
ಬೆಂಗಳೂರು, ಸೆ. ೨೭: ಕಾಂಗ್ರೆಸ್ಗೆ ಗೆಲ್ಲಲು ಸಾಧ್ಯವಿಲ್ಲ ಎಂಬ ಭ್ರಮನಿರಸನದಿಂದ ರಾಹುಲ್ ಗಾಂಧಿ ಅವರು ನ್ಯಾಯಾಲಯ, ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮತ್ತು ಚುನಾವಣಾ ಆಯೋಗದ ವಿರುದ್ಧ ಮಾತನಾಡುವ ಚಟಕ್ಕೆ ಬಲಿಯಾಗಿದ್ದಾರೆ ಎಂದು .ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರುಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು
ಚುನಾವಣಾ ಆಯೋಗವು ಈಗಾಗಲೇ ತನ್ನ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸಿದೆ ಎಂದು ಹೇಳಿದರು.ಎವಿಎಂ ಬಗ್ಗೆ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ ಅಶೋಕ್, “ಎವಿಎಂ ಅನ್ನು ತಂದವರೇ ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ. ಅದನ್ನೇ ಬ್ಲಾಕ್ ಬಾಕ್ಸ್ ಎಂದು ಕರೆಯುವ ಮೂಲಕ ರಾಹುಲ್ ತಮ್ಮ ತಂದೆಯ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ” ಎಂದು ಟೀಕಿಸಿದರು. ಸುಪ್ರೀಂ ಕೋರ್ಟ್ ಈಗಾಗಲೇ ಎವಿಎಂ ಸರಿ ಇದೆ ಎಂದು ಹೇಳಿದ್ದು, ಕಾಂಗ್ರೆಸ್ ಯಾವುದೇ ಸಂಸ್ಥೆಯ ಮೇಲೂ ನಂಬಿಕೆ ಇಡುತ್ತಿಲ್ಲ ಎಂದು ಪ್ರಶ್ನಿಸಿದರು.
“ಬಾಂಗ್ಲಾದೇಶದ ಎರಡು ಕೋಟಿ ಜನ ನಮಗೆ ವೋಟ್ ಹಾಕಿ ಗೆಲ್ಲಿಸುತ್ತಿದ್ದರು ಅವರನ್ನು ಕಳುಹಿಸಿದ್ದು ಏಕೆ ಎಂದು ಕಾಂಗ್ರೆಸ್ ಕೇಳಲಿ ಎಂದರು ಕಾಂಗ್ರೆಸ್ ನ ಚುನಾವಣಾ ಗಿಮಿಕ್ಸ್ ಗೆ ನಾವು ಹೆದರಲ್ಲ.ಮುಂದಿನ ಯಾವ ಚುನಾವಣೆಯೂ ಕಾಂಗ್ರೆಸ್ ಪರ ಇಲ್ಲ.
ಅವಮಾನ ಆಗಬಾರದು ಎಂದು ಈಗ ನಿರೀಕ್ಷಣಾ ಜಾಮೀನು ತಗೋತಿದ್ದಾರೆ.
ಕಾಂಗ್ರೆಸ್ ದೇಶದಲ್ಲಿ ಮುಳುಗುವ ಹಡಗು. ಎಂದು ಗೇಲಿ ಮಾಡಿದರು ಇದಲ್ಲದೆ, ಸರ್ಜಿಕಲ್ ಸ್ಟ್ರೈಕ್ ಅನ್ನು ಬೋಗಸ್ ಎಂದು ಹೇಳುವ ಮೂಲಕ ದೇಶದ ಸೈನಿಕರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಐಟಿ ರಚನೆ ಮಾಡಿದರೂ ಕಾಂಗ್ರೆಸ್ ವಿರೋಧಿಸುತ್ತದೆ. ಆರ್ಟಿಕಲ್ ೩೭೦, ತ್ರಿಬಲ್ ತಲಾಖ್ ರದ್ದು, ರಾಮಮಂದಿರ, ವಂದೇ ಮಾತರಂ ಎಲ್ಲದಕ್ಕೂ ಕಾಂಗ್ರೆಸ್ ವಿರೋಧ ಮಾಡುತ್ತದೆ ಎಂದು ಆರೋಪಿಸಿದ ಅವರು, “ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಅವರೆಲ್ಲ ಗಣೇಶ ಪೂಜೆ ಮಾಡುತ್ತಾರೆ. ರಾಹುಲ್ ಗಾಂಧಿಗೆ ದೇಶದ ಒಳ್ಳೆಯ ಮುಸ್ಲಿಮರಿಂದ ಅವರು ಕಲಿಯಬೇಕು” ಎಂದು ಹೇಳಿದರು.
ರಾಜ್ಯದಲ್ಲಿ ಹಣಕಾಸು ಇಲಾಖೆಯ ದಾಖಲೆಗಳು ಸೋರಿಕೆ ಆಗಿರುವ ವಿಚಾರವಾಗಿ ಮಾತನಾಡಿದ ಅಶೋಕ್, “ಫೈನಾನ್ಸ್ ದಾಖಲೆ ಲೀಕ್ ಆಗಿದ್ದರೆ ಡಿ.ಕೆ. ಶಿವಕುಮಾರ್ ಗೆಟ್ ಔಟ್ ಆಗಬೇಕು. ಚುನಾವಣಾ ಆಯೋಗಕ್ಕೆ ಗೋ ಅವೇ ಎಂದು ಹೇಳುವವರು, ಇಲ್ಲಿ ಸಿಎಂ ಕೂಡ ಗೋ ಅವೇ ಆಗಬೇಕು” ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಟೀಕೆ ಮಾಡಿದರು.
ಸಚಿವ ಬಾಲಕೃಷ್ಣ ಅವರು ’ಗ್ಯಾರಂಟಿಯಿಂದ ಪಿಂಚಣಿ ಕೊಡಲು ಕಷ್ಟವಾಗಿದೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್, ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು. ಈಗಾಗಲೇ ಅರ್ಧದಷ್ಟು ಗ್ಯಾರಂಟಿ ಕಡಿತಗೊಳಿಸುವ ಯೋಜನೆ ಇದೆ. ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಬೇಡ ಎಂದು ಹೇಳುತ್ತಿದ್ದಾರೆ. ಹಣಕಾಸು ಇಲಾಖೆ ಮೇಲೆ ’ದಿವಾಳಿ’ ಎಂದು ಬೋರ್ಡ್ ಹಾಕಬೇಕು ಎಂದು ಅಶೋಕ್ ಹೇಳಿದರು
ಸರ್ವಪಕ್ಷ ನಿಯೋಗದ ಭೇಟಿ:
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸರ್ವಪಕ್ಷ ನಿಯೋಗದ ಜೊತೆ ನಾವು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದೇವೆ ಹೊರತು ಬರದ ವಿಚಾರದಲ್ಲಿ ಅಲ್ಲ ಎಂದು ಆರ್ ಅಶೋಕ್ ಸ್ಪಷ್ಟಪಡಿಸಿದರು ಬರದ ವಿಚಾರದಲ್ಲಿ ರೈತರಿಗೆ ಮೋಸ ಮಾಡಿದ್ದಾರೆ..ಹಾಗಾಗಿ ನಾವು ಬರದ ವಿಚಾರಕ್ಕೆ ನಿಯೋಗದ ಜೊತೆ ಹೋಗಲ್ಲ. ಎಂದು ಹೇಳಿದರು
ಬಿಡದಿ ಟೌನ್ ಶಿಪ್ ಹೋರಾಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ರೈತರ ಹೋರಾಟ ಸತ್ಯ ಇದೆರಿಯಲ್ ಎಸ್ಟೇಟ್ ಮಾಡಲು ಡಿಕೆಶಿ ಹೊರಟಿದ್ದು ಖಂಡನೀಯಬಿಜೆಪಿ ಸರ್ಕಾರ ಬಂದ್ರೆ ಬಿಡದಿ ಟೌನ್ ಶಿಪ್‌ಯೋಜನೆ ರದ್ದು ಮಾಡುತ್ತೇವೆ ಇನ್ನೊಂದು ವರ್ಷ ಕಾಯೋಣರೈತರ ಜೊತೆ ನಮ್ಮನ್ನೂ ಜೈಲಿಗೆ ಕಳಿಸಿ, ನಾವು ಸಿದ್ದರಿದ್ದೇವೆ. ಎಂದರು ಚಲವಾದಿ ಹೇಳಿಕೆ ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಹುಲ್ ಗಾಂಧಿ ಅವರ ಗ್ರಾಫ್ ಮೇಲೇಳ್ತಿಲ್ಲ ಅದಕ್ಕಾಗಿ ಎಸ್‌ಐಆರ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆಕೇರಳದಲ್ಲಿ ಕಮ್ಯುನಿಷ್ಟ್ ನವರು ಬೋಗಸ್ ಓಟ್ ಹಾಕ್ತಿದ್ರುಎಸ್‌ಐಆರ್ ಆದಮೇಲೆ ಕಾಂಗ್ರೆಸ್ ಗೆದ್ದಿದೆ ಎಂದು ಅಲ್ಲಿನ ಕೈ ನಾಯಕರು ಹೇಳ್ತಿದಾರೆ
ರಾಹುಲ್ ಗಾಂಧಿ ಯಾವ ದೇಶದವರು ಎಂದು ಗೂಗಲ್ ಮಾಡಿದೆರಾಹುಲ್ ಗಾಂಧಿ ಭಾರತದವರು, ಆದ್ರೆ ನೆಹರು, ಗಾಂಧಿ ಫ್ಯಾಮಿಲಿ ರಾಜಕೀಯ ಹಿನ್ನೆಲೆ ಎಂದು ಗೂಗಲ್ ಹೇಳತ್ತೆಆದ್ರೆ ರಾಹುಲ್ ಗಾಂಧಿ ಎಂದಿಗೂ ನೆಹರೂ ಫ್ಯಾಮಿಲಿ ಎನ್ನಲ್ಲ ಎಂದರು ಮತಪಟ್ಟಿಯಿಂದ ಹೆಸರು ತೆಗೆದ್ರೂ
ದಾಖಲಾತಿ ಕೊಟ್ಟು ಸೇರಿಸಿದಾಖಲೆ ಇಲ್ಲದಿದ್ದರೆ ಹೋಗತ್ತೆ ಅಷ್ಟೆಂಗ್ರೆಸ್ ಮತದಾರರು ಹೊರದೇಶದವರುಅವರು ದಾಖಲೆ ಇಲ್ಲದ ಕಾರಣ ಮತ ಪಟ್ಟಿಯಿಂದ ಹೋದರು ಇದೇ ಹತಾಶೆಯಿಂದ ಕಾಂಗ್ರೆಸ್ ವಿರೋಧ ಮಾಡುತ್ತಿದೆ ಎಂದು ದೂರಿದರು
ಚುನಾವಣಾ ಆಯೋಗದ ಹೆಸರಲ್ಲಿ ಬಿಜೆಪಿಗೆ ಟಾರ್ಗೆಟ್ ಮಾಡ್ತಿದಾರೆಹಾಗಾಗಿ ಬಿಜೆಪಿ ಈ ಬಗ್ಗೆ ಮಾತಾಡ್ತಿದೆಎಲೆಕ್ಷನ್ ಕಮಿಷನ್ ಯಾರ ಗುಲಾಮರು ಅಲ್ಲ
ಸೋನಿಯಾಗಾಂಧಿ ಭಾರತದ ಪ್ರಜೆಯಾಗುವ ಮುನ್ನ ಇಲ್ಲಿನ ಮತದಾರರಾಗಿದ್ದರುರಾಹುಲ್ ಗಾಂಧಿ ಇದನ್ನ ಯಾವಾಗ ವಿರೋಧ ಮಾಡ್ತಿರಿ
ಓಟ್ ಚೋರಿ ಆಗ್ತಿಲ್ಲ, ಕಳ್ಳರ ಮತ ಕಾಂಗ್ರೆಸ್ ಕೈ ತಪ್ತಿದೆ ಇನ್ನೂ ೩೦ ವರ್ಷ ಹೋದರು ರಾಹುಲ್ ಗಾಂಧಿ, ಕಾಂಗ್ರೆಸ್ ಗೆ ಯಂಗ್ ಮ್ಯಾನ್‌ರಾಹುಲ್ ಗಾಂಧಿ ದೇಶಕ್ಕೇ ಕಳಂಕಆದರೂ ಬಿಜೆಪಿಗೆ ಒಳ್ಳೆಯದಾಗುತ್ತಿದೆ ಅವರು ಹಾದು ಹೋದ ಜಾಗದಲ್ಲೆಲ್ಲ ಬಿಜೆಪಿ ಗೆಲ್ಲತ್ತೆ
ರಾಹುಲ್ ಗಾಂಧಿಯವರಿಗೆ ದಯವಿಟ್ಟು ಮದುವೆ ಮಾಡಿಆಗಲಾದ್ರು ಹುಚ್ಚು ಬಿಡಬಹುದು ಎಂದು ಲೇವ ಡಿ ಮಾಡಿದರು
ಮೇರಾ ನಾಮ್ ಜೋಕರ್ ಸಿನಿಮಾ ರಿಲೀಸ್ ಆದ ದಿನವೇ ರಾಹುಲ್ ಗಾಂಧಿ ಹುಟ್ಟಿದ್ದು ಹಾಗಾಗಿ ರಾಹುಲ್ ಗಾಂಧಿ ಜೋಕರ್ ಆಗ್ಬಿಟ್ಟಿದ್ದಾರೆ
ದೇಶ ಒಡೆಯುವ ಕೆಲಸಕ್ಕೆ ಈಗ ಅವಕಾಶವೇ ಸಿಕ್ತಿಲ್ಲಅಜಿತ್ ದೋವಲ್ ಅವರನ್ನೂ ವಿರೋಧ ಮಾಡ್ತಿದಾರೆದುಷ್ಕೃತ್ಯ ನಡೆಯಲು ಅಜಿತ್ ದೋವಲ್ ಬಿಡ್ತಿಲ್ಲ. ಹಾಗಾಗಿ ಅವರನ್ನು ವಿರೋಧ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಸ್ ಪ್ರಕಾಶ್ ಉಪಸ್ಥಿತರಿದ್ದರು

























