
ನವದೆಹಲಿ:ಜು.೨೬- ಎನ್‌ಇಇಟಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ವಿದ್ಯಾರ್ಥಿಗಳ ಸತತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೆ “ಇದು ಕೇವಲ ಆರಂಭವಷ್ಟೇ, ನಮಗೆ ಇನ್ನೂ ಸಾಗಬೇಕಾದ ಹಾದಿ ಸುದೀರ್ಘವಾಗಿದೆ” ಎಂದು ೩೦ ವರ್ಷದ ಯುವ ನಾಯಕ ದೀಪ್ಕೆ ತಮ್ಮ ’ಎಕ್ಸ್’ (ಘಿ) ಖಾತೆಯಲ್ಲಿ ತಿಳಿಸಿದ್ದಾರೆ.
ಕಳೆದ ೩೭ ದಿನಗಳಿಂದ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದ ’ಕಾಕ್ರೋಚ್ ಜನತಾ ಪಾರ್ಟಿ’ ತನ್ನ ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದು, ಸಂಸ್ಥಾಪಕ ಅಭಿಜಿತ್ ದೀಪ್ಕೆ ಈ ಕುರಿತು ವಿಶೇಷ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಜನ್ಮತಾಳಿದ ’ಕಾಕ್ರೋಚ್ ಜನತಾ ಪಾರ್ಟಿ’, ಎನ್‌ಇಇಟಿ ಅಕ್ರಮಗಳ ವಿರುದ್ಧ ದೇಶಾದ್ಯಂತ ಉeಟಿ Z ಯುವಜನತೆಯನ್ನು ಸಂಘಟಿಸಿ ಬೃಹತ್ ಚಳವಳಿಯಾಗಿ ಮಾರ್ಪಟ್ಟಿತ್ತು. ಶಿಕ್ಷಣ ಸಚಿವರ ರಾಜೀನಾಮೆ ಹಾಗೂ ಪ್ರತಿಭಟನಾಕಾರರ ಇತರ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ನಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗಿದೆ.
ತಮ್ಮ ಸಂದೇಶದಲ್ಲಿ ಮಾತನಾಡಿದ ದೀಪ್ಕೆ, “ಕಳೆದ ೩೭ ದಿನಗಳು ಅತ್ಯಂತ ಸವಾಲಿನಿಂದ ಕೂಡಿದ್ದವು. ಜಂತರ್ ಮಂತರ್‌ನಲ್ಲಿ ನಮಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಮಗೆ ಎದುರಾದ ಟೀಕೆಗಳು ಮತ್ತು ಪ್ರಶ್ನೆಗಳು ನಮ್ಮ ಹೋರಾಟವನ್ನು ಇನ್ನಷ್ಟು ದೃಢಗೊಳಿಸಲು ನೆರವಾದವು” ಎಂದು ಹೇಳಿದ್ದಾರೆ.































