Home ಜಿಲ್ಲೆ ಬೆಂಗಳೂರು ಪ್ರಜಾ ಆಂದೋಲನ ಸಭೆ: ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ

ಪ್ರಜಾ ಆಂದೋಲನ ಸಭೆ: ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 40;

ಕೆಜಿಎಫ್, ಸೆ. ೨೭: ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಜಾ ಆಂದೋಲನ ಸಭೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ದೊರೆಯದೆ, ಬೆರಳೆಣಿಕೆಯಷ್ಟು ನಾಗರಿಕರು ಮಾತ್ರ ಆಗಮಿಸಿದ ಹಿನ್ನೆಲೆ ವಿವಿಧ ಇಲಾಖೆಗಳ ಅಧಿಕಾರಿಗಳು ದೂರುದಾರರಿಂದ ಅಹವಾಲು ಸ್ವೀಕರಿಸಲು ಕಾದು ಕುಳಿತುಕೊಳ್ಳಲಾಯಿತು.’
ಸಭೆಯ ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಹಾಗೂ ಪ್ರಚಾರದ ಕೊರತೆಯೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದಿರಲು ಪ್ರಮುಖ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದವು.


ತಹಲ್ದಾರ ಕಚೇರಿ ಆವರಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ಪ್ರತ್ಯೇಕ ಟೇಬಲ್ಗಳನ್ನು ಹಾಕಿಕೊಂಡು ಕುಳಿತಿದ್ದರು.ಆದರೆ, ಅಹವಾಲು (ದೂರು) ನೀಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದ ಹಿನ್ನೆಲೆ ಹಲವಾರು ಅಧಿಕಾರಿಗಳು ಮೊಬೈಲ್ಗಳಲ್ಲಿ ಮಾತನಾಡುತ್ತಾ ಸಮಯ ಕಳೆಯುವ ದೃಶ್ಯ ಕಂಡುಬಂತು.


ಸರ್ಕಾರಿ ಕಚೇರಿಗಳಿಗೆ ರಜೆ ಇರುವ ೪ನೇ ಶನಿವಾರ ಕಾರಣದಿಂದ ಅಧಿಕಾರಿಗಳಲ್ಲಿಯೂ ಸಭೆ ಕುರಿತಾಗಿ ಆರಂಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಕೆಲ ಅಧಿಕಾರಿಗಳು ತಮ್ಮ ವೈಯಕ್ತಿಕ ಕೆಲಸಗಳನ್ನು ಮುಗಿಸಲು ನಿರೀಕ್ಷೆಯಲ್ಲಿತ್ತು, ಆದರೆ, ತಾಲ್ಲೂಕು ಆಡಳಿತದಿಂದ ಸಭೆಗೆ ಕಡ್ಡಾಯವಾಗಿ ಹಾಜರಾಗಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲು ವ್ಯವಸ್ಥೆ ಮಾಡಿಕೊಳ್ಳಲು ಸೂಚನೆ ಬಂದ ಕಾರಣ, ಅಧಿಕಾರಿಗಳು ಕಚೇರಿಗೆ ಆಗಮಿಸಿದರು.


ಸಭೆಯ ಕುರಿತು ಮುಂಚಿತವಾಗಿ ಸಾರ್ವಜನಿಕರಿಗೆ ವ್ಯಾಪಕವಾಗಿ ಮಾಹಿತಿ ನೀಡದ ಕಾರಣ, ಪ್ರಜಾ ಆಂದೋಲನದ ಉದ್ದೇಶಕ್ಕೆ ತಕ್ಕಂತೆ ಜನಸ್ಪಂದನೆ ದೊರೆಯಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ವಿಭಾಗಗಳ ಮುಂದೆ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಸಿದ್ಧರಾಗಿದ್ದರು.


ಆದರೆ ಬಹುತೇಕ ಸಮಯ ದೂರುದಾರರು ಇಲ್ಲದ ಕಾರಣ ಅಧಿಕಾರಿಗಳು ಪರಸ್ಪರ ಚರ್ಚೆ ನಡೆಸುತ್ತಾ ಹಾಗೂ ಮೊಬೈಲ್ಗಳಲ್ಲಿ ಮಾತನಾಡುತ್ತಾ ಸಮಯ ಕಳೆಯಬೇಕಾಯಿತು.


ಇದರ ಮಧ್ಯೆ, ಎಂದಿನಂತೆ ತಮ್ಮ ವೈಯಕ್ತಿಕ ಹಾಗು ಕಚೇರಿ ಕೆಲಸಗಳಿಗಾಗಿ ತಾಲ್ಲೂಕು ಕಚೇರಿಗೆ ಆಗಮಿಸಿದ್ದ ಕೆಲ ನಾಗರಿಕರು ಮಾತ್ರ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಒಟ್ಟಾರೆ, ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಸಿದ್ಧರಾಗಿದ್ದರೂ, ಸಾರ್ವಜನಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದ ಕಾರಣ ಪ್ರಜಾ ಆಂದೋಲನ ಸಭೆ ನಿರೀಕ್ಷಿತ ಮಟ್ಟದಲ್ಲಿ ನಡೆಯದೆ, ಅಧಿಕಾರಿಗಳು ದೂರುದಾರರಿಗಾಗಿ ಕಾಯುವಂತಾದ ದೃಶ್ಯ ಕಂಡುಬಂತು.