Home ಜಿಲ್ಲೆ ೪ಲಕ್ಷ ಟನ್ ಕಬ್ಬು ಅರೆಯುವ ಗುರಿ

೪ಲಕ್ಷ ಟನ್ ಕಬ್ಬು ಅರೆಯುವ ಗುರಿ


ಚನ್ನಮ್ಮನ ಕಿತ್ತೂರು,ಸೆ.೨೭: ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿಯೇ ನಂ.೧ ಕಾರ್ಖಾನೆ. ದಕ್ಷಿಣ ಭಾರತದಲ್ಲಿಯೇ ಹೆಚ್ಚಿಗೆ ಸಕ್ಕರೆ ಉತ್ಪಾದನೆ ಮಾಡಿದ ಕಾರ್ಖಾನೆಯಾಗಿದೆ. ಎಂದು ಕಾರ್ಖಾನೆ ಅಧ್ಯಕ್ಷ ಬಸವರಾಜ ಬಾಳೇಕುಂದರಗಿ ಹೇಳಿದರು.


ಸಮೀಪದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಸಿದ್ದಸಮುದ್ರ ಮಲ್ಲಮ್ಮ ಬೆಳವಡಿ ಬೈಲಹೊಂಗಲ ಕಾರ್ಖಾನೆ ಆವರಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಖಾನೆ ಕಳೆದವರ್ಷ ಕಬ್ಬು ಇಳುವರಿಯೊಂದಿಗೆ ಸಕ್ಕರೆ ಉತ್ಪಾದನೆ ಹೆಚ್ಚಾಗಿತ್ತು. ಈ ಸಲ ಇನ್ನೂ ಸಕ್ಕರೆ ಉತ್ಪಾದನೆ ಹೆಚ್ಚುಮಾಡಿ ೨೦೨೬-೨೭ನೇ ಸಾಲಿನ ಕಬ್ಬು ಅರೆಯುವ ಮುಂಗಾರಿ ಹಂಗಾಮನ್ನು ಆದಷ್ಟೂ ಬೇಗನೇ ಕಾರ್ಖಾನೆ ಪ್ರಾರಂಭಿಸಿ ಕನಿಷ್ಠ ೪ ಲಕ್ಷ ಟನ್ ಕಬ್ಬು ಅರೆದು ಶೇಕಡಾ ೧೧.೫೦ ರಂತೆ ಸಕ್ಕರೆ ಉತ್ಪಾದಿಸುವ ಗುರಿ ನಮ್ಮದಿದೆ. ಈಗಾಗಲೇ ಹಂಗಾಮಿನ ಪೂರ್ವ ತಯಾರಿಯಾಗಿ ಯಂತ್ರೋಪಕರಣಗಳನ್ನು ದುರಸ್ತಿ, ವಾಹನ, ಗ್ಯಾಂಗಿಗೆ ಮುಂಗಡವಾಗಿ ಹಣ ನೀಡಿ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಕಾರ್ಖಾನೆಗೆ ಬೇಕಾದ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ.

ಕಾರ್ಖಾನೆಯಿಂದ ಕೆಎಲ್‌ಪಿಡಿ ಇಥನಾಲ್ ಘಟಕ ಸ್ಥಾಪಿಸಿ ಕಬ್ಬು ಅರೆಯುವ ಸಾಮರ್ಥ್ಯ ೪೫೦೦ ಟಿಸಿಡಿ ಸಾಮರ್ಥ್ಯಕ್ಕೆ ಕೋಜನರಲ್ ಘಟಕ ೧೨ ಮೇಗಾವ್ಯಾಟ್ ಸಾಮರ್ಥ್ಯವನ್ನು ಇನ್ನೂ ಹೆಚ್ಚಿನ ವಿಸ್ತರಣೆ ಮಾಡಲಾಗುವುದು. ಆದ್ದರಿಂದ ಆಡಳಿತ ಮಂಡಳಿ, ಸಿಬ್ಬಂದಿ, ರೈತರ ಸಹಕಾರದೊಂದಿಗೆ ಈ ಕಾರ್ಯ ಸಾಧ್ಯವಾಗುವುದು ಇದರ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸೋಣ ಎಂದರು.
ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ನಿರ್ದೇಶಕ ಮಹಾಂತೇಶ ಮತ್ತಿಕೊಪ್ಪ ಕಾರ್ಖಾನೆ ಆಗುಹೋಗುಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕಾರ್ಖಾನೆ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಅಶೋಕ ಬೊಮ್ಮನವರ ವರದಿ ಮಂಡಿಸಿ ಕಾರ್ಖಾನೆ ಅಭಿವೃದ್ದಿ ಕುರಿತು ಮಾತನಾಡಿದರು.


ಕಾರ್ಖಾನೆ ಪ್ರಗತಿ ಮತ್ತು ನ್ಯೂನ್ಯತೆ ಕುರಿತು ಮಾತಿನ ಚಕಮಕಿಗಳು ನಡೆದವು. ನಿರ್ದೇಶಕ ರಾಚಪ್ಪ ಮಟ್ಟಿ, ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಪ್ರಕಾಶ ಮೂಗಬಸವ ರೈತರಾದ ಮಹಾಂತೇಶ ಕಮತ, ಮಲ್ಲಿಕಾರ್ಜುನ ಹುಂಬಿ, ಇನ್ನೂ ಅನೇಕ ರೈತರು ಸೇರಿ ಕಾರ್ಖಾನೆ ಕೆಲ ವಿಚಾರಗಳನ್ನು ಕುರಿತು ಕಳವಳ ವ್ಯಕ್ತಪಡಿಸುತ್ತಾ ದುಂದು ವೆಚ್ಚ ಕಡಿಮೆ ಮಾಡಿ ಕಾರ್ಖಾನೆ ಏಳಿಗೆ ಬಯಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಿರ್ದೇಶಕರುಗಳಾದ ಉಮೇಶ ಬಾಳಿ, ರಾಚಪ್ಪ ಮಟ್ಟಿ, ಪ್ರಕಾಶ ಮೂಗಬಸವ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಅನಿತಾ ಮೆಟ್ಟಗುಡ್ಡ, ಕಸ್ತೂರಿ ಸೋಮನಟ್ಟಿ, ಅದೃಶ್ಯಪ್ಪ ಕೊಟಬಾಗಿ, ಅಶೋಕ ಬಾಳೇಕುಂದರಗಿ, ರಾಮಚಂದ್ರ ಕಕ್ಕಯ್ಯನವರ, ಸಣ್ಣಭೀಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಶ್ರೀಶೈಲ್ ಶರಪ್ಪನವರ, ಬಸವರಾಜ ಬೋಳಗೌಡರ, ಶ್ರೀಶೈಲ ಮೂಗಬಸವ, ಸಿದ್ದನಗೌಡ ಪಾಟೀಲ, ಮಹಾಂತೇಶ ತುರಮರಿ, ಶಿವಾನಂದ ದೂತಗುಂಡಿ, ಮಲ್ಲಪ್ಪ ಅಷ್ಟಗಿ ಸ್ವಾಗತಿಸಿದರು, ಬಸಯ್ಯಸ್ವಾಮಿ ವಿರಕ್ತಮಠ ಸಂಗೀತ ಸೇವೆ, ಬಾಬು ಖಂಡೋಜಿ ರೈತಗೀತೆ ಹಾಡಿದರು. ಸರ್ವ ಸಿಬ್ಬಂದಿ, ರೈತರರಿದ್ದರು. ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಹನಮಂತಗೌಡ ಪಾಟೀಲ, ಬಿಗಿಬಂದೋಬಸ್ತ್ ಏರ್ಪಡಿಸಿದ್ದರು. ಇದೇ ವೇಳೆ ನಾಮನಿರ್ದೇಶಿತ ಸದಸ್ಯ ಮಹಾಂತೇಶ ತುರಮರಿ ಅವರನ್ನು ಸನ್ಮಾನಿಸಲಾಯಿತು.