Home ಜಿಲ್ಲೆ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ

ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ

ಚನ್ನಮ್ಮನ ಕಿತ್ತೂರು-೨೭ ಬ್ರಿಟಿಷರ ವಿರುದ್ಧ ಯುದ್ದದಲ್ಲಿ ಅವಸ್ಮರಣೀಯ ವಿಜಯ ಸಾಧಿಸಿದ ಕಿತ್ತೂರು ಕಲಿಗಳ ನೆನಪಿಗಾಗಿ ಕಿತ್ತೂರು ಉತ್ಸವ ಆಚರಣೆ ಸಿದ್ಧತೆ ಕುರಿತು ಚರ್ಚಿಸಲು ನಾಳೆ ದಿ. ೨೮ ರಂದು ಮುಂಜಾನೆ ೧೧-೦೦ ಗಂಟೆಗೆ ರಾಣಿಚನ್ನಮ್ಮ ಸ್ಮಾರಕ ಭವನದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದ್ದು. ಶಾಸಕ ಬಾಬಾಸಾಹೇಬ ಪಾಟೀಲ ನೇತೃತ್ವ ವಹಿಸಿಕೊಳ್ಳುವರು.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸಭೆ ಜರುಗುವುದು. ಮುಖ್ಯ ಅಥಿತಿಗಳಾಗಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಸೇರಿದಂತೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಇರುವರು.


ವಿವಿಧ ಸಂಘ-ಸAಸ್ಥೆ, ಕಿತ್ತೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು, ಜನಪ್ರತಿನಿಧಿಗಳು, ಸರ್ಕಾರದ ನಾಮನಿರ್ದೇಶಿತ ಸದಸ್ಯರು, ಪಪಂ ಅಧ್ಯಕ್ಷ, ಸರ್ವಸದಸ್ಯರು, ತಾಪಂ, ಗ್ರಾಪಂ ಸೇರಿದಂತೆ ಸಾರ್ವಜನಿಕರು ಭಾಗಿಯಾಗಿ ಉತ್ಸವದ ರೂಪರೇಷನ ಕುರಿತು ಸಲಹೆ ಸೂಚನೆಗಳನ್ನು ನೀಡಬಹುದೆಂದು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.