
ಕಾಳಗಿ,ಜೂ 17: ತಾಲೂಕಿನ ಗೊಟೂರ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದಾದಾ ಅಲಿ ಅಬ್ಬಾಸ ಜಾತ್ರಾ ಮಹೋತ್ಸವ ಜೂ 25 ರಿಂದ 27 ರವರೆಗೆ ನಡೆಯಲಿದೆ.
ಜೂ. 25 ರಂದು ಬೆಳಿಗ್ಗೆ 8 ಗಂಟೆಗೆ ಗಂಧ ಹಾಗೂ 26 ರಂದು ದೀಪೆÇೀತ್ಸವ 27 ರಂದು ಜಿಯಾರತ್ ಜರುಗಲಿದೆ.
ಗಂಧವು 25 ರಂದು ಮುಂಜಾನೆ 8 ಗಂಟೆಗೆ ಅಬ್ಬಾಸ ಅಲಿ ಮುತ್ಯಾ ರವರ ಮನೆಯಿಂದ ಹೊರಡಲಿದ್ದು ಜಾಮಿಯಾ ಮಸ್ಜಿದ್ ಮುಖಾಂತರ ದರ್ಗಾಕ್ಕೆ ತಲುಪಲಿದೆ. ಮುಂಜಾನೆ 11.35ಕ್ಕೆ ಸಲಾಂ, ದರುದ ಶರೀಫ, ಮುಖಾಂತರ ಗಂಧೋತ್ಸವ ಮಾಡಲಾಗುವುದು. ಎಲ್ಲಾ ಅಲಿ ಅಬ್ಬಾಸ ಮುತ್ಯಾನವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಲಿ ಅಬ್ಬಾಸ ಮುತ್ಯಾನವರ ಆಶೀರ್ವಾದ ಪಡೆದುಕೊಳ್ಳಲು ಕಮಿಟಿಯಿಂದ ಕೋರಲಾಗಿದೆ.


























