Home ಜಿಲ್ಲೆ ಭಕ್ತಿಗೀತೆಗಳ ಮೂಲಕ ಗಣೇಶ ವಿಸರ್ಜನೆ

ಭಕ್ತಿಗೀತೆಗಳ ಮೂಲಕ ಗಣೇಶ ವಿಸರ್ಜನೆ

ಲಕ್ಷೆ÷್ಮÃಶ್ವರ,ಸೆ೨೭: ಪಟ್ಟಣದಲ್ಲಿ ಗೋಸಾವಿ ಯುವಕ ಮಂಡಳದ ವತಿಯಿಂದ ಗಣೇಶ ವಿಸರ್ಜನೆ ಕಾರ್ಯಕ್ರಮವನ್ನು ಧಾರ್ಮಿಕ ಭಕ್ತಿಗೀತೆಗಳೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು.


ಗಣೇಶ ವಿಸರ್ಜನೆ ಅಂಗವಾಗಿ ಮಧ್ಯಪ್ರದೇಶದ ಜಬಲಪುರದ ಶಂಕರ ಅಘೋರಿ ತಂಡದಿAದ ಅದ್ಭುತ ನೃತ್ಯ ಹಾಗೂ ಸಾಹಸ ಪ್ರದರ್ಶನ ನಡೆಯಿತು. ವಿಶೇಷವಾಗಿ ಬೆಂಕಿಯ ಪ್ರದರ್ಶನ ಸೇರಿದಂತೆ ವಿವಿಧ ಸಾಹಸಮಯ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.


ಭಕ್ತಿಗೀತೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ಗಣೇಶ ವಿಸರ್ಜನೆ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವು ಸಾಂಸ್ಕöÈತಿಕ ಹಾಗೂ ಧಾರ್ಮಿಕ ವಾತಾವರಣದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಬಾಳಪ್ಪ ಗೋಸಾವಿ, ಹರೀಶ ಗೋಸಾವಿ, ವಾಸು ಗೋಸಾವಿ, ನಿಖಿಲ ಗೋಸಾವಿ, ವೆಂಕಟೇಶ ಗೋಸಾವಿ, ಗೋವಿಂದ ಗೋಸಾವಿ ಸೇರಿದಂತೆ ಗಣೇಶ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು.