Home ಜಿಲ್ಲೆ ಬಿ. ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಬಿ. ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಸಂಜೆವಾಣಿ ವಾರ್ತೆ
ವಿಜಯಪುರ, ಜೂ. ೨: ನಗರದ ಪ್ರತಿಷ್ಟಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿಬಿಎಸ್‌ಇ) ಶಾಲೆಯಲ್ಲಿ ಸೋಮವಾರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಿತು.ಮಕ್ಕಳು ಶಾಲಾ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ಅವರನ್ನು ಬೋಧಕರು ಮತ್ತು ಬೋಧಕರ ಹೊರತಾದ ಸಿಬ್ಬಂದಿ ವೈಭವದಿಂದ ಸ್ವಾಗತಿಸಿ, ಪ್ರತಿ ಮಗುವಿಗೂ ಶುಭಾಶಯ ಪತ್ರವನ್ನು ನೀಡಿ ಕರತಾಡನದ ಮೂಲಕ ಎಲ್ಲರನ್ನು ಬರಮಾಡಿಕೊಂಡರು. ಈ ವೇಳೆ ಎಲ್ಲ ತರಗತಿಗಳನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು.
ಪ್ರಾರ್ಥನಾ ಸಭೆಯ ವೇದಿಕೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿದ ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಮತ್ತು ನೂತನ ಉಪಪ್ರಾಚಾರ್ಯೆ ವಸುಧಾ ನಾರ್ವೆಕರ್ ಅವರು ಮಕ್ಕಳಿಂದ ದೀಪ ಹಚ್ಚಿಸುವ ಮೂಲಕ ಹೊಸ ಶೈಕ್ಷಣಿಕ ವರ್ಷಕ್ಕೆ ಅದ್ದೂರಿಯ ಚಾಲನೆ ನೀಡಿದರು.
ಸಂಗೀತ ಶೀಕ್ಷಕಿ ಸಂತೋಷಿ ಕುಸೂರ ಸರಸ್ವತಿ ಭಜನೆಯನ್ನು ಹಾಡಿದರು. ಸಾಂಸ್ಕೃತಿಕ ಕಾರ್ಯ ಸಂಯೋಜಕಿ ಫರಾ ಜಾಗಿರದಾರ ಸ್ವಾಗತಿಸಿದರು. ಶಾಲೆಗೆ ಹೊಸದಾಗಿ ಆಗಮಿಸಿದ ಪ್ರತಿ ಶಿಕ್ಷಕರನ್ನು ವಿಶೇಷ ರೀತಿಯಲ್ಲಿ ಪರಿಚಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಉಪಪ್ರಾಚಾರ್ಯೆ ವಸುಧಾ ನಾರ್ವೇಕರ, ಮುಂದಿನ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು, ಶಾಲೆಯಲ್ಲಿ ಶಿಸ್ತು ಕಾಯ್ದುಕೊಳ್ಳುವುದರ ಕುರಿತು ಮಾತನಾಡಿದರು.
ಆಂಗ್ಲ ಭಾಷಾ ಮುಖ್ಯಸ್ಥ ವಿಠ್ಠಲ ಬಜೇರಿಯವರ ವಂದಿಸಿದರು.