
ಕಲಬುರ್ಗಿ:ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನ ಪಿಯುಸಿ ದ್ವೀತಿಯ ವರ್ಷದ ವಿಜ್ಞಾನ ವಿಭಾಗದ ಕುಮಾರಿ ರಾಜೇಶ್ವರಿ ಬಾಬು ವಿಶ್ವ ಹಿಂದೂ ಪರಿಷತ್ ಕಲಬುರ್ಗಿ ಭಾರತ ಸಂಸ್ಕøತಿ ಪ್ರತಿಷ್ಠಾನ ಸಂಚಾಲಿತ ಶ್ರೀರಾಮ ಪ್ರವಾಹಿನಿ ನಡೆಸುವ ಶ್ರೀರಾಮಾಯಣ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ್ದಾಳೆ. ಇವಳಿಗೆ ಮಾಜಿ ಲೋಕಸಭಾ ಸದಸ್ಯರಾದ ಬಸವರಾಜ ಪಾಟೀಲ ಸೇಡಂ ರವರು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಇದೆ ಸಂದರ್ಭದಲ್ಲಿ ಇವಳನ್ನು ಪರೀಕ್ಷೆಗೆ ಮಾರ್ಗದರ್ಶನ ಮಾಡಿದ ಕಾಲೇಜಿನ ಕನ್ನಡ ಉಪನ್ಯಾಸಕಿ ಸಂಗೀತಾ ಸಡಕೀನ್ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಶಿಲ್ಪಾ ಅಲ್ಲದ ಅವರನ್ನು ಸನ್ಮಾನಿಸಲಾಯಿತು.
ಈ ವಿದ್ಯಾರ್ಥಿನಿ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಕಾಲೇಜಿನ ಎಲ್ಲ ಉಪನ್ಯಾಸಕರು ಅಭಿನಂದಿಸಿದ್ದಾರೆ






















