Home ಜಿಲ್ಲೆ ಸ್ವಾತಂತ್ರö್ಯ ದಿನಾಚರಣೆ

ಸ್ವಾತಂತ್ರö್ಯ ದಿನಾಚರಣೆ

ಹುಬ್ಬಳ್ಳಿ,ಆ೧೫: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ೮೦ನೇ ಸ್ವಾತಂತ್ರ÷್ಯ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದಿAದ ಆಚರಣೆ ಮಾಡಲಾಯಿತು.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ರಾಷ್ಟçಪಿತ ಮಹಾತ್ಮಾ ಗಾಂಧೀಜಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಭಾವಚಿತ್ರಗಳಿಗೆ ಪೂಜೆ,ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿ ತಮ್ಮ ತ್ಯಾಗ, ಬಲಿದಾನಗಳಿಂದ ಸ್ವಾತಂತ್ರ÷್ಯವನ್ನು ತಂದುಕೊಟ್ಟು, ಇಡೀ ವಿಶ್ವಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ರೂಪಿಸಿಕೊಟ್ಟು ಇಂದು ನಾವೆಲ್ಲರೂ ಸುಂದರವಾದ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಂತಹ ನೇತಾರರು ನಿತ್ಯ ಸ್ಮರಣೀಯರು. ಕಳೆದ ೭೯ ವರ್ಷಗಳ ಅವಧಿಯಲ್ಲಿ ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಅದ್ವಿತೀಯ ಪ್ರಗತಿ ಸಾಧಿಸುವ ಮೂಲಕ ವಿಶ್ವಗುರುವಾಗಿ ಹೊರ ಹೊಮ್ಮಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದಿನ ಪೀಳಿಗೆಗೆ ಸ್ವಾತಂತ್ರ÷್ಯ ಹೋರಾಟದ ಬೆಳವಣಿಗೆ ಹಾಗೂ ದೇಶಭಕ್ತಿಯ ಬಗ್ಗೆ ತಿಳಿಸಿಕೊಡುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

೨೦೨೫-೨೬ನೇ ಸಾಲಿನಲ್ಲಿ ಪ್ರಯಾಣಿಕರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದಂತಹ ಚಿನ್ನ, ಬೆಳ್ಳಿ ಒಡವೆ, ನಗದು ಹಣ, ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮರೆದ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ, ವಿಶಿಷ್ಠ ಸೇವೆ ಸಲ್ಲಿಸಿದ ನೌಕರರಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ಪ್ರದಾನ ಮಾಡಿ ಗೌರವಿಸಲಾಯಿತು.

ಅಧಿಕಾರಿಗಳಾದ ದೀಪಕ ಜಾದವ, ವೈ.ಎಂ. ಶಿವರಡ್ಡಿ, ಮಹದೇವಸ್ವಾಮಿ,ನಾಗಮಣಿ ಭೋವಿ, ಶಾರದಾ, ಗುರುಪ್ರಸಾದ ಹೋಗಾಡಿ, ನಜೀರ ಅಹ್ಮದ ದರವೇಶ, ಅಧೀಕ್ಷಕರುಗಳು, ಮೇಲ್ವಿಚಾರಕರುಗಳು,ಇತರರು ಸಿಬ್ಬಂದಿಗಳು ಇದ್ದರು.