
ಸಂಜೆ ವಾಣಿ ವಾರ್ತೆ
ಜಮಖಂಡಿ: ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಮುಖಂಡ ನಜೀರ್ ಕಂಗನೊಳ್ಳಿ ಅವರ ಪಕ್ಷ ಸೇವೆಯನ್ನು ಗುರುತಿಸಿ ಎಂಎಲ್‌ಸಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮಹೇಶ ಕೋಳಿ, ಪಕ್ಷದ ಸಂಘಟನೆ ಬಲಪಡಿಸುವಲ್ಲಿ ನಜೀರ್ ಕಂಗನೊಳ್ಳಿ ಅವರ ಕೊಡುಗೆ ಮಹತ್ವದ್ದಾಗಿದೆ. ನಾಲ್ಕು ದಶಕಗಳ ಸುದೀರ್ಘ ಪಕ್ಷ ಸೇವೆಯನ್ನು ಪರಿಗಣಿಸಿ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ನಗರ ಪ್ರಾಧಿಕಾರ ಅಧ್ಯಕ್ಷ ಅನ್ವರ್ ಮೊಮಿನ್ ಮಾತನಾಡಿ, ಕಿತ್ತೂರು ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕರಿಗೆ ಅವಕಾಶ ನೀಡುವುದರಿಂದ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ನಜೀರ್ ಕಂಗನೊಳ್ಳಿ ಅವರ ಹೆಸರನ್ನು ಎಂಎಲ್‌ಸಿ ಸ್ಥಾನಕ್ಕೆ ಪರಿಗಣಿಸಬೇಕು ಎಂದರು.
ಅಲ್ಪಸAಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ಸಮೀರ್ ಕಂಗನೊಳ್ಳಿ ಮಾತನಾಡಿ, ನಜೀರ್ ಕಂಗನೊಳ್ಳಿ ಅವರು ವಿದ್ಯಾರ್ಥಿ ಜೀವನದಿಂದಲೇ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಅನುಭವಿ ಮುಖಂಡರಾಗಿದ್ದಾರೆ. ಅವರ ಅನುಭವವನ್ನು ಸಾರ್ವಜನಿಕ ಹಿತಕ್ಕಾಗಿ ಬಳಸಿಕೊಳ್ಳಲು ಎಂಎಲ್‌ಸಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಪ್ರಕಾಶ ಕಣಬೂರ, ನಗರಸಭೆ ಮಾಜಿ ಅಧ್ಯಕ್ಷರಾದ ಈಶ್ವರ ವಾಳೇನ್ನವರ, ದಾನೇಶ ಘಾಟಗೆ, ವಕೀಲ ರವಿ ಯಡಹಳ್ಳಿ, ನಾನಾ ಮೋರೆ, ಸಾಧಿಕ್ ಭಂಟನೂರ ಸೇರಿದಂತೆ ಹಲವು ಮುಖಂಡರು ಮಾತನಾಡಿ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿರುವ ಹಿರಿಯ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡುವುದು ಪಕ್ಷದ ಜವಾಬ್ದಾರಿಯಾಗಿದೆ. ನಜೀರ್ ಕಂಗನೊಳ್ಳಿ ಅವರ ಹೆಸರನ್ನು ಎಂಎಲ್‌ಸಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮುಖಂಡರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ಮುಬಾರಕ್ ಅಪರಾದ, ಬಾಶಾ ಕಂಗನೊಳ್ಳಿ, ಬಸವರಾಜ ಹರಕಂಗಿ, ಶಶಿ ಮೀಸಿ, ಮುಬಾರಕ್ ಸಾರವಾನ, ಮುಸಾ ಮುಲ್ಲಾ, ರಮೇಶ್ ಮೋರೆ, ಮೀರಾ ಒಂಟಮೋರೆ, ಅಕಬರ ಜಮಾದಾರ, ಮೈನೂದಿನ ಖಾಟಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮುಸ್ತಾಕ್ ಝಂಡೆ ಸ್ವಾಗತಿಸಿ, ವಂದಿಸಿದರು.































