Home ಜಿಲ್ಲೆ ನೆಲ, ಜಲ ಹಾಗೂ ಅರಣ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ: ಎಸ್.ವಿ. ಕಲ್ಮಠ

ನೆಲ, ಜಲ ಹಾಗೂ ಅರಣ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ: ಎಸ್.ವಿ. ಕಲ್ಮಠ

ಬೀದರ್: ಪ್ರಕೃತಿಯು ನಮಗೆ ಉಚಿತವಾಗಿ ನೀಡಿರುವ ನೀರು, ಗಾಳಿ, ಆಹಾರ ಹಾಗೂ ಅರಣ್ಯ ಸಂಪತ್ತನ್ನು ಮಿತವಾಗಿ ಬಳಸಿಕೊಂಡು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಪರಿಸರ ತಜ್ಞ ಪೆÇ್ರ. ಎಸ್.ವಿ. ಕಲ್ಮಠ ಹೇಳಿದರು.

ಜೈಹಿಂದ್ ಹಿರಿಯ ನಾಗರಿಕರ ಸಂಘದ ವತಿಯಿಂದ ಆಯೋಜಿಸಿದ್ದ ‘ರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಗಿಡ-ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಿ, ಅವುಗಳ ಪಾಲನೆ ಹಾಗೂ ಪೆÇೀಷಣೆ ಮಾಡುವ ಮೂಲಕ ಪರಿಸರ ಸಮತೋಲನ ಕಾಪಾಡಬಹುದು. ಇದರಿಂದ ಉತ್ತಮ ಮಳೆಯಾಗಿ ಕೃಷಿ ಸಮೃದ್ಧಿ ಹಾಗೂ ಸುಖ-ಸಮೃದ್ಧಿ ಕಾಣಲು ಸಾಧ್ಯವಾಗುತ್ತದೆ ಎಂದರು.

ಸಂಘದ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಒಂಬತ್ತು ವರ್ಷಗಳಿಂದ ಜೈಹಿಂದ್ ಹಿರಿಯ ನಾಗರಿಕರ ಸಂಘವು ನಿರಂತರವಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ಸಮಾಜದ ವಿವಿಧ ವರ್ಗದ ಜನರಿಗಾಗಿ ಹಲವು ಜಾಗೃತಿ ಅಭಿಯಾನಗಳನ್ನು ಆಯೋಜಿಸುವ ಯೋಜನೆ ಹೊಂದಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪೆÇ್ರ. ವಿಜಯಕುಮಾರ್ ಸೂರ್ಯಾನ್ ಅವರ 75ನೇ ಜನ್ಮದಿನಾಚರಣೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಕುಲಕರ್ಣಿ, 70 ವರ್ಷಗಳ ಆಯುಷ್ಯ ದಾಟಿದ ನಂತರವೂ ಪ್ರತಿವರ್ಷ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಗಳನ್ನು ಆಚರಿಸುವುದರಿಂದ ಜೀವನೋತ್ಸಾಹ ಮತ್ತು ಆತ್ಮಬಲ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಬಳಿಕ ಅವರು ಸ್ವರಚಿತ ಗೀತೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಮ್ಯಾಥು, ಸುಧಾಕರ ಗಾದಗೆ, ಎಸ್.ಬಿ. ಬಿರಾದಾರ, ಡಾ. ಕಲ್ಪನಾ ದೇಶಪಾಂಡೆ ಹಾಗೂ ಪ್ರಕಾಶ್ ಕುಲಕರ್ಣಿ ಮಾತನಾಡಿದರು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸ್ನೇಹಾ ವೈಭವ್ ಸೂರ್ಯಾನ್ ಸ್ವಾಗತಿಸಿದರು. ಗಂಗಪ್ಪ ಸಾವಳೆ ವಂದಿಸಿದರು. ಹಿರಿಯ ಉದ್ಯಮಿ ರಾಮಕೃಷ್ಣ ಮುನಿಗ್ಯಾಲ ಅಧ್ಯಕ್ಷತೆ ವಹಿಸಿದ್ದರು. ಹುಟ್ಟುಹಬ್ಬದ ಅಂಗವಾಗಿ ಆಬೆದ್ ಅಲಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಾಜೇಂದ್ರ ಸಿಂಗ್ ಪವಾರ, ರಾಮಕೃಷ್ಣ ಸಾಳೆ, ಶಿವಪುತ್ರ ಮೆಟಗೆ, ಶಂಕರ್ ಚಿದ್ರಿ, ಮಚೇಂದ್ರ ಗೊರಖನಾಥ, ಬಸವರಾಜ್ ಘುಳೆ, ಡಾ. ಸುಭಾಷ್ ಪೆÇಲಾ, ಎಸ್.ಆರ್. ಬಂಡಿ, ಅಶೋಕ್ ಬೂದಿಹಾಳ್, ಎಂ.ಜಿ. ದೇಶಪಾಂಡೆ, ಮಂದಾಕಿನಿ, ವಿಜಯಲಕ್ಷ್ಮಿ, ಎಂ.ಎಂ. ಕುಲಕರ್ಣಿ, ಉಷಾ, ರಾಜೇಶ್ವರಿ, ಶಿವದಾಸ್ ಸ್ವಾಮಿ, ಸಿಮರನ್, ರಾಮಚಂದ್ರ ಗಜರೆ, ವಿನಾಯಕ್ ದೇಶಪಾಂಡೆ, ಶ್ರೀಕಾಂತ್, ರತಿನ್ ಕಮಲ್, ಅನುಸೂಯ ಹಾಗೂ ರಾಮಚಂದ್ರ ಮುಧೋಳಕರ ಸೇರಿದಂತೆ ಅನೇಕ ಬಂಧು-ಬಳಗದವರು ಉಪಸ್ಥಿತರಿದ್ದರು.