ಧಾರವಾಡ ಜಿಲ್ಲಾಧಿಕಾರಿಗಳಾದ ಆರ್ ಸ್ನೇಹಲ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ಇವರು ನವಲೂರಿನ ಸರ್ಕಾರಿ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಪಿಎಂ ಪೋಷನ ಅಭಿಯಾನದ ಉಪಹಾರ ನೀಡುವಿಕೆಯನ್ನು ಪರಿಶೀಲಿಸಿ, ಪ್ರತಿ ವರ್ಗದ ಮಗು ಎಷ್ಟು ಗ್ರಾಮ ಉಪಹಾರ ಸೇವಿಸುತ್ತದೆ ಎಂಬುದನ್ನು ವೇಯಿಂಗ್ ಮಷೀನ್ ಮೂಲಕ ಪರಿಶೀಲಿಸಿ ದಾಖಲಿಸಿದರು