Home ಜಿಲ್ಲೆ ಬೆಂಗಳೂರು ಬಿಡದಿ ಟೌನ್ ಶಿಪ್‌ಗಾಗಿ ಬಲವಂತದಿಂದ ಜಮೀನು ಪಡೆಯುವುದಿಲ್ಲ

ಬಿಡದಿ ಟೌನ್ ಶಿಪ್‌ಗಾಗಿ ಬಲವಂತದಿಂದ ಜಮೀನು ಪಡೆಯುವುದಿಲ್ಲ

ಬೆಂಗಳೂರು, ಸೆ. ೨೭: ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರಿಂದ ಬಲವಂತವಾಗಿ ಜಮೀನು ಪಡೆಯುವ ಪ್ರಶ್ನೆಯೇ ಇಲ್ಲ ರೈತರು ರಸ್ತೆ ತಡೆ ಚಳುವಳಿ ನಡೆಸುವುದು ಬೇಡ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾರು ಜಮೀನು ಕೊಡಬೇಡಿ ಎಂದು ಹೇಳುತ್ತಿದ್ದೇನೆ.ಇಷ್ಟ ಇದ್ದವರೇ ಕೊಡುತ್ತಾರೆ,ಇಲ್ಲದಿದ್ದರೆ ಇರಲಿ.ಬದುಕಬೇಕು,ದುಡ್ಡು ಬೇಕು ಎಂದವರು ಕೊಡುತ್ತಾರೆ, ಬೇಡವಾದವರು ಬಿಡುತ್ತಾರೆ. ನನಗೆ ಪ್ರತಿಷ್ಠೆ ಇಲ್ಲ.ಕುಮಾರಸ್ವಾಮಿ ಯೋಜನೆಯನ್ನು ಮುಂದುವರೆಸುತ್ತಿದ್ದೇನೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದರು.


ವಿಟಿಯು ಅನುದಾನ :
ವಿಟಿಯುಗೆ ಅನುದಾನ ಕೊಡಲು ಪತ್ರ ಬರೆದಿರುವ ವಿಚಾರವನ್ನು ಪರಿಶೀಲಿಸುತ್ತಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.


ವಿಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ರಾಜಕೀಯ ಪ್ರೇರಿತ ಹೋರಾಟ ಎಂದು ಟೀಕಿಸಿರುವ ಕುರಿತು ಸಿಎಂ ಪ್ರತಿಕ್ರಿಯಿಸಿ,ನಾವು ಏನು ಹೇಳಿದ್ದೇವೋ ಅದನ್ನೇ ಚುನಾವಣಾ ಆಯೋಗದವರೇ ಹೇಳಿದ್ದಾರೆ.ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಇಬ್ಬರು ಚುನಾವಣಾ ಆಯೋಗದ ಸದಸ್ಯರು ಹೇಳಿದ್ದಾರೆ.ಪ್ರಜಾಪ್ರಭುತ್ವ ಅಂದರೆ ಬಹುಮತ. ಇಬ್ಬರೂ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಥ್ಯಾಪೆಹಾಕಿ ಹೆದರಿಸಿ ಕುಳ್ಳಿರಿಸಿದ್ದಾರೆ ಎಂದು ದೂರಿದರು.


ಎಇಇ ಕಾಣೆಯಾಗಿರುವ ಪ್ರಕರಣ :
ಎಇಇ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಈ ಹಿಂದೆಯೂ ಅವನು ಇದೇ ರೀತಿ ಹೋಗಿದ್ದ, ಕೊನೆಯ ಬಾರಿ ಅಜ್ಮೀನಿಂದ ಪೊಲೀಸರು ಕರೆದುಕೊಂಡು ಬಂದಿದ್ದರು. ಕೆಲಸದ ವೀಡಿಯೋ ಮಾಡಬೇಕು ಎಂಬ ಕಾನೂನಿಗೆ ಅವನು ಸಹಕಾರ ನೀಡಿರಲಿಲ್ಲ.ಆಫೀಸರ್ ಗಳು ಕೇಳುತ್ತಿದ್ದಾರೆ. ನಾಯಕ್ ಎಂಬುವವರು ಗದಗನಲ್ಲಿ ಎರಡು ಮೂರು ಬಾರಿ ದೂರು ನೀಡಿದ್ದಾರೆ. ಸೈಟ್ಗಳನ್ನು ಭೇಟಿ ಮಾಡುತ್ತಿರಲಿಲ್ಲ. ಸಾಧ್ಯವಾದಷ್ಟು ಬೇಗ ಅವನನ್ನು ಪತ್ತೆ ಮಾಡುತ್ತೇವೆ ಎಂದು ಹೇಳಿದರು

ದೆಹಲಿ ಪ್ರವಾಸ ಮತ್ತು ಸಿಡಬ್ಲ್ಯುಸಿ ಸಭೆ :
ನಾಳೆ ದೆಹಲಿಗೆ ತೆರಳುತ್ತಿರುವ ಕುರಿತು ಮಾತನಾಡಿದ ಅವರು,ವೋಟ್ ಚೋರಿ ವಿಚಾರವಾಗಿ ಸಿಡಬ್ಲ್ಯುಸಿ ಸಭೆ ಕರೆಯಲಾಗಿದೆ. ಅದರಲ್ಲಿ ನಮ್ಮ ರೂಪರೇಖೆ ಏನು ಎಂಬುದರ ಬಗ್ಗೆ ಚರ್ಚಿಸಲಾಗುವುದು. ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ವೋಟ್ ಚೋರಿ ಬಗ್ಗೆ ಹೇಳಿದ್ದಾರೆ. ಅವೆಲ್ಲವೂ ಸತ್ಯ. ಯಾವ ರೀತಿಯಲ್ಲಿ ಮತಗಳ್ಳತನವಾಗಿದೆ, ಚುನಾವಣೆಯಲ್ಲಿ ಅಕ್ರಮ ನಡೆದ ಬಗ್ಗೆ ಚರ್ಚಿಸಲಾಗುವುದು. ತದನಂತರ ಸರ್ವಪಕ್ಷ ಸಭೆ ಕೂಡ ಇದೆ. ವಿರೋಧ ಪಕ್ಷಗಳನ್ನು ದೆಹಲಿಗೆ ಕರೆದಿದ್ದೇವೆ. ಸರ್ವಪಕ್ಷ ನಿಯೋಗ ಕೇಂದ್ರ ಸರ್ಕಾರವನ್ನು ಭೇಟಿ ಮಾಡಲಿದೆ” ಎಂದು ತಿಳಿಸಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ :

ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಯಾಗಿದೆ.ಹಿರಿಯ ಶಾಸಕರು ಮತ್ತು ಹಿರಿಯ ಕಾರ್ಯಕರ್ತರಿಗೆ ಸ್ಥಾನ ನೀಡಬೇಕಿದೆ. ಎಲ್ಲವೂ ದೆಹಲಿಗೆ ಹೋದಾಗ ಚರ್ಚೆಯಾಗುತ್ತದೆ.