
ಕಲಬುರಗಿ,ಆ.24-ರೈತರಿಗೆ ಸಿಗಬೇಕಾಗಿರುವ ಯೂರಿಯ ರಸಗೊಬ್ಬರ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಶ್ರೀರಾಮ್ ಸೇನೆ ಕಾರ್ಯಕರ್ತರು ಬಯಲು ಮಾಡಿದ್ದಾರೆ.
ನಗರದ ಕಪನೂರ್ ಇಂಡಸ್ಟ್ರಿಯಲ್ ಏರಿಯಾದ ದಾಲ್ಮಿಲ್ ಗೋಡಾನ್ ಒಂದರಲ್ಲಿ ಸಬ್ಸಿಡಿ ದರದಲ್ಲಿ ದೊರೆಯುವ ಕೇಂದ್ರ ಸರ್ಕಾರದ ಯೋಜನೆಯ ಯೂರಿಯಾ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿರುವುದನ್ನು ಬಯಲಿಗೆಳೆಯಲಾಗಿದೆ. ಸಬ್ಸಿಡಿ ದರದಲ್ಲಿ ದೊರೆಯುವ ಯೂರಿಯಾ ಗೊಬ್ಬರವನ್ನು ಚೀಲಗಳಿಂದ ಬೇರೆ ಚೀಲಗಳಿಗೆ ತುಂಬಿ ಅಕ್ರಮವಾಗಿ ಒಂದು ಚೀಲವನ್ನು 500 ರಿಂದ 600 ರೂಪಾಯಿಗೆ ಕಳ್ಳ ಸಾಗಾಟ ಮಾಡುತ್ತಿದ್ದ ಗೋಡನ್ ಮೇಲೆ ದಾಳಿ ನಡಿಸಿ ಸಂಬಂಧ ಪಟ್ಟ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಿ ಕೃಷಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗೋಡನ್ ಸಿಜ್ ಮಾಡಿ ಸಬ್ ಆರ್ಭನ್ ಪೆÇಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಿಸಲಾಗಿದೆ. ಅನ್ನದಾತನಿಗೆ ಸಿಗಬೆಕಾದ ರಸಗೋಬ್ಬರ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಅನೇಕ ಗೋದಾಮುಗಳು ಇರುವ ಅನುಮಾನ ಇದ್ದು ಅವುಗಳನ್ನು ಪತ್ತೆ ಹಚ್ಚಿ ಕಾಳದಂದೆಕೋರನ್ನು ಶಿಕ್ಷೆಗೊಳಪಡಿಸಬೆಕೇಂದು ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ ಸ್ವಾಧಿ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.






























