ಹೊಸ ಪಾಲುದಾರಿಕೆ ರೂಪಿಸುವುದು ಮತ್ತು ಅಂತರರಾಷ್ಟ್ರೀಯ ಒಗ್ಗಟ್ಟಿನ ಪುನರ್ನಿರ್ಮಾಣ” ಕುರಿತ ಔಟ್ರೀಚ್ ಅಧಿವೇಶನದಲ್ಲಿ ಮದ್ಯ ಪ್ರಾಚ್ಯ ಸಂಘರ್ಷ ಈ ಪ್ರದೇಶದಾದ್ಯಂತದ ದೇಶಗಳ ಮಾನವ ಮತ್ತು ಆರ್ಥಿಕ ನಷ್ಟವನ್ನುಂಟುಮಾಡಿದೆ ಎಂದು ತಿಳಿಸಿದ್ದಾರೆ
ಪಶ್ಚಿಮ ಏಷ್ಯಾ ಸಂಘರ್ಷದ ವ್ಯಾಪಕ ಪರಿಣಾಮ ಎತ್ತಿ ತೋರಿಸಿದ ಅವರು ಸಮುದ್ರ ವ್ಯಾಪಾರದಲ್ಲಿನ ಅಡಚಣೆಗಳು ಮತ್ತು ಪ್ರಮುಖ ಹಡಗು ಕಾರಿಡಾರ್‍ಗಳಲ್ಲಿ ಕಾರ್ಯನಿರ್ವಹಿಸುವ ನಾವಿಕರು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಅವರು ಗಮನ ಸೆಳೆದಿದ್ದಾರೆ


“ಜಾಗತಿಕ ಕಡಲ ವ್ಯಾಪಾರದ ಮೂಲಕ ರಾಷ್ಟ್ರಗಳನ್ನು ಸಂಪರ್ಕಿಸುವ ನಾವಿಕರ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಸಮುದ್ರ ಮಾರ್ಗಗಳು ಸುರಕ್ಷಿತವಾಗಿರುವುದನ್ನು ಮತ್ತು ನಾವಿಕರು ಭಯವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬಹುದೆಂದು ನಾವು ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.


ಭಾರತ ಎಲ್ಲಾ ದೇಶಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಸಿದ್ಧವಾಗಿದೆ .ಭಾರತ ತನ್ನ ಎಲ್ಲಾ ಪಾಲುದಾರರೊಂದಿಗೆ ಕೆಲಸ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ಅವರು ಹೇಳಿದ್ದಾರೆ
ಓಮನ್ ಕೊಲ್ಲಿಯಲ್ಲಿ ಪಲಾವ್ ಧ್ವಜ ಹೊತ್ತ ತೈಲ ಟ್ಯಾಂಕರ್ ಸೆಟ್ಟೆಬೆಲ್ಲೊ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿದಾಗ ಮೂವರು ಭಾರತೀಯ ಪ್ರಜೆಗಳು ಸಾವನ್ನಪ್ಪಿದ ಕೆಲವು ದಿನಗಳ ನಂತರ ಈ ವಿಷಯ ಪ್ರಸ್ತಾಪ ಮಾಡಿದ ಅವರು ಭಾರತೀಯ ಸಿಬ್ಬಂದಿ ಇದ್ದ ಮೂರು ಹಡಗುಗಳಾದ ಜೂನ್ 8 ರಂದು ಎಂಟಿ ಮಾರಿಸಿವೆಕ್ಸ್, ಜೂನ್ 10 ರಂದು ಎಂಟಿ ಸೆಟ್ಟೆಬೆಲ್ಲೊ ಮತ್ತು ಜೂನ್ 11 ರಂದು ಎಂಟಿ ಜಲವೀರ್ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಸೆಂಟ್ರಲ್ ಕಮಾಂಡ್ ಹೇಳಿತ್ತು.
ಈ ಮೂಲಕ ಇರಾನಿನ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಉಲ್ಲಂಘಿಸಿದ್ದಾರೆ ಅಥವಾ ಇರಾನಿನ ತೈಲ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದು ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ತಿಳಿಸಿದ್ದಾರೆ


ಈ ನಡುವೆ ಹೊರ್ಮುಜ್ ಜಲಸಂಧಿಯಿಂದ ಹೊರಡುವ ಭಾರತೀಯ ಹಡಗುಗಳ ವಿರುದ್ಧ ವಿಫಲ ಡ್ರೋನ್ ದಾಳಿ ನಡೆಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆಯನ್ನೂ ಇರಾನ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು