
ವಾಡಿ:ಜು.1: ಹಲಕರ್ಟಿ ದರ್ಗಾ ಶರೀಫ್ ಹಜರತ್ ಖ್ವಾಜಾ ಸೈಯದ್ ಮೋಹ್ಮದ ಬಾದಷ್ ಖಾದ್ರಿ ಚಿಸ್ತಿ ಅವರ 49ನೇ ಉರುಸ್ ಅಂಗವಾಗಿ ಸೋಮವಾರ ಪಟ್ಟಣದ ರೈಲ್ವೆ ನಿಲ್ದಾಣದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಭವ್ಯ ಸಂದಲ್ ಭಕ್ತಿ ಭಾವದಿಂದ ಬರಮಾಡಿಕೊಂಡರು.
ಹೈದ್ರಾಬಾದ್ ದಿಂದ ಬಂದ ವಿಶೇಷ ಉರುಸ್ ರೈಲನ್ನು ವಾಡಿ ರೈಲು ನಿಲ್ದಾಣದಲ್ಲಿ ಸೇರಿದ ಅಪಾರ ಸಂಖ್ಯೆಯ ಭಕ್ತರು ಭವ್ಯವಾಗಿ ಸ್ವಾಗತಿಸಿ ಬರಮಾಡಿಕೊಂಡರು, ರೈಲಿನಲ್ಲಿ ತಂದಿದ್ದ ಸಂದಲ್ (ಗಂಧ)ನ್ನು ಭಕ್ತಿ ಭಾವದಿಂದ ಬರಮಾಡಿಕೊಂಡು ಜೈಕಾರ ಹಾಕುತ್ತಾ ಖವ್ವಾಲಿ ಹಾಡುತ್ತಾ ಸಭಾ ಮಂಟಪಕ್ಕೆ ಹೋತ್ತು ತಂದರು. ನಂತರ ದರ್ಗಾದ ಪೀಠಾಧಿಪತಿ ಖ್ವಾಜಾ ಸೈಯದ್ ಅಬು ತುಗರಾಬ್ ಷಾ ಖಾದ್ರಿ ಅವರ ನೇತ್ರತ್ವದಲ್ಲಿ ಧಾರ್ಮಿಕ ಮುಖಂಡರು, ಸಾಮೋಹಿಕ ನಮಾಜ್ ಮಾಡಿದರು
ನಂತರ ಸಂದಲ್ ಅಲಂಕೃತ ವಾಹನದಲ್ಲಿ ಸ್ಥಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಮೂಲಕ ಹಲಕರ್ಟಿಯ ದುರ್ಗಾ ತಲುಪಿತು






























