
ಧಾರವಾಡ,ಆ.೧೫: ತಮ್ಮ ಚಳುವಳಿ, ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ÷್ಯ ತಂದುಕೊಟ್ಟ ಸೇನಾನಿಗಳ ಬದುಕು ನಮಗೆ ಆದರ್ಶವಾಗಬೇಕು ಎಂದು ಸಂಶೋಧಕಿ, ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿ ಹನುಮಾಕ್ಷಿ ಗೋಗಿ ಕರೆ ನೀಡಿದರು.
\
ತಾಲೂಕಿನ ನರೇಂದ್ರ ಗ್ರಾಮದ ಬಳಿಯ ಶ್ರೀ ರಿಯಲ್ಟಿ ಡೆವ್ಹಲಪರ್ಸ್ನ ಶ್ರೀ ಐ.ಟಿ.ಪಾರ್ಕ್ನಲ್ಲಿ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ೮೦ನೇ ಸ್ವಾತಂತ್ರೊ÷್ಯÃತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಹಲವಾರು ಧರ್ಮ,ಮತ.ಪಂಥ, ಭಾಷೆಗಳ ಆಡಂಬೋಲವಾಗಿದ್ದ ಭಾರತವು ನೂರಾರು ವರ್ಷಗಳ ಪರಕೀಯರ ದಾಳಿಯಿಂದ ನಲುಗಿಹೋಗಿತ್ತು. ಭಾರತವನ್ನು ದಾಸ್ಯದ ಸಂಕೋಲೆಯಿAದ ಬಿಡಿಸಲು ಕೋಟ್ಯಾಂತರ ಸೇನಾನಿಗಳು ತಮ್ಮ ಜೀವಪಣಕ್ಕಿಟ್ಟು ಸೆಣಸಿದ್ದು ಸ್ಮರಣೀಯ. ಭವ್ಯ ಭಾರತದ ಕನಸು ಕಂಡಿದ್ದ ನಮ್ಮ ಹಿರಿಯರು ಈಗಿಲ್ಲ. ಆದರೆ, ಅವರು ಗಳಿಸಿಕೊಟ್ಟ ಸ್ವಾತಂತ್ರ÷್ಯ ನಮ್ಮದಾಗಿದೆ. ಶಾಂತಿ, ಸಮಾನತೆ, ಸಮೃದ್ಧಿ ನಮ್ಮ ಆದ್ಯತೆಗಳಾಗಬೇಕು. ಶಿಕ್ಷಣದ ಮೂಲಕ ದೇಶ ಕಟ್ಟುವ ಮತ್ತು ಅಭಿವೃದ್ಧಿ ಸಾಧಿಸುವ ಗುರಿ ಹೊಂದಬೇಕಿದೆ. ಸ್ವಾತಂತ್ರ÷್ಯ ದಿನ ಆಚರಣೆ ಮಾತ್ರವಲ್ಲದೇ ದೇಶ ಪ್ರೇಮ ಹೆಚ್ಚಿಸುವ ಸಂದರ್ಭವಾಗಬೇಕು.
ಹಿರಿಯರು ಬಳುವಳಿಯಾಗಿ ನೀಡಿದ ಸ್ವಾತಂತ್ರ÷್ಯದ ಸದುಪಯೋಗ ಆಗಬೇಕು. ಆಗ ಭಾವೈಕ್ಯತೆಯ ತವರೂರಾದ ದೇಶದ ಹಿರಿಮೆ ಜಾಗತಿಕ ಮಟ್ಟದಲ್ಲಿ ಪಸರಿಸಲು ಸಾಧ್ಯ ಎಂದ್ಯುವರು ನುಡಿದರು.
ಮನೋವೈದ್ಯ ಡಾ. ಪವನ ಜೋಶಿ ಅವರು ಮಾನಸಿಕ ಆರೋಗ್ಯ ಕುರಿತು ಉಪನ್ಯಾಸ ನೀಡಿದರು. ಶ್ರೀ ರಿಯಲ್ಟಿ ಡೆವ್ಹಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಶ್ರೀನಿವಾಸ ಸ್ವಾಗತಿಸಿದರು. ಶ್ರೀ ರಿಯಲ್ಟಿ ಡೆವ್ಹಲಪರ್ಸ್ನ ಮಾಲಿಕರಾದ ಶ್ರೀನಿವಾಸ ನಾಯ್ಡು ವಂದಿಸಿದರು. ಸೌಖ್ಯ ತೊರಗಲ್ಲಮಠ ಪರಿಚಯಿಸಿದರು. ವಿದ್ಯಾ ಪಾಟೀಲ ನಿರೂಪಿಸಿದರು.
ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಅಧ್ಯಕ್ಷೆ ಡಾ.ನಿಶಾ ಗಲಗಲಿ, ಕಾರ್ಯದರ್ಶಿ ಇಪ್ಸಿತಾ ಬಸು, ಶ್ರೀ ರಿಯಲ್ಟಿ ಡೆವ್ಹಲಪರ್ಸ್ನ ಸವಿತಾ ಭಿಸೆ, ಸಪ್ನಾ ಆಚಾರ್ಯ, ರೂಪಾ ಪಾಟೀಲ, ಸ್ನೇಹಾ ಆಚಾರ್ಯ, ಮೃತ್ಯುಂಜಯ ಪೂಜಾರ, ಹೇಮಂತ ರಾಠೋಡ, ಅನಂತ ಪಾಟೀಲ, ಲಿಂಗರಾಜು ಸಾಯಣ್ಣವರ ಸೇರಿದಂತೆ ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು.
“



























