
ಔರಾದ್ : ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಾತ್ರಿ ಸಮಯದಲ್ಲಿ ಮನೆ, ಅಂಗಡಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಮುಂದಾಗುತ್ತಿರುವ ಕಳ್ಳರು, ತಮ್ಮ ಕೈಚಳಕ ತೋರಿಸುತ್ತಿರುವ ಘಟನೆಗಳು ಜನರನ್ನು ಬೆಚ್ಚಿಬೀಳಿಸಿವೆ.
ಪಟ್ಟಣದ ಎಪಿಎಂಸಿ ವೃತ್ತದಲ್ಲಿನ ಬೀದರ್-ಔರಾದ ಹೆದ್ದಾರಿಯಲ್ಲಿ ಕಳ್ಳರು ನಾಲ್ಕೈದು ಅಂಗಡಿಗಳ ಶಟರ್ ಎತ್ತಿ ಬೀಗ ಮುರಿದು ತಮ್ಮ ಕೈಚಳಕ ತೋರಿಸಿದ್ದಾರೆ, ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಆದರು ಸಹ ರಾಜಾರೋಷವಾಗಿ ಕೃತ್ಯ ನಡೆಸಿರುವುದು ಅನುಮಾನ ಮೂಡುವಂತೆ ಮಾಡಿದೆ.
ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಪೆÇಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ರಾತ್ರಿ ವೇಳೆ ಪ್ರಮುಖ ರಸ್ತೆ, ಮಾರುಕಟ್ಟೆ ಹಾಗೂ ವಸತಿ ಪ್ರದೇಶಗಳಲ್ಲಿ ಪೆÇಲೀಸ್ ಗಸ್ತು ಹೆಚ್ಚಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ವಹಿಸಿ, ಹಳೆಯ ಕಳ್ಳತನ ಪ್ರಕರಣಗಳ ಆರೋಪಿಗಳನ್ನು ಪರಿಶೀಲಿಸುವ ಮೂಲಕ ಕಳ್ಳರ ಜಾಲವನ್ನು ಭೇದಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳ್ಳರ ಕರಾಮತ್ತಿಗೆ ಶಾಕ್ ಆಗಿರುವ ಸಾರ್ವಜನಿಕರು, ಇನ್ನು ಮುಂದೆ ತಮ್ಮ ಆಸ್ತಿ-ಪಾಸ್ತಿಗೆ ಹೆಚ್ಚಿನ ಭದ್ರತೆ ಒದಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‍ಐ ರೇಣುಕಾ ಭಾಲೆಕರ್ ಸೇರಿದಂತೆ ಪೆÇಲೀಸ್ ಪಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೈಚಳಕ ತೋರಿದ ಕಳ್ಳರಿಗೆ ಬಲೆ ಬೀಸಿದ್ದಾರೆ.






























