ನಗರದ ಹಲಸೂರಿನ ಮಹಿಳಾ ಮಿಲನ್ ಟ್ರಸ್ಟ್ ರೋಟರಿ ಕ್ಲಬ್ ಸಹಯೋಗದೊಂದಿಗೆ ಕೆಜಿಎಫ್‌ನಲ್ಲಿ ಅಗತ್ಯವಿರುವ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಐಪಿಎಸ್ ಅಧಿಕಾರಿ ಶಿವಾಂಶು ರಜಪೂತ್, ಐಎಎಸ್ ಅಧಿಕಾರಿ ಆರ್. ವೆಂಕಟಾಚಲಪತಿ ಹಾಗೂ ಸೋಮಸುಂದರನ್ ರವರುಗಳು ಭಾಗವಹಿಸಿದ್ದರು.