
ಕಲಬುರಗಿ:ಕರ್ತವ್ಯದಜೊತೆಗೆ ಪಾರಮಾರ್ಥ ಸಾಧನವಾದಶಾಸ್ತ್ರ, ಪುರಾಣ, ಪ್ರವಚನ ಮಹಾತ್ಮರಾದ ಸಿದ್ದಾರೂಢರ ಪರಮ ಭಕ್ತರಾದಗುರುನಾಥ ಭೀಮಳ್ಳಿರವರು ನಿವೃತ್ತಆದ ನಂತರತಮ್ಮಲ್ಲಿರುವಜ್ಞಾನಇನ್ನೊಬ್ಬರಿಗೆ ಹಂಚಬೇಕೆಂಬ ಸತ್ಸಂಗ ಗೆಳೆಯರ ಅಭಿಪ್ರಾಯದಂತೆ, ಸತ್ಸಂಗ ನಡೆಸಿ ಧಾರ್ಮಿಕ, ಆಧ್ಯಾತ್ಮಿಕಅನುಭವಗಳ ಚಿಂತನೆಗಳ ಸರಮಾಲೆಇಂದು ಬಿಡುಗಡೆಯಾದಅಂತಜ್ರ್ಯೋತಿಕೃತಿಎಂದುಜಿಲ್ಲಾಕನ್ನಡ ಸಾಹಿತ್ಯ ಪರಿಷತ್ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಇಂದುಬೆಳಿಗ್ಗೆ 9.30 ಗಂಟೆಗೆದೇವಿನಗರದ ಸಿದ್ದರೂಢ ಸತ್ಸಂಗ ಸಮಿತಿಶ್ರೀ ರಾಮಲಿಂಗಚೌಡೇಶ್ವರಿ ಸೇವಾ ಪ್ರತಿಷ್ಠಾನ (ರಿ) ಇವರ ಸಂಯುಕ್ತಾಶ್ರಯದಲ್ಲಿಗುರುನಾಥ ಭೀಮಳ್ಳಿ ರವರ ವಿರಚಿತಅಂತಜ್ರ್ಯೋತಿಕೃತಿ ಲೋಕಾರ್ಪಣೆಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಿವೃತ್ತಜೀವನಮಾನವನ ಸಾಧನೆಗೆತಡೆಗೋಡೆಯಲ್ಲ ಬದಲಾಗಿಅದು ಸಾರ್ಥಕ ಬದುಕಿಗೆ ಪೂರಕವೆಂದುಸಾಧಿಸಿ ತೋರಿಸುವ ಮೂಲಕ ಇಂದಿನ ನಿವೃತ್ತಗೊಂಡ ಹಿರಿಯ ಸಮುದಾಯಕ್ಕೆಗುರುನಾಥ ಭೀಮಳ್ಳಿರವರು ಒಬ್ಬ ಮಾದರಿ ವ್ಯಕ್ತಿಯಾಗಿದ್ದಾರೆಎಂದರು.
ಧಾರ್ಮಿಕಆಧ್ಯಾತ್ಮಿಕ ಚಿಂತನೆಗಳ ಸರಮಾಲೆಇದುದೈನಂದಿನ ಜೀವನಕ್ಕೆಅತ್ಯಂತ ಸಮೀಪವಾಗಿದೆ, ಮಾನವನುತನ್ನಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂದು ಅತ್ಯಂತ ಸರಳ ಮತ್ತು ಸೂಕ್ಷ್ಮವಾಗಿ ಈ ಪುಸ್ತಕದಲ್ಲಿ ಬರೆದಿದ್ದಾರೆಎಂದುಆಧ್ಯಾತ್ಮಿಕಚಿಂತನೆಗಾಗಿ ಪ್ರತಿಯೊಬ್ಬರುಓದಲೇಬೇಕಾದ ಪುಸ್ತಕ ಇದುಎಂದುಆಧ್ಯಾತ್ಮಿಕಚಿಂತಕರಾದ ಬಿ. ಮಹೇಶ್ವರಿಜೀ ಪುಸ್ತಕ ಪರಿಚಯ ಮಾಡಿದರು.
ಸೇವೆ ಸ್ವರ್ಗದ ಸೋಫಾನಎಂಬಂತೆಗುರುನಾಥರುವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಗೃಂಥಾಲಯಗಳ ಸ್ಥಾಪನೆ ಸಾಮಾಜಿಕಧಾರ್ಮಿಕ ಸೇವೆ ಸತ್ಸಂಗ ಮಾಡುತ್ತಾಬರೆದಿರುವ ಈ ಪುಸ್ತಕ ಆಧ್ಯಾತ್ಮಿಕಚಿಂತಕರಿಗೆದಾರಿದೀಪವಾಗಿ ಮಾರ್ಗದರ್ಶನ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಮೈಂದರ್ಗಿ ಹಿರೇಮಠದ ಶ್ರೀ ಷ.ಬ್ರ. ಅಭಿನವ ರೇವಣಸಿದ್ದ ಪಟ್ಟದೇವರು ಆಶೀರ್ವಚನ ನೀಡಿದರು.
ಪುಸ್ತಕ ಲೇಖಕರಾದಗುರುನಾಥ ಭೀಮಳ್ಳಿರವರು ಶ್ರೀ ಸಿದ್ದಾರೂಢ ಪ್ರೇರಣೆಯಿಂದ ಸತ್ಸಂಗ ಮಾಡಿಅದರ ಅನುಭವಗಳ ಮಾತುಗಳೇ ಈ ಪುಸ್ತಕ ಎನ್ನುತ್ತ ಮುದ್ರಣಕ್ಕೆ ಸಹಾಯ ಶರತ್ಚಂದ್ರ ಪೊಲೀಸ್ ಪಾಟೀಲ ಸಾಹಿತ್ಯಕ್ಕಾಗಿ ಸಹಕರಿಸಿದ ಡಾ.ಕಾವ್ಯಶ್ರೀ ಮಹಾಗಾಂವಕರ್, ಡಾ.ಶರಣಬಸಪ್ಪವಡ್ಡನಕೇರಿ, ಸತ್ಸಂಗ ಗೆಳೆಯರ ಪ್ರೇರಣವೆ ಈ ಕೃತಿಗೆ ಮೂಲ ಕಾರಣಎಂದುಕೃತಜ್ಞತಾ ಭಾವದಿಂದ ಮಾತನಾಡಿದರು.
ಸಮಾರಂಭದಲ್ಲಿಕೆ.ಕೆ.ಆರ್.ಡಿ.ಬಿ. ಅಧೀನ ಕಾರ್ಯದರ್ಶಿ ಶಿವಪುತ್ರಪ್ಪ ಕಂಠಿ, ಕೃತಿ ಲೇಖಕರಾದಗುರುನಾಥ ಭೀಮಳ್ಳಿ, ಶ್ರವಣಕುಮಾರ ಮುನ್ನೊಳ್ಳಿ ವೇದಿಕೆಮೇಲೆ ಉಪಸ್ಥಿತರಿದ್ದರು.
ನಿರ್ಮಲಾ ಸಿರಗಾಪೂರ ಸ್ವಾಗತಿಸಿದರು, ಕಾಶೀನಾಥ ಪಾಟೀಲ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು. ವಿನೋದಕುಮಾರಜನೇವರಿ ವಂದಿಸಿದರು.
ಕಾರ್ಯಕ್ರಮದಲ್ಲಿ ರೇವಣಸಿದ್ದಪ್ಪ ಜೀವಣಗಿ, ಗಣೇಶಚಿನ್ನಾಕರ್, ನಾಗೇಂದ್ರಪ್ಪ ಬಂಟನಳ್ಳಿ, ಸಂಗಪ್ಪ ಭೀಮಳ್ಳಿ, ಗುರುನಾಥ ವಿಠ್ಠಪ್ಪ, ಶರಣಬಸಪ್ಪ ಭೀಮಳ್ಳಿ, ಮಲ್ಲಿಕಾರ್ಜುನ ಆಳಂದ, ಚಂದ್ರಶೇಖರ ಭೀಮಳ್ಳಿ, ಚಂದ್ರಮೋಹನ ಭೀಮಳ್ಳಿ, ವಿಜಯಕುಮಾರಭಾಲ್ಕಿ, ಶಿವಶರಣ ಭೀಮಳ್ಳಿ, ಶ್ರೀಮತಿ ಮಲ್ಲಮ್ಮ, ಶ್ರೀಮತಿ ರೇಣುಕಾದೇವಿ ಹಾಗೂ ಸತ್ಸಂಗ ಸಮಿತಿಯ ಹಿರಿಯರು ಉಪಸ್ಥಿತರಿದ್ದರು.






























